More

    ಧರ್ಮ, ಸಂಸ್ಕೃತಿ ಹಳ್ಳಿಗಳ ಶ್ರೇಷ್ಠತೆಯ ಸಂಕೇತ

    ಲಕ್ಷ್ಮೇಶ್ವರ: ಕನ್ನಡ ಸಾರಸ್ವತ ಲೋಕಕ್ಕೆ ಶಿಕ್ಷಕರ ಕೊಡುಗೆ ಅಪಾರ. ಗ್ರಾಮೀಣ ಭಾಗದ ಶಿಕ್ಷಕರು ಕನ್ನಡ ಭಾಷೆ, ಸಾಹಿತ್ಯ, ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಉಳಿಸಿ- ಬೆಳೆಸುವಲ್ಲಿ ಮುಖ್ಯ ಪಾತ್ರವಹಿಸುತ್ತಾರೆ ಎಂದು ಹಾವೇರಿ ಜಿಲ್ಲೆ ನರಸೀಪುರದ ನಿಜಶರಣ ಅಂಬಿಗರ ಚೌಡಯ್ಯ ಪೀಠದ ಜಗದ್ಗುರು ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮೀಜಿ ನುಡಿದರು.

    ಭಾನುವಾರ ಸೂರಣಗಿ ಗ್ರಾಮದಲ್ಲಿ ಶಿಕ್ಷಕ, ಸಾಹಿತಿ, ಭಾವಕವಿ ಶಿವಪ್ಪ ಕಾಕೋಳ ಅವರ ‘ಭಾವದಲೆಗಳು’ ಕವನ ಸಂಕಲನ ಬಿಡುಗಡೆ ಮತ್ತು ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಧಾರ್ಮಿಕ, ಸಾಹಿತ್ಯ, ಸಾಂಸ್ಕೃತಿಕ ಶ್ರೀಮಂತಿಕೆಯು ಗ್ರಾಮೀಣ ಭಾರತದ ಶ್ರೇಷ್ಠತೆಯ ಸಂಕೇತವಾಗಿದೆ. ಈ ಅಂಶಗಳು ಗ್ರಾಮೀಣರಲ್ಲಿ ಸಮನ್ವಯ, ಸಹಬಾಳ್ವೆಯ ಬದುಕಿಗೆ ಕಾರಣವಾಗಿವೆ. ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಸೂರಣಗಿ ಶಾಲೆಯ ಶಿಕ್ಷಕ ಶಿವಪ್ಪ ಕಾಕೋಳ ಅವರ ಶಿಕ್ಷಣದ ಜತೆಗೆ ಸಾಹಿತ್ಯ ಕ್ಷೇತ್ರದ ಸೇವೆಯೂ ಗಮನಾರ್ಹ. ಭಾವನೆಗಳಿಗೆ ಅಕ್ಷರದ ರೂಪ ಕೊಟ್ಟು ಸಾಹಿತ್ಯದ ಕಂಪು ಪಸರಿಸುವ ಕಾರ್ಯ ಮಾಡಿದ್ದಾರೆ ಎಂದರು.

    ಡಾ.ಎನ್.ವಿ. ಹೆಬಸೂರ, ಎನ್.ಬಿ. ಹಳ್ಳಿ, ಎನ್.ಎಂ. ಬಡಿಗೇರ, ಎಸ್.ಎಸ್. ಇಟಗಿ, ಎಸ್.ಡಿ. ರಗಟಿ, ಪುಟ್ಟವ್ವ ಮೇಲ್ಮುರಿ, ಡಿ.ಎಚ್. ಪಾಟೀಲ, ಜಿ.ಎಸ್. ಗುಡಗೇರಿ, ಸೋಮಶೇಖರ ಲಮಾಣಿ, ಎನ್.ಎಸ್. ಮೇಲ್ಮುರಿ, ಎಸ್.ವಿ. ಪಾಟೀಲ, ಮಂಜುಳಾ ಕಾಕೋಳ, ಕಲಾಶ್ರೀ ಹಾದಿಮನಿ, ಅಶ್ವಿನಿ ಕರ್ಜಕಣ್ಣವರ, ಲೋಕೇಶ ಮಠದ, ಸುದರ್ಶನ ದೈವಜ್ಞಾಚಾರ್ಯ, ವೈ.ಬಿ. ಪಾಟೀಲ, ಹೇಮಂತ ದಳವಾಯಿ, ಡಿ.ಜೆ. ಅಂಗಡಿ, ಫಕೀರೇಶ ಕುಳಗೇರಿ, ಇತರರಿದ್ದರು. ಕಸಾಪ ಅಧ್ಯಕ್ಷ ಈಶ್ವರ ಮೆಡ್ಲೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ಪೂಜಾರ, ಬಸವರಾಜ ದುರ್ಗದ, ಶರಣಬಸಪ್ಪ ಮಾಸ್ತಮ್ಮನವರ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts