More

    ಬಾಲಿವುಡ್​ ಯಾರಪ್ಪನ ಸ್ವತ್ತಲ್ಲ ಎಂದು ಗುಡುಗಿದ ನಟಿ ವಿದ್ಯಾ ಬಾಲನ್​!

    ನೆಪೋಟಿಸಂ ಅರ್ಥಾತ್​ ಸ್ವಜನ ಪಕ್ಷಪಾತದ ಬಗ್ಗೆ ಎಲ್ಲ ಚಿತ್ರರಂಗಗಳಲ್ಲೂ ಆಗಾಗ ಚರ್ಚೆಯಾಗುತ್ತಿರುತ್ತದೆ. ಇದೀಗ ಎರಡು ದಶಕಗಳ ಕರಿಯರ್​ನಲ್ಲಿ 40ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ, “ದ ಡರ್ಟಿ ಪಿಕ್ಚರ್​’ ಚಿತ್ರಕ್ಕೆ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿ, ಏಳು ಫಿಲಂೇರ್​ ಸೇರಿ ಹಲವು ಪ್ರಶಸ್ತಿಗಳನ್ನು ಪಡೆದಿರುವ ಬಾಲಿವುಡ್​ ನಟಿ ವಿದ್ಯಾ ಬಾಲನ್​ ಕೂಡ ಆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಬಾಲಿವುಡ್​ ಯಾರಪ್ಪನ ಸ್ವತ್ತಲ್ಲ ಎಂದು ಗುಡುಗಿದ ನಟಿ ವಿದ್ಯಾ ಬಾಲನ್​!

    “ನೆಪೋಟಿಸಂ ಇರಲಿ, ಇಲ್ಲದಿರಲಿ, ನಾನು ಚಿತ್ರರಂಗದಲ್ಲಿ ಇರುತ್ತೇನೆ. ಸಿನಿಮಾ ಇಂಡಸ್ಟ್ರಿ ಯಾರಪ್ಪನ ಸ್ವತ್ತಲ್ಲ. ಹಾಗಿದ್ದರೆ ಸ್ಟಾರ್​ಗಳ ಮಕ್ಕಳು ತಂದೆ, ತಾಯಿಯಂತೆಯೇ ಯಶಸ್ಸು ಗಳಿಸುತ್ತಿದ್ದರು’ ಎಂದು ಖಾರವಾಗಿ ನುಡಿದಿದ್ದಾರೆ. ಜತೆಗೆ ಡಜನ್​ಗೂ ಹೆಚ್ಚು ಅವಕಾಶಗಳು ಕೈತಪ್ಪಿದ ಬಗ್ಗೆ ಮೌನ ಮುರಿದಿರುವ ವಿದ್ಯಾ, “ಸುಮಾರು ಮೂರು ವರ್ಷಗಳ ಕಾಲ ನಾನು ಈ ಸಮಸ್ಯೆ ಎದುರಿಸಿದ್ದೆ. ಎಲ್ಲರೂ ನನ್ನನ್ನೂ ನತದೃಷ್ಟಳು ಎಂದು ಬ್ರ್ಯಾಂಡ್​​ ಮಾಡಿಬಿಟ್ಟಿದ್ದರು. ಅದರಿಂದಾಗಿ ಡಜನ್​ಗೂ ಹೆಚ್ಚು ಅವಕಾಶಗಳು ನನ್ನ ಕೈತಪ್ಪಿದ್ದವು. ಪ್ರತಿದಿನ ರಾತ್ರಿ ಅಳುತ್ತಾ ಮಲಗುತ್ತಿದ್ದೆ. ಬೆಳಗ್ಗೆ ಎದ್ದು ಪ್ರಾರ್ಥಿಸುತ್ತಿದ್ದೆ’ ಎಂದು ಬೇಸರದಿಂದ ಹೇಳಿಕೊಂಡಿದ್ದಾರೆ.

    ಬಾಲಿವುಡ್​ ಯಾರಪ್ಪನ ಸ್ವತ್ತಲ್ಲ ಎಂದು ಗುಡುಗಿದ ನಟಿ ವಿದ್ಯಾ ಬಾಲನ್​!

    ಸದ್ಯ ವಿದ್ಯಾ ಬಾಲನ್​ ನಟಿಸಿರುವ “ದೋ ಔರ್​ ದೋ ಪ್ಯಾರ್​’ ಸಿನಿಮಾ ಇದೇ ತಿಂಗಳ 19ರಂದು ರಿಲೀಸ್​ ಆಗಲಿದೆ. ಜತೆಗೆ “ಭೂಲ್​ ಭುಲಯ್ಯಾ 3′ ಚಿತ್ರದಲ್ಲಿ ಅವರು ಬಿಜಿಯಿದ್ದಾರೆ.

    ಬಾಲಿವುಡ್​ ಯಾರಪ್ಪನ ಸ್ವತ್ತಲ್ಲ ಎಂದು ಗುಡುಗಿದ ನಟಿ ವಿದ್ಯಾ ಬಾಲನ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts