More

    ಬಿಒಬಿಯಿಂದ 835 ಕೋಟಿ ರೂ. ಕೃಷಿ ಸಾಲ: ಬೆಂಗಳೂರು ವಿಭಾಗದ 5 ಜಿಲ್ಲೆಗಳ ರೈತರಿಗೆ ವಿತರಣೆ

    ರಾಮನಗರ: ಬೆಂಗಳೂರು ವಿಭಾಗದ ಐದು ಜಿಲ್ಲೆಗಳ ರೈತರಿಗೆ 835 ಕೋಟಿ ರೂ. ಕೃಷಿ ಸಾಲ ವಿತರಣೆ ಮಾಡಲಾಗಿದೆ ಎಂದು ಬ್ಯಾಂಕ್ ಆಫ್ ಬರೋಡಾದ (ಬಿಒಬಿ) ಬೆಂಗಳೂರು ಗ್ರಾಮಾಂತರ ವಲಯ ಪ್ರಾದೇಶಿಕ ಪ್ರಬಂಧಕ ಎಸ್.ರವಿ ಹೇಳಿದರು.

    ಬ್ಯಾಂಕ್‌ನ ಬಿಡದಿಯ ಬೈರಮಂಗಲ ಶಾಖೆಯಲ್ಲಿ ಪ್ರಧಾನಮಂತ್ರಿ ಕೃಷಿ ಸಮ್ಮಾನ್ ನಿಧಿ ಯೋಜನೆಯ ಸಾಲ ಪಡೆಯದ ಲಾನುಭವಿಗಳಿಗೆ ಬೆಳೆ ಸಾಲ ವಿತರಣಾ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
    ಈಗಾಗಲೇ ಪ್ರಧಾನಮಂತ್ರಿ ಕೃಷಿ ಸಮ್ಮಾನ್ ನಿಧಿ ಯೋಜನೆಯಲ್ಲಿ ಮೊದಲ ಕಂತಿನ ಹಣವನ್ನು ರೈತರ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ಸಾಲ ಪಡೆಯದಿರುವ ಫಲಾನುಭಗಳಿಗೆ ಹೊಸ ಸಾಲ ವಿತರಣೆ ಮಾಡಲು ಬ್ಯಾಂಕ್ ಮುಂದಾಗಿದೆ. ಅಲ್ಲದೆ ಕೇಂದ್ರ ಸರ್ಕಾರದ ನಿರ್ದೇಶನದಂತೆ ಹಸು, ಮೀನು ಸಾಕಣೆಗೆ ಸಾಲ ವಿತರಿಸಲೂ ಕ್ರಮ ಕೈಗೊಳ್ಳಲಾಗಿದ್ದು, ಶಾಖಾವಾರು ಫಲಾನುಭವಿಗಳನ್ನು ಗುರುತಿಸಲಾಗಿದೆ ಎಂದರು.

    ಬ್ಯಾಂಕ್‌ನ ಜನರಲ್ ಮ್ಯಾನೇಜರ್ ಬೀರೇಂದ್ರಕುಮಾರ್ ಮಾತನಾಡಿ, ವಿಜಯಬ್ಯಾಂಕ್ ಮತ್ತು ದೇನಾ ಬ್ಯಾಂಕ್‌ಗಳು ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನವಾದ ನಂತರ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ಮೂಲಕ ಅತಿ ಹೆಚ್ಚು ವ್ಯವಹಾರ ಮಾಡಿ ದೇಶದ 2ನೇ ಬ್ಯಾಂಕ್ ಆಗಿದೆ. 8 ಕೋಟಿ ರೈತರು ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಯೋಜನೆ ಸೌಲಭ್ಯ ಪಡೆದಿದ್ದಾರೆ. ಯಾವುದೇ ಆಧಾರವಿಲ್ಲದೆ, 10 ಲಕ್ಷ ರೂ.ವರೆಗೆ ಸ್ವಸಹಾಯ ಗುಂಪುಗಳಿಗೆ ಸಾಲ ಮತ್ತು 4 ಲಕ್ಷ ರೂ.ವರೆಗೆ ಶಿಕ್ಷಣ ಸಾಲ ನೀಡುತ್ತಿದ್ದು, ರಾಜೀವ್ ಗಾಂಧಿ ವಸತಿ ಯೋಜನೆ ಫಲಾನುಭವಿಗಳಿಗೂ ಸಾಲ ಸಿಗಲಿದೆ. ಹಾಗಾಗಿ ಗ್ರಾಹಕರು ಆರ್ಥಿಕವಾಗಿ ಬಲಿಷ್ಠರಾಗಲು ಬ್ಯಾಂಕಿನೊಂದಿಗೆ ವ್ಯವಹಾರ ನಡೆಸಿ ಎಂದು ಸಲಹೆ ನೀಡಿದರು. ಲೀಡ್ ಬ್ಯಾಂಕ್‌ನ ಸುಹಾಸ್ ಎಸ್.ಜೋಷಿ, ಬೈರಮಂಗಲ ಗ್ರಾಪಂ ಅಧ್ಯಕ್ಷ ಎನ್.ರವಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts