More

    ಸೆಕ್ಸ್​ ಡಾಲ್​ನೊಂದಿಗಿನ ಮದುವೆ ಮುರಿದುಕೊಂಡ ಬಾಡಿಬಿಲ್ಡರ್​! ಈಗ ಇವನಿಗೆ ಜತೆಯಾಗಿರೋದು ಮತ್ತೊಂದು ಸೆಕ್ಸ್​ ಡಾಲ್​!

    ನೂರ್​ ಸುಲ್ತಾನ್​: ಈ ವಿಶ್ವದಲ್ಲಿ ಅದೆಂತಹ ವಿಚಿತ್ರ ಜನರಿದ್ದಾರೆ ಎನ್ನುವುದಕ್ಕೆ ಈ ಮನುಷ್ಯ ಒಂದು ಉದಾಹರಣೆ. ಕಳೆದ ವರ್ಷವಷ್ಟೇ ಒಂದು ಸೆಕ್ಸ್​ ಡಾಲ್​ ಜತೆ ದಾಂಪತ್ಯ ಜೀವನವನ್ನು ಆರಂಭಿಸಿದ್ದ ಬಾಡಿಬಿಲ್ಡರ್​ ಇದೀಗ ಆ ಡಾಲ್​ಗೆ ವಿಚ್ಛೇದನ ನೀಡಿದ್ದಾನಂತೆ. ಅವಳ ಬದಲಾಗಿ ಮತ್ತೊಬ್ಬ ಸೆಕ್ಸ್​ ಡಾಲ್​ನ್ನು ಮನೆಗೆ ಕರೆಸಿಕೊಳ್ಳುವ ನಿರ್ಧಾರವನ್ನೂ ಮಾಡಿದ್ದಾನಂತೆ.

    ಕಝಾಕಿಸ್ತಾನ್​ ಮೂಲದ ಬಾಡಿಬಿಲ್ಡರ್ ಯುರಿ ತೊಲೊಚ್ಕೋ​ ಕಳೆದ ವರ್ಷ ನವೆಂಬರ್​ನಲ್ಲಿ ಮಾರ್ಗೋ ಹೆಸರಿನ ಸೆಕ್ಸ್​ ಡಾಲ್​ ಅನ್ನು ಮದುವೆಯಾಗಿದ್ದ. ಕ್ರಿಸ್​ಮಸ್​ಗೂ ಮೊದಲೇ ಸೆಕ್ಸ್​ ಡಾಲ್​ ತುಂಡು ತುಂಡಾಗಿ ಮುರಿದುಬಿದ್ದಿತ್ತು. ಮತ್ತೆ ಎಂದಿನಂತೆ ಕಾರ್ಯನಿರ್ವಹಿಸುವ ಹಾಗೂ ಸರಿಯಾದ ರೀತಿಯಲ್ಲಿ ಜೋಡಿಸಲು ರಿಪೇರಿಗೆ ನೀಡಿದ್ದ. ಅದೇ ಕಾರಣದಿಂದಾಗಿ ಆತ ಮಾರ್ಗೋಳೊಂದಿಗೆ ಸಂಪರ್ಕ ಮುರಿದುಕೊಂಡಿದ್ದಾನಂತೆ.

    ಇದೀಗ ಆತನಿಗೆ ಇನ್ನೊಂದು ಜೋಡಿ ಸಿಕ್ಕಿದೆಯಂತೆ. ಸೆಕ್ಸ್​ ಡಾಲ್​ ಸಂಸ್ಥೆಯೊಂದು ತಮ್ಮ ಸಂಸ್ಥೆಯಿಂದ ಡಾಲ್​ ಖರೀದಿಸಿ ಎಂದು ಆಫರ್​ ನೀಡಿತ್ತಂತೆ. ಆ ಹಿನ್ನೆಲೆಯಲ್ಲಿ ಆತ ಲೋಲಾ ಹೆಸರಿನ ಸೆಕ್ಸ್​ ಡಾಲ್​ ಖರೀದಿಸಿದ್ದಾನೆ. ಅದಕ್ಕೆ ಆತ ಮೂನ್​ ಎಂದು ಕರೆಯಲು ಬಯಸುತ್ತಾನಂತೆ. ಇನ್ನು ಯಾವುದಾದರೂ ಒಳ್ಳೆಯ ಹೆಸರಿದ್ದರೆ ಹೇಳಿ, ಅದನ್ನೇ ಕರೆಯುತ್ತೇನೆ ಎಂದು ಆತ ಹೇಳಿಕೊಂಡಿದ್ದಾನೆ. (ಏಜೆನ್ಸೀಸ್​)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಸೆಕ್ಸ್​ ಡಾಲ್​ ಮದ್ವೆಯಾಗಿರುವ ಬಾಡಿಬಿಲ್ಡರ್​ನಿಂದ ಮತ್ತೊಂದು ವಿಚಿತ್ರ ನಿರ್ಧಾರ..!​​

    VIDEO| ಹಾವಿನ ಜತೆ ಆಟವಾಡಲು ಹೋದವನಿಗೆ ಹಾವು ಹೇಗೆ ಬುದ್ಧಿ ಕಲಿಸಿತು ನೀವೇ ನೋಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts