More

    ಕರೊನಾ ನಿಯಮ ಉಲ್ಲಂಘನೆ : ಬಾಲಿವುಡ್ ನಟಿ ವಿರುದ್ಧ ಮುಂಬೈ ಪಾಲಿಕೆ ದೂರು

    ಮುಂಬೈ: ಕರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳುತ್ತಾ ಬಂದಿದೆ. ಮುಂಬೈ ನಗರಾಡಳಿತವೂ ನಗರದಲ್ಲಿ ಕರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಬಗ್ಗೆ ಎಚ್ಚರಿಕೆ ವಹಿಸುತ್ತಿದೆ. ಈ ನಿಟ್ಟಿನಲ್ಲಿ ಕರೊನಾ ಪಾಸಿಟಿವ್ ಬಂದಿದ್ದರೂ ಶೂಟಿಂಗ್​ ನಡೆಸಿದ ಬಾಲಿವುಡ್ ನಟಿ ಗೌಹರ್ ಖಾನ್ ಮೇಲೆ ಬೃಹನ್​​ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಕೇಸು ದಾಖಲಿಸಿದೆ.

    ಇಶಕ್​ಜಾದೆ, ಬದರಿನಾಥ್ ಕಿ ದುಲ್ಹನಿಯಾ ಮುಂತಾದ ಚಿತ್ರಗಳಿಂದ ಹೆಸರು ಮಾಡಿರುವ ಗೌಹರ್​ ಖಾನ್ ಅವರ ವಿರುದ್ಧ ಬಿಎಂಸಿ, ನಗರದ ಓಶಿವಾರಾ ಪೊಲೀಸ್ ಠಾಣೆಯಲ್ಲಿ ಎಫ್​.ಐ.ಆರ್. ಸಲ್ಲಿಸಿದೆ. “ಖಾನ್​ಗೆ ಕರೊನಾ ಸೋಂಕು ತಗುಲಿದ್ದು, ಅವರು ಮನೆಯಲ್ಲೇ ಕ್ವಾರಂಟೈನ್​​ನಲ್ಲಿರಬೇಕಿತ್ತು. ಆದರೆ ನಾವು ಅವರ ಮನೆಗೆ ಭೇಟಿ ನೀಡಿದಾಗ ಅವರು ಬಾಗಿಲು ತೆಗೆಯಲಿಲ್ಲ. ವಿಚಾರಿಸಿದಾಗ ಅವರು ಶೂಟಿಂಗ್​ಗೆಂದು ಹೊರಹೋಗಿರುವುದು ತಿಳಿದುಬಂತು” ಎಂದು ಸಂಬಂಧಿತ ಬಿಎಂಸಿ ಅಧಿಕಾರಿ ತಿಳಿಸಿದ್ದಾರೆ.

    ಇದನ್ನೂ ಓದಿ: ಕೊಯಂಬತೂರ್ ದಕ್ಷಿಣ ಕ್ಷೇತ್ರಕ್ಕೆ ಕಮಲ್ ಹಾಸನ್ ನಾಮಪತ್ರ

    ಕೋವಿಡ್​ ನಿಯಮಾವಳಿಗಳನ್ನು ನಿರ್ಲಕ್ಷಿಸಿ ಬೇಜವಾಬ್ದಾರಿಯಿಂದ ವರ್ತಿಸಿದರೆ ಬೆಲೆ ತೆರಬೇಕಾಗುತ್ತದೆ ಎಂದು ಬಿಎಂಸಿ ಹೇಳಿದೆ. ಈ ಕುರಿತು ಪಾಲಿಕೆ ತನ್ನ ಟ್ವಿಟರ್ ಹ್ಯಾಂಡಲ್​ನಲ್ಲಿ ಮಾಹಿತಿ ನೀಡಿದ್ದು, “ಕರೊನಾ ಪಾಸಿಟಿವ್ ಬಂದಾಗ ಪಾಲಿಸಬೇಕಾದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಬಾಲಿವುಡ್ ನಟಿಯ ಮೇಲೆ ಎಫ್​.ಐ.ಆರ್​. ದಾಖಲಿಸಲಾಗಿದೆ. ನಿಯಮಗಳು ಎಲ್ಲರಿಗೂ ಸಮಾನವಾಗಿ ಅನ್ವಯಿಸುತ್ತದೆ” ಎಂದಿದೆ.

    “ನಗರದ ಸುರಕ್ಷತೆಯ ಬಗ್ಗೆ ಯಾವುದೇ ಕಾಂಪ್ರಮೈಸ್ ಮಾಡಿಕೊಳ್ಳುವುದಿಲ್ಲ” ಎಂದಿರುವ ಬಿಎಂಸಿ, ಮುಂಬೈ ನಾಗರೀಕರಿಗೆ ಎಲ್ಲಾ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ, ನಗರವು ಕರೊನಾ ವಿರುದ್ಧ ಜಯಿಸಲು ಸಹಕರಿಸಬೇಕಾಗಿ ಕೋರಿದೆ. (ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಕ್ರಿಕೆಟ್ ಆಟಗಾರನಂತೆ ಮೈದಾನಕ್ಕೆ ಹೋಗುತ್ತಿದ್ದ… ಆದರೆ ಮಾಡುತ್ತಿದ್ದುದು ಬೇರೆಯೇ ಕೆಲಸ !

    “ನನ್ನ ಹೆಲಿಕಾಪ್ಟರ್ ಕೆಟ್ಟಿತ್ತು… ಆದರೆ ನಾನದನ್ನು ಸಂಚು ಎನ್ನುವುದಿಲ್ಲ…”

    ಹೆಚ್ಚಿದ ಕರೊನಾ : ಮದುವೆ ಸಮಾರಂಭಗಳಿಗೆ ಪೊಲೀಸರಾಗಲಿದ್ದಾರೆ ವಿಶೇಷ ಅತಿಥಿಗಳು !

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts