More

    ವಾಯುಪಡೆಗೆ ಹೆಚ್ಚಿನ ಬಲ ತುಂಬಲು ಬಂದವು ಬೋಯಿಂಗ್​ನ ಅಪಾಚೆ ಹೆಲಿಕಾಪ್ಟರ್​

    ನವದೆಹಲಿ: ಚೀನಾದೊಂದಿಗಿನ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಮನೆ ಮಾಡಿರುವಂತೆ ಅಮೆರಿಕದ ಏರೋಸ್ಪೇಸ್​ ಕಂಪನಿ ಬೋಯಿಂಗ್​ ಭಾರತಕ್ಕೆ 5 ಅಪಾಚೆ ಅಟ್ಯಾಕ್​ ಹೆಲಿಕಾಪ್ಟರ್​ಗಳನ್ನು ಸರಬರಾಜು ಮಾಡಿದೆ. ಇದು ಭಾರತ ಖರೀದಿಸಲು ಬಯಸಿದ್ದ 22 ಅಪಾಚೆ ಅಟ್ಯಾಕ್​ ಹೆಲಿಕಾಪ್ಟರ್​ನ ಕೊನೆಯ ಕಂತಾಗಿದೆ.

    ಈ ರೀತಿಯಾಗಿ ಬೋಯಿಂಗ್​ ಸಂಸ್ಥೆ ಭಾರತೀಯ ವಾಯುಪಡೆಗೆ ಎಲ್ಲ 22 ಅಪಾಚೆ ಅಟ್ಯಾಕ್​ ಹೆಲಿಕಾಪ್ಟರ್​ ಮತ್ತು 15 ಚಿನೋಕ್​ ಮಿಲಿಟರಿ ಹೆಲಿಕಾಪ್ಟರ್​ಗಳನ್ನು ಪೂರೈಕೆ ಮಾಡಿದಂತಾಗಿದೆ.

    ಇದನ್ನೂ ಓದಿ: ದನದ ಹಿಂಡು ತಪ್ಪಿಸಲು ಚಾಲಕ ಪ್ರಯತ್ನಿಸಿದಾಗ ವಾಹನ ಪಲ್ಟಿ!

    ಎಎಚ್​-64ಇ ಅಪಾಚೆ ಅಟ್ಯಾಕ್​ ಹೆಲಿಕಾಪ್ಟರ್​ ವಿಶ್ವದಲ್ಲಿ ಸದ್ಯ ಲಭ್ಯ ಇರುವ ಅತ್ಯಾಧುನಿಕ ಬಹುಮುಖೀಯ ದಾಳಿಯಲ್ಲಿ ಬಳಸಬಹುದಾದ ಕಾಂಬ್ಯಾಟ್​​ ಹೆಲಿಕಾಪ್ಟರ್​ ಆಗಿದೆ. ಚಿನಾಕ್​ ಮಿಲಿಟರಿ ಹೆಲಿಕಾಪ್ಟರ್​ ಕೂಡ ಬಹುಮುಖೀಯ, ಲಂಬಾಕಾರವಾಗಿ ಉಡಾವಣೆಗೊಳ್ಳುವ, ಯೋಧರನ್ನು, ಶಸ್ತ್ರಾಸ್ತ್ರಗಳು, ಇಂಧನವನ್ನು ರಣಾಂಗಣಕ್ಕೆ ಸಾಗಿಸುವ ಹೆಲಿಕಾಪ್ಟರ್​ ಆಗಿದೆ.

    2015ರ ಸೆಪ್ಟೆಂಬರ್​ನಲ್ಲಿ ಭಾರತೀಯ ವಾಯುಪಡೆಗಾಗಿ 22 ಅಪಾಚೆ ಮತ್ತು 15 ಚಿನೋಕ್​ ಹೆಲಿಕಾಪ್ಟರ್​ಗಳನ್ನು ಖರೀದಿಸಲು ಸರ್ಕಾರ ಬೋಯಿಂಗ್​ನೊಂದಿಗೆ ಶತಕೋಟಿ ಡಾಲರ್ ಒಪ್ಪಂದ ಮಾಡಿಕೊಂಡಿತ್ತು.

    ಚಿನ್ನ, ಬೆಳ್ಳಿ ಆಯ್ತು..ಇದೀಗ ವಜ್ರದ ಮಾಸ್ಕ್​ಗಳ ಸರದಿ; ಸಾಮಾನ್ಯರ ಕೈಗೆಟಕುವಂಥದ್ದಲ್ಲ ಇದು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts