More

    ಬಾಲಿವುಡ್ ನಟಿ ದಿಯ ಮಿರ್ಜಾ ಮದುವೆ ಮಾಡಿಸಿದ್ದು ಯಾರು ಗೊತ್ತಾ?!

    ಮುಂಬೈ: ಬಾಲಿವುಡ್ ನಟಿ ದಿಯಾ ಮಿರ್ಜಾ ಬಿಸಿನೆಸ್​ಮನ್ ವೈಭವ್ ರೇಖಿ ಅವರನ್ನು ಸೋಮವಾರ (ಫೆಬ್ರವರಿ 15) ಹಿಂದೂ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಮದುವೆಯಾದರು. ಯಾವುದೇ ಸೆಲೆಬ್ರಿಟಿ ಮದುವೆಯಂತೆ ಈ ಮದುವೆಯೂ ವಿಶೇಷವಾಗೇ ಇತ್ತು. ಆದರೆ ದಿಯಾ ಮದುವೆ ಮತ್ತೂ ವಿಶೇಷವಾದುದಕ್ಕೆ ಕಾರಣ ಎಂದರೆ ಅವರಿಗೆ ಸಾತ್​ ಫೇರೆ ಮಾಡಿಸಿದವರು ಮಹಿಳಾ ಪುರೋಹಿತರು!

    ಸಾಮಾನ್ಯವಾಗಿ ಹಿಂದೂ ಸಂಪ್ರದಾಯದಲ್ಲಿ ಮದುವೆ ಮತ್ತಿತರ ಶಾಸ್ತ್ರಗಳಲ್ಲಿ ಪುರುಷರೇ ಪೌರೋಹಿತ್ಯ ನಡೆಸುವುದು ವಾಡಿಕೆ. ಆದರೆ ದಿಯಾ ಮದುವೆ ಫೋಟೋ ವೈರಲ್ ಆದಾಗ ಹಲವರು ಗಮನಿಸಿದ ಅಂಶ ಎಂದರೆ ಮಂತ್ರ ಹೇಳುತ್ತಾ ಕೂತಿದ್ದಿದ್ದು ಮಹಿಳಾ ಪುರೋಹಿತೆ. ಈ ಬಗ್ಗೆ ನೆಟ್ಟಿಗರು ಕೇಳಿದ ಪ್ರಶ್ನೆಗಳಿಗೆ ದಿಯಾ ಉತ್ತರ ನೀಡಿದ್ದಾರೆ. “ನಮ್ಮ ಮದುವೆ ಶಾಸ್ತ್ರವನ್ನು ನಡೆಸಿಕೊಟ್ಟಿದ್ದಕ್ಕೆ ಥ್ಯಾಂಕ್ಯೂ ಶೀಲಾ ಅತ್ತ. ಜೊತೆಯಾಗಿ ನಾವು ಮೇಲೇಳಬಹುದು… #ರೈಸ್ ಅಪ್ #ಜನರೇಶನ್ ಈಕ್ವಾಲಿಟಿ” ಅಂತ ದಿಯಾ ಟ್ವೀಟ್ ಮಾಡಿದ್ದಾರೆ.

    ‘ರೆಹನಾ ಹೇ ತೆರೆ ದಿಲ್ ಮೇ’ ಚಿತ್ರದಿಂದ ಬಾಲಿವುಡ್ ಪ್ರವೇಶಿಸಿದ ರೂಪದರ್ಶಿ ದಿಯಾ ಮಿರ್ಜಾ ಇತ್ತೀಚೆಗೆ ಅಭಿನಯಿಸಿದ ಚಿತ್ರ ಎಂದರೆ ಅನುಭವ್ ಸಿನ್ಹಾ ಅವರ ‘ಥಪ್ಪಡ್’. ಮತ್ತೆ ಜೀ5 ವೆಬ್ ಸೀರೀಸ್ ‘ಕಾಫಿರ್’​ನಲ್ಲಿ ಅವರ ನಟನೆಗೂ ಪ್ರಶಂಸೆ ಸಿಕ್ಕಿತ್ತು.

    ಇದನ್ನೂ ಓದಿ: ಪ್ರಿಯಾಂಕಾರ ಆತ್ಮಚರಿತ್ರೆಯಲ್ಲಿದೆ … ‘ಪ್ಲಾಸ್ಟಿಕ್ ಚೋಪ್ರಾ’ ಆದ ಗುಟ್ಟು !

    ದಿಯಾ ಮಿರ್ಜಾ ಮತ್ತು ವೈಭವ್ ರೇಖಿ ಇಬ್ಬರಿಗೂ ಇದು ಎರಡನೇ ಮದುವೆ. ಅವರು ಲಾಕ್​ಡೌನ್ ವೇಳೆ ಭೇಟಿಯಾಗಿದ್ದು, ಕ್ರಮೇಣ ಪ್ರೇಮಾಂಕುರವಾಗಿತ್ತು ಎನ್ನಲಾಗಿದೆ. ಇದೀಗ ಹತ್ತಿರದ ನೆಂಟರಿಷ್ಟರನ್ನೊಳಗೊಂಡ ವಿವಾಹ ಸಮಾರಂಭದಲ್ಲಿ ನವದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.(ಏಜೆನ್ಸೀಸ್)

    ಅಮಿತಾಭ್ ಬಚ್ಚನ್​ ಮೊಮ್ಮಗಳ ಹೊಸ ಪ್ಲಾನ್ ಏನು ಗೊತ್ತಾ ?!

    ‘ನನ್ನ ವಾಲೆಂಟೈನ್ – ಪ್ರತಿದಿನ, ಎಂದೆಂದಿಗೂ’ ಎಂದು ಸನ್​ಸೆಟ್​ ಫೋಟೋ ಹಾಕಿದ ಅನುಷ್ಕಾ

    ಕೆಂಪುಕೋಟೆಯ ಆವರಣದಲ್ಲಿ ಖಡ್ಗ ಝಳಪಿಸಿದ ಮನೀಂದರ್ ಸಿಂಗ್ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts