More

    ಬಾಲಿವುಡ್​ನ ಕೆಲ ದಿಗ್ಗಜರಿಗೆ ಪಾಕಿಸ್ತಾನ ಸೇನೆ ಜತೆ ಸಂಬಂಧವಿದೆ

    ನವದೆಹಲಿ: ಬಾಲಿವುಡ್​ನ ನಟ-ನಟಿಯರಿಗೂ ಭೂಗತ ಜಗತ್ತಿನ ಪಾತಕಿಗಳೊಂದಿಗೆ ಸಂಪರ್ಕ ಇರುವುದು ಹಲವು ಬಾರಿ ಸಾಬೀತಾಗಿದೆ. ಆದರೆ, ಈ ಬಾರಿ ಇದಕ್ಕಿಂತ ಹೊರತಾದ ಹಾಗೂ ಗುರುತರವಾದ ಆರೋಪ ಕೇಳಿಬಂದಿದೆ. ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಮತ್ತು ವಕ್ತಾರ ಬೈಜಯಂತ್​ ಜೈ ಪಾಂಡಾ ಅವರು ಬಾಲಿವುಡ್​ನ ದಿಗ್ಗಜ ನಟ-ನಟಿಯರಿಗೂ ಪಾಕಿಸ್ತಾನದ ಸೇನೆಗೂ ನೇರ ನಂಟಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

    ಒಡಿಶಾ ಮೂಲದ ಮಾಜಿ ಸಂಸತ್​ ಸದಸ್ಯ ಬುಧವಾರ ಬೆಳಗ್ಗೆ ಟ್ವೀಟ್​ ಮಾಡಿದ್ದು, ಬಾಲಿವುಡ್​ನ ದಿಗ್ಗಜರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನಿಡುವ ನಿರ್ದಿಷ್ಟವಾದ ಪಾಕಿಸ್ತಾನಿಗಳು ಮತ್ತು ಎನ್​ಆರ್​ಐಗಳ ಜತೆ ನೇರ ವ್ಯವಹಾರಿಕಾ ಒಡನಾಟ ಇದೆ ಎಂದು ದೂರಿದ್ದಾರೆ.

    ಬಾಲಿವುಡ್​ ಮಂದಿ ಸಂಪರ್ಕ ಹೊಂದಿರುವ ಬಹುತೇಕ ಮಂದಿ ಪಾಕಿಸ್ತಾನ ಸೇನೆ, ಪಾಕ್​ನ ಬೇಹುಗಾರಿಕಾ ಸಂಸ್ಥೆ ಐಎಸ್​ಐನೊಂದಿಗೆ ನೇರ ಸಂಪರ್ಕ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶಭಕ್ತರಂತೆ ಪೋಸ್​ ಕೊಡುವ ಬಾಲಿವುಡ್​ ಜನರು ಇಂಥ ಸಂಪರ್ಕಗಳನ್ನು ಕಡಿದುಕೊಳ್ಳುವ ದಿಟ್ಟತನ ತೋರಬೇಕು ಎಂದು ಆಗ್ರಹಿಸಿದ್ದಾರೆ.

    ಇದನ್ನೂ ಓದಿ: ಸೈಬರಾಬಾದ್​ ಪೊಲೀಸ್​ ಆಯುಕ್ತ ವಿಶ್ವನಾಥ ಸಜ್ಜನರ್​ರಿಂದ ಕನ್ನಡಿಗರಲ್ಲಿ ವಿಶೇಷ ಮನವಿ

    ಪ್ರಮುಖವಾಗಿ ಪಾಕ್​ನಲ್ಲಿ ಅಡಗಿಕೊಂಡಿರುವ 1993ರ ಮುಂಬೈ ಸರಣಿ ಸ್ಫೋಟದ ಪ್ರಮುಖ ಸಂಚುಕೋರ ದಾವೂದ್​ ಇಬ್ರಾಹಿಂನನ್ನು ಉದಾಹರಿಸಿರುವ ಅವರು, ಈತನನ್ನು ಬಳಸಿಕೊಂಡು ಐಎಸ್​ಐ ಮುಂಬೈನಲ್ಲಿ ಸರಣಿ ಬಾಂಬ್​ ಸ್ಫೋಟ ನಡೆಸಿತು ಎಂಬುದು ಈಗಾಗಲೆ ಗೊತ್ತಿರುವ ಸಂಗತಿ. ಇಂಥ ವ್ಯಕ್ತಿಯ ಜತೆ ಬಾಲಿವುಡ್​ ಮಂದಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಈ ಭಾವಚಿತ್ರಗಳು ಕೂಡ ಪ್ರಕಟವಾಗಿವೆ. ಯುಎಇಯಲ್ಲಿ ನಡೆಯುವ ಖಾಸಗಿ ಪಾರ್ಟಿಗಳಲ್ಲಿ ಈತನೊಂದಿಗೆ ಅವರೆಲ್ಲರೂ ಕುಣಿದುಕುಪ್ಪಳಿಸುತ್ತಾರೆ ಎಂದು ಹೇಳಿದ್ದಾರೆ.

    ಟೋನಿ ಅಶೈ ಅಲಿಯಾಸ್​ ಅಜೀಸ್​ ಅಶೈ ಎಂಬಾತನ ಇನ್ನೊಂದು ಉದಾಹರಣೆ ಕೊಟ್ಟಿರುವ ಜೈ ಪಾಂಡಾ, ಈ ವ್ಯಕ್ತಿ ಟ್ವಿಟ್ಟರ್​ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ಕಲ್ಲು ತೂರಾಟ ನಡೆಸುವಂತೆ ಮತ್ತು ಬಂದೂಕು ಸೇರಿ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳುವಂತೆ ಸ್ಥಳೀಯ ಯುವಕರನ್ನು ಪ್ರೇರೇಪಿಸುತ್ತಾನೆ. ಆದರೆ, ಈತ ತನ್ನ ಮಗ ಬಿಲಾಲ್​ ಅಶೈನನ್ನು ಲಾಸ್​ ಏಂಜೆಲಿಸ್​ನಲ್ಲಿ ಇರಿಸಿ ಉತ್ತಮ ವಿದ್ಯಾಭ್ಯಾಸ ಕೊಡಿಸಿ ಸ್ನಾತಕೋತ್ತರ ಪದವೀಧರನನ್ನಾಗಿ ಮಾಡಿದ್ದಾನೆ ಎಂದು ವಿವರಿಸಿದ್ದಾರೆ.

    ಅಷ್ಟೇ ಅಲ್ಲ, ಯುಎಇಯಲ್ಲಿ ನೆಲೆಸಿರುವ ಈತ ವಾಸ್ತುಶಿಲ್ಪಿಯಾಗಿದ್ದು, ಬಾಲಿವುಡ್​ನ ದಿಗ್ಗಜ ನಟರ ಸಾಲಿನಲ್ಲಿ ನಿಲ್ಲುವ ಶಾರುಖ್​ ಖಾನ್​ ಅವರು ಯುಎಇನಲ್ಲಿ ಹೊಂದಿರುವ ಅನೇಕ ಕಟ್ಟಡಗಳನ್ನು ವಿನ್ಯಾಸ ಮಾಡಿ, ಕಟ್ಟಿಸಿಕೊಟ್ಟಿದ್ದಾನೆ. ಅಷ್ಟೇ ಅಲ್ಲ, ಶಾರುಖ್​ರ ಪತ್ನಿ ಗೌರಿ ಖಾನ್​ ಅವರ ಹಲವು ಯೋಜನೆಗೊಳಲ್ಲಿ ಈತ ನೇರವಾಗಿ ಪಾಲ್ಗೊಳ್ಳುತ್ತಿದ್ದಾನೆ. ಒಂದೆಡೆ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸೆಗೆ ಪ್ರಚೋದನೆ ನೀಡುವ ಈತ ಇನ್ನೊಂದೆಡೆ ಶಾಂತಿ ಧೂತನ ರೂಪಧರಿಸಿದ್ದಾನೆ. ಇಂಥ ಕಲಾಕಾರರನ್ನು ಗುರುತಿಸಿ ದೂರ ಇಡುವಲ್ಲಿ ನಮ್ಮ ಬಾಲಿವುಡ್​ ಕಲಾಕಾರರ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

    ಶ್ರೀಲಂಕಾ ಕ್ರಿಕೆಟ್​ ಆಟಗಾರ್ತಿ ವೀರಕ್ಕೋಡಿ ವಿದಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts