More

    ಪೂಜ್ಯರ ವಾಣಿ ಜೀವನಕ್ಕೆ ರಹದಾರಿ

    ಅರಟಾಳ: ನಮ್ಮ ಜೀವನ ಪಾವನ ಆಗಬೇಕಾದರೆ ಪೂಜ್ಯರ ವಾಣಿ ಕೇಳಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

    ಸಮೀಪದ ಕನ್ನಾಳ ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸದ್ಗುರು ಗಿರಮಲ್ಲೇಶ್ವರ ಆಶ್ರಮದಲ್ಲಿ ಧರ್ಮರಾಯ ಮುತ್ಯಾ ಹಾಗೂ ದುಂಡಪ್ಪ ಮುತ್ಯಾ ಅವರ 51ನೇ ಪುಣ್ಯಸ್ಮರಣೆಯಲ್ಲಿ ಮಾತನಾಡಿ, ಹುಟ್ಟು ಸಾವಿನ ಮಧ್ಯೆ ಒಳ್ಳೆಯ ಕಾರ್ಯ ಮಾಡಿ ಎಲ್ಲರ ಮನದಲ್ಲಿ ಉಳಿಯಬೇಕು ಎಂದರು.

    ಇಂಚಗೇರಿ ಶ್ರೇಷ್ಠವಾದ ಸಂಪ್ರದಾಯ. ಶ್ರೀ ಮಾಧವಾನಂದ ಪ್ರಭುಜಿ ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಂಚೂಣಿಯಲ್ಲಿ ಇದ್ದರು. ಸಮಾನತೆ ಮೂಲಕ ಅಂತರ್ಜಾತಿ ವಿವಾಹ ಮಾಡಿ ಭಾವೈಕ್ಯ ಸಾರಿದರು ಎಂದರು.

    ಇಂಚಗೇರಿಯ ಶಂಕ್ರೆಪ್ಪ ಮಹಾರಾಜರು ಮಾತನಾಡಿ, ಕನ್ನಾಳ ಗ್ರಾಮ ಚಿಕ್ಕದು. ಗ್ರಾಮಸ್ಥರ ಮನಸ್ಸು ದೊಡ್ಡದು, ಒಳ್ಳೆಯ ಸಂಸ್ಕಾರ ಇದೆ. ದೇವರನ್ನು ನಂಬಿ ನಡೆದರೆ ಮುಕ್ತಿ ಸಿಗುತ್ತದೆ. ಪರಮಾತ್ಮ ಸ್ಮರಣೆ ಮಾಡಿದರೆ ಅಮರರಾಗುತ್ತಾರೆ ಎಂದರು.

    ಕಾರ್ಯಕ್ರಮದಲ್ಲಿ ಅನ್ನದಾತರು, ಸಾಧಕರನ್ನು ಸನ್ಮಾನಿಸಲಾಯಿತು. ಕಕಮರಿಯ ತಾರಾಚಂದ ಮಹಾರಾಜರು, ತೆಲಸಂಗ ವಿವೇಕಾನಂದ ಮಹಾರಾಜರು, ಕೋಹಳ್ಳಿಯ ಪರಶುರಾಮ ಮಹಾರಾಜರು, ಶಿವಲಿಂಗಪ್ಪ ಮಹಾರಾಜರು, ಭೀಮಣ್ಣ ಮಹಾರಾಜರು, ಶಶಿಕಾಂತ ಮಹಾರಾಜರು, ಸಂಗಪ್ಪ ಮಹಾರಾಜರು, ಸಾಹಿತಿ ಅಪ್ಪಾಸಾಬ ಅಲಿಬಾದಿ, ನ್ಯಾಯವಾದಿ ಅಮೋಘಸಿದ್ದ ಖೋಬ್ರಿ, ಶಂಕರ ಮಟ್ಟೆಪ್ಪನವರ, ಕೃಷಿ ಅಧಿಕಾರಿ ವೆಂಕಪ್ಪ ಉಪ್ಪಾರ, ಅಶೋಕ ಪಾಟೀಲ, ವೆಂಕಣ್ಣ ಅಸ್ಕಿ, ಶೇಖರ ವಳಸಂಗ ಇತರರಿದ್ದರು. ಪ್ರಕಾಶ ಇಸರಗೊಂಡ ನಿರೂಪಿಸಿದರು. ಶ್ರೀಶೈಲ ಈಸರಗೊಂಡ ಸ್ವಾಗತಿಸಿ, ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts