More

    ವಿವಾದದ ನಡುವೆಯೂ ಬೇಡಿಕೆ ಹೆಚ್ಚಿಸಿಕೊಂಡ ಪಠಾಣ್; ಬಹುಕೋಟಿ ಮೊತ್ತಕ್ಕೆ ಸೇಲ್ ಆಯ್ತು ಒಟಿಟಿ ಹಕ್ಕು!

    ನವದೆಹಲಿ: ಶಾರುಖ್​ ಖಾನ್​ ಅಭಿನಯದ ‘ಪಠಾಣ್​’ ಚಿತ್ರವು ಜನವರಿಯಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಮಧ್ಯೆ, ಚಿತ್ರದ ಹಾಡೊಂದರಲ್ಲಿ ನಟಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ತೊಟ್ಟಿದ್ದು ವಿವಾದಕ್ಕೆ ಕಾರಣವಾಗಿತ್ತು. ಅಷ್ಟೇ ಅಲ್ಲ, ಸೋಷಿಯಲ್​ ಮೀಡಿಯಾದಲ್ಲಿ ‘ಬಾಯ್ಕಾಟ್ ಪಠಾಣ್’ ಎಂಬ ಅಭಿಯಾನವೂ ನಡೆದಿತ್ತು. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಚಿತ್ರತಂಡ, ಇದೀಗ ದೊಡ್ಡ ಮೊತ್ತಕ್ಕೆ ಪಠಾಣ್ ಸಿನಿಮಾವನ್ನು ಒಟಿಟಿಯೊಂದಕ್ಕೆ ಮಾರಾಟ ಮಾಡಿದೆ.

    ಶಾರುಖ್ ಖಾನ್ ನಟಿಸಿರುವ ಪಠಾಣ್ ಸಿನಿಮಾವನ್ನು ಬರೋಬ್ಬರಿ 250 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಕಾಣುವ ನಿರೀಕ್ಷೆಯಿತ್ತು. ಆದರೆ ಯಾವಾಗ ಬೇಷರಮ್ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿಯಲ್ಲಿ ಕಾಣಿಸಿಕೊಂಡರೋ, ಅಂದಿನಿಂದ ಬಾಯ್ಕಟ್​ ಬಿಸಿ ತಟ್ಟಿತು.

    ಪಠಾಣ್‌ ಸಿನಿಮಾ ಬಾಯ್ಕಟ್ ವಿವಾದ ಕಾವು ಪಡೆದುಕೊಂಡಿರುವಾಗಲೇ ತನ್ನ ಹಕ್ಕುಗಳನ್ನು ಪ್ರಮುಖ ಒಟಿಟಿ ವೇದಿಕೆಯಾದ ಅಮೆಜಾನ್ ಪ್ರೈಮ್​ಗೆ ಮಾರಾಟವಾಗಿದೆ ಎಂದು ವರದಿಯಾಗಿದೆ. ಜನವರಿ 25ರಂದು ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಇದಾಗುತ್ತಿದ್ದಂತೆ ಮುಂದಿನ ಮಾರ್ಚ್ ಅಥವಾ ಏಪ್ರಿಲ್ ಆರಂಭದಲ್ಲಿ ಅಮೆಜಾನ್ ಪ್ರೈಮ್​ನಲ್ಲಿ ಪಠಾಣ್ ಪ್ರದರ್ಶನ ಕಾಣಲಿದೆ ಎಂದು ಅಂದಾಜಿಸಲಾಗಿದೆ. ವರದಿಯ ಪ್ರಕಾರ ಅಮೆಜಾನ್ ಪ್ರೈಮ್ ಬರೋಬ್ಬರಿ 100 ಕೋಟಿ ರೂ. ನೀಡಿ ವಿವಾದಿತ ಸಿನಿಮಾವಾಗಿ ಮಾರ್ಪಟ್ಟಿರುವ ಪಠಾಣ್ ಸಿನಿಮಾವನ್ನು ಖರೀದಿಸಿದೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts