More

    ಭಾರ ಎತ್ತುವಾಗ ಕುತ್ತಿಗೆ ಮುರಿದುಹೋಗಿ ಸಾವಿಗೀಡಾದ ಬಾಡಿಬಿಲ್ಡರ್!

    ನವದೆಹಲಿ: ಜಿಮ್​ಗಳಲ್ಲಿ ಶಕ್ತಿ ಮೀರಿ ವರ್ಕೌಟ್ ಮಾಡುವವರಿಗೆ ಇದು ಎಚ್ಚರಿಕೆ ಗಂಟೆ ಎಂದರೂ ತಪ್ಪೇನಲ್ಲ. ದೇಹ ದಂಡಿಸುವಾಗ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂಬುದಕ್ಕೆ ಈ ಪ್ರಕರಣ ನಿದರ್ಶನ. ಏಕೆಂದರೆ ಇಲ್ಲೊಬ್ಬ ಬಾಡಿಬಿಲ್ಡರ್​ ಭಾರ ಎತ್ತುವಾಗ ಕುತ್ತಿಗೆ ಮುರಿದು ಹೋಗಿ ಸಾವಿಗೀಡಾದ ಪ್ರಕರಣ ನಡೆದಿದೆ. 33 ವರ್ಷದ ಈತ 210 ಕೆ.ಜಿ. ತೂಕ ಎತ್ತುವಾಗ ಈ ಅವಘಡ ಸಂಭವಿಸಿದೆ.

    ಅಂತಾರಾಷ್ಟ್ರೀಯ ಖ್ಯಾತಿಯ ಬಾಡಿಬಿಲ್ಡರ್​, ಫಿಟ್​ನೆಸ್​ ಇನ್​ಫ್ಲೂಯೆನ್ಸರ್ ಕೂಡ ಆಗಿರುವ ಜಸ್ಟಿನ್ ವಿಕ್ಕಿ ಎಂಬ ಈತ ಇಂಡೋನೇಷ್ಯಾದ ಬಾಲಿಯ ಜಿಮ್​ವೊಂದರಲ್ಲಿ ಭಾರ ಎತ್ತುವಾಗ ಈ ಅವಘಡ ಸಂಭವಿಸಿದೆ. 210 ಕೆ.ಜಿ. ಭಾರವನ್ನು ಈತ ಎತ್ತುವಾಗ ಅದನ್ನು ತಡೆದುಕೊಳ್ಳಲಾಗದೆ ಅಲ್ಲೇ ಕುಸಿದಿದ್ದಾನೆ.

    ಇದನ್ನೂ ಓದಿ: ಮೂರೂವರೆ ವರ್ಷದ ಮಗುವನ್ನೂ ಬಿಡದ ದುರುಳ; ನಿತ್ಯ ಶಾಲೆಗೆ ಕರೆದೊಯ್ಯುತ್ತಿದ್ದವನಿಂದಲೇ ದುಷ್ಕೃತ್ಯ

    ಆಗ ಬಾರ್​ಬೆಲ್​ ಕುತ್ತಿಗೆ ಮೇಲೆ ಬಿದ್ದು ಆ ಭಾರಕ್ಕೆ ಕತ್ತಿನ ಮೂಳೆ ಮುರಿದುಹೋಗಿದೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತಾದರೂ ಆತ ಚಿಕಿತ್ಸೆ ಫಲಕಾರಿಯಾಗಿದೆ ಸಾವಿಗೀಡಾಗಿದ್ದಾನೆ. ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. –ಏಜೆನ್ಸೀಸ್

    ಎಕ್ಸಾಂ ದಿನವೇ ವಿದ್ಯಾರ್ಥಿ ಸಾವು ಪ್ರಕರಣದ ಇನ್ನೊಂದು ಮುಖ: ಏಕೈಕ ಪುತ್ರನನ್ನು ಕಳೆದುಕೊಂಡ ತಾಯಿಯ ಪ್ರಶ್ನೆಗಳಿವು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts