More

    ಜಯಾ ಬಚ್ಚನ್​ ಬೆನ್ನಿಗೆ ನಿಂತ ಬಾಲಿವುಡ್​ ಮಂದಿ …

    ಮುಂಬೈ: ಇದುವರೆಗೂ ಬಾಲಿವುಡ್​ ಬಗ್ಗೆ ಹಲವರು ಕೆಟ್ಟದಾಗಿ ಮಾತನಾಡಿದ ಸಂದರ್ಭದಲ್ಲಿ ಸುಮ್ಮನಿದ್ದ ಬಹುತೇಕ ನಟ-ನಟಿಯರು ಮತ್ತು ತಂತ್ರಜ್ಱರು, ಇದೀಗ ಜಯಾ ಬಚ್ಚನ್​ ಅವರು ಬಾಲಿವುಡ್​ ಬಗ್ಗೆ ಮಾತನಾಡುತ್ತಿದ್ದಂತೆಯೇ ಸಂತಸ ವ್ಯಕ್ತಪಡಿಸಿದ್ದಾರೆ. ಜಯಾ ಮಾತುಗಳನ್ನು ಅನುಮೋದಿಸಿರುವುದಷ್ಟೇ ಅಲ್ಲ, ಅವರ ಬೆನ್ನಿಗೆ ನಿಂತಿದ್ದಾರೆ ಎನ್ನುವುದು ವಿಶೇಷ.

    ಸಂಸತ್ತಿನಲ್ಲಿ ಮಾತನಾಡುವ ಸಂದಭರ್ದಲ್ಲಿ, ‘ಯಾರೋ ಒಬ್ಬಿಬ್ಬರು ಮಾಡಿರುವ ತಪ್ಪಿಗೆ ಇಡೀ ಚಿತ್ರರಂಗಕ್ಕೆ ಡ್ರಗ್ಸ್​ ಮಾಫಿಯಾದ ನಂಟಿದೆ ದೂಷಿಸುವುದು ತಪ್ಪು …’ ಎಂದು ಬಾಲಿವುಡ್​ನ ಹಿರಿಯ ನಟಿ ಮತ್ತು ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್​ ಮಂಗಳವಾರವಷ್ಟೇ ಹೇಳಿದ್ದರು. ಈ ಕುರಿತು ಹಿರಿಯ ನಟಿ ಹೇಮಾ ಮಾಲಿನಿ, ಊರ್ಮಿಳಾ ಮಾತೋಂಡ್ಕರ್, ನಗ್ಮಾ ಸೇರಿದಂತೆ ಹಲವರು ಅನುಮೋದಿಸಿದ್ದಾರೆ.

    ಇದನ್ನೂ ಓದಿ: ಬಚ್ಚನ್​ ಬಂಗಲೆಗಳಿಗೆ ಪೊಲೀಸ್​ ಭದ್ರತೆ …

    ಈಗ ಹಿರಿಯ ನಟ ಶತ್ರುಘ್ನ ಸಿನ್ಹಾ ಸಹ ಈ ವಿಷಯವಾಗಿ ಮಾತನಾಡಿದ್ದಾರೆ. ‘ಕಳೆದ 50 ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ನನಗೆ ಯಾರೂ ಡ್ರಗ್ಸ್​ ಕೊಡುವ ಸಾಹಸ ಮಾಡಿಲ್ಲ. ಅಷ್ಟೇ ಅಲ್ಲ, ನನ್ನೆದುರು ಡ್ರಗ್ಸ್​ ತೆಗೆದುಕೊಂಡಿಲ್ಲ. ಯಾರೋ ಕೆಲವರು ಡ್ರಗ್ಸ್​ ತೆಗೆದುಕೊಳ್ಳುತ್ತಾರೆ ಎಂದರೆ, ಎಲ್ಲರ ಮೇಲೆ ಆರೋಪ ಮಾಡುವುದು ಸರಿಯಲ್ಲ. ವ್ಯವಸ್ಥೆಯನ್ನು ಕ್ಲೀನ್​ ಮಾಡುವುದಕ್ಕೆ ಇದು ಒಳ್ಳೆಯ ಸಮಯ’ ಎಂದು ಅವರು ಹೇಳಿದ್ದಾರೆ.

    ಇನ್ನು ಕಂಗನಾ ವಿರುದ್ಧ ತೊಡೆತಟ್ಟಿಕೊಂಡೇ ಬಂದಿರುವ ನಟಿ ಸ್ವರಾ ಭಾಸ್ಕರ್​, ‘ಜಯಾಜಿ ನೂರು ಪರ್ಸೆಂಟ್​ ಸರಿಯಾಗಿ ಮಾತನಾಡಿದ್ದಾರೆ. ಅವರಂಥ ಒಬ್ಬರಾದರೂ ಹಿರಿಯರು ಮತ್ತು ಅನುಭವಿಗಳು ಈ ವಿಷಯದ ಕುರಿತು ಮಾತನಾಡಿದರಲ್ಲ, ಅದೇ ಸಂತೋಷ’ ಎಂದು ಸ್ವರಾ ಹೇಳಿದ್ದಾರೆ.

    ಇದನ್ನೂ ಓದಿ: ಊರಿಗೆ ಹೋಗಿ ಡ್ರಗ್ಸ್​ ವಿರುದ್ಧ ಸಮರ ಸಾರಲಿ … ಕಂಗನಾಗೆ ಊರ್ಮಿಳಾ ಸವಾಲ್​

    ಕಂಗನಾ ಜತೆಗೆ ಕಿತ್ತಾಡಿಕೊಂಡಿದ್ದ ಮತ್ತೊಬ್ಬ ನಟಿ ತಾಪ್ಸಿ ಪನ್ನು ಸಹ ಜಯಾ ಬಚ್ಚನ್​ ಅವರ ಮಾತುಗಳನ್ನು ಅನುಮೋದಿಸಿದ್ದಾರೆ. ‘ಉತ್ತರ ಕೊಡುವುದುಕ್ಕೆ ಇದು ಸಕಾಲ. ಅದರಲ್ಲೂ ಈ ವಿಷಯವಾಗಿ ಒಬ್ಬ ಮಹಿಳೆ ಮಾತನಾಡಿದ್ದು ಬಹಳ ಖುಷಿಯಾಗುತ್ತಿದೆ’ ಎಂದು ಟ್ವೀಟ್​ ಮಾಡಿದ್ದಾರೆ.

    ಫರ್ಹಾನ್​ ಅಖ್ತರ್​ ಸಹ ಈ ವಿಷಯವಾಗಿ ಮಾತನಾಡಿದ್ದು, ‘ಅವಶ್ಯಕತೆ ಇದ್ದಾಗಲೆಲ್ಲಾ ಅವರು ಎಲ್ಲರ ಪರವಾಗಿ ನಿಂತು ಗಟ್ಟಿಯಾಗಿ ಮಾತನಾಡಿದ್ದಾರೆ. ಈ ಬಾರಿ ಸಹ ಅದನ್ನು ಮುಂದುವರೆಸಿದ್ದಾರೆ’ ಎಂದು ಫರ್ಹಾನ್​ ಹೇಳಿದ್ದಾರೆ.

    ಬರೀ ಇವರಷ್ಟೇ ಅಲ್ಲ, ಅನುಭವ್​ ಸಿನ್ಹಾ, ನಿಖಿಲ್​ ದ್ವಿವೇದಿ, ಸೋನಮ್​ ಕಪೂರ್​, ಅತುಲ್​ ಕಸ್ಬೇಕರ್​ ಸೇರಿದಂತೆ ಹಲವರು ಜಯಾ ಬಚ್ಚನ್​ ಅವರ ಬೆನ್ನಿಗೆ ನಿಂತಿದ್ದಾರೆ.

    ಬಾಲಿವುಡ್​ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಸುಮ್ಮನಿರಲ್ಲ: ಹೇಮಾ ಮಾಲಿನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts