More

    ಬ್ಲ್ಯಾಕ್​ಮೇಲ್ ತಂತ್ರ ನಡೆಯುವುದಿಲ್ಲ: ಗುತ್ತಿಗೆದಾರರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ

    ಬೆಂಗಳೂರು: ಬ್ಲ್ಯಾಕ್​ಮೇಲ್ ತಂತ್ರ ನಡೆಯುವುದಿಲ್ಲ. ಈಗಾಗಲೇ ಸುಳ್ಳು ಆರೋಪ ಮಾಡಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ವಿರುದ್ಧ ದಾವೆ ದಾಖಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಸಿದರು.

    ಸುದ್ದಿಗಾರರಿಗೆ ಮಂಗಳವಾರ ಪ್ರತಿಕ್ರಿಯಿಸಿದ ಅವರು ಇದೀಗ ಮತ್ತೊಬ್ಬ ಗುತ್ತಿದಾರ ಮಂಜುನಾಥ್, ಶಾಸಕ ತಿಪ್ಪಾರೆಡ್ಡಿಗೆ ಹ‌ಣ ಕೊಟ್ಟಿರುವೆ, ದೂರು ನೀಡುವೆ ಎಂದಿದ್ದಾರೆ. ದೂರು ನೀಡಲಿ, ಕಾನೂನು ರೀತ್ಯ ಕ್ರಮವಾಗಲಿದೆ. ಆದರೆ ಚುನಾವಣೆ ಬಂದಿರುವ ಕಾರಣಕ್ಕೆ ಸುಳ್ಳು ಆರೋಪ ಮಾಡಿರುವ ಸಾಧ್ಯತೆಗಳಿರುತ್ತವೆ ಎಂದರು.

    ಮುಖವಾಡ ಕಳಚಲು ಸಿಐಡಿ ತನಿಖೆ
    ಸ್ಯಾಂಟ್ರೋ ರವಿ ಜತೆಗೆ ಕಳೆದ‌ 20 ವರ್ಷಗಳಿಂದ ಯಾರೆಲ್ಲ ಸಂಪರ್ಕ ಇಟ್ಟುಕೊಂಡಿದ್ದಾರೆ ಎಂಬುದು ಜನರ ಮುಂದಿಡಲು, ಅಂತಹವರ ಮುಖವಾಡ ಕಳಚಲು ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ ಎಂದು ಆರಗ ಜ್ಞಾನೇಂದ್ರ ಸಮರ್ಥಿಸಿಕೊಂಡರು.

    ಅತ್ಯಾಚಾರ, ಕೊಲೆ, ವಂಚನೆ ಇನ್ನಿತರ ಪ್ರಕರಣಗಳು ರವಿ‌ ವಿರುದ್ಧ ದಾಖಲಾಗಿವೆ. ಮೈಸೂರು ಪೊಲೀಸರು ತನಿಖೆ ನಡೆಸುತ್ತಿದ್ದರು. ಯಾವುದೇ ಅನುಮಾನಗಳಿಗೆ ಅವಕಾಶ ನೀಡಬಾರದು ಎಂದು ಸಿಐಡಿಗೆ ಒಪ್ಪಿಸಿದ್ದು, ಪಿಎಸ್ ಐ ಪರೀಕ್ಷಾ ಅಕ್ರಮದ ತನಿಖೆ ನಡೆಸಿದ ತಂಡವೇ ಈ ಪ್ರಕರಣದ ತನಿಖೆ ನಡೆಸಲಿದ್ದು, ನಿಜಾಂಶ ಬಯಲಿಗೆಳೆಯಲಿದೆ ಎಂದರು.

    ನೋವು
    ಸ್ಯಾಂಟ್ರೋ ರವಿ ನನ್ನ ಜತೆಗೆ ತೆಗೆಯಿಸಿಕೊಂಡ ಫೋಟೋ ಇಟ್ಟುಕೊಂಡು ದೊಡ್ಡ ಕಥೆ ಕಟ್ಟಿದರು. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದರು. ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವಾಗ ಈ ರೀತಿ ಆರೋಪ ಹೊರಿಸಿದರೆ ನೋವಾಗುತ್ತದೆ. ಇದೇ ದಂಧೆ ಮಾಡಿಕೊಂಡವರಿಗೆ ಏನೂ ಅನಿಸುವುದಿಲ್ಲ ಎಂದು ಆರಗ ಜ್ಞಾನೇಂದ್ರ ತಿವಿದರು.

    ವೇದಿಕೆಯಲ್ಲಿ ಮಾಜಿ ಸಿಎಂ ಸಿದ್ದು ವಾರೆ ನೋಟ: ಕೈ ಕಾರ್ಯಕರ್ತೆ ಲಾವಣ್ಯ ಬಲ್ಲಾಳ್​ ಕೊಟ್ಟ ಪ್ರತಿಕ್ರಿಯೆ ಹೀಗಿದೆ….

    ಶಾಲಾ ಮಕ್ಕಳ ಬ್ಯಾಗ್​ನಲ್ಲಿ ಕಾಂಡೋಮ್​ ಪತ್ತೆ ಪ್ರಕರಣ: ಹೊಸ ನಿಯಮ ಜಾರಿಗೆ ತರಲು ಮುಂದಾದ ಸರ್ಕಾರ

    ಮತ್ತೊಮ್ಮೆ ವಿಜಯ್​ ಜೊತೆ ಹಾಟ್​ ಆಗಿ ಕಾಣಿಸಿಕೊಂಡ ತಮನ್ನಾ: ಬೇಸರ ಹೊರಹಾಕಿದ ಅಭಿಮಾನಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts