More

    ಈ ಅದ್ಭುತ ಚಿತ್ರ ಸೆರೆಹಿಡಿಯಲು ಫೋಟೋಗ್ರಾಫರ್ ಕಬಿನಿ​ ಕಾಡಿನಲ್ಲಿ ಕಳೆದ ದಿನವೆಷ್ಟು ಗೊತ್ತಾ?

    ಬೆಂಗಳೂರು: ಕೆಲವು ದಿನಗಳ ಹಿಂದೆ ರಾಜ್ಯದ ಕಬಿನಿ ಅರಣ್ಯದಲ್ಲಿ ಸೆರೆಹಿಡಿಯಲಾಗಿದ್ದ ಕರಿ ಚಿರತೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ್ದವು. ಚಿರತೆ ನೋಡಿದ ಅನೇಕರು ಅದನ್ನು ಜಂಗಲ್ ಬುಕ್‌‌ ಸಿನಿಮಾದ ‘ಬಘೀರಾ’ ಎಂದು ವರ್ಣಿಸಿದ್ದರು. ಚಿತ್ರಗಳನ್ನು ಶಾಜ್​ ಝಂಗ್​ ಎಂಬುವರು ಸೆರೆಹಿಡಿದಿದ್ದರು.

    ಇದನ್ನೂ ಓದಿ: ಸ್ಟೇವ್​ ಹಫ್​ ಯಾರು? ಸುಶಾಂತ್​ ಆತ್ಮದ ಜತೆ ಸಂಪರ್ಕ ಸಾಧಿಸಿದ್ಹೇಗೆ?: ಇಲ್ಲಿದೆ ಕುತೂಹಲಕರ ಸಂಗತಿ!

    ಇದೀಗ ಮತ್ತೊಂದು ಚಿತ್ರ ಜಾಲತಾಣದಲ್ಲಿ ತುಂಬಾ ಸದ್ದು ಮಾಡುತ್ತಿದೆ. ಈ ಬಾರಿ ಬಘೀರಾ ಒಬ್ಬನೇ ಇಲ್ಲ. ಅವನೊಂದಿಗೆ ಚಿರತೆಯೊಂದು ನಿಂತು ಕ್ಯಾಮೆರಾಗೆ ಪೋಸ್​ ನೀಡಿರುವುದು ನೋಡುಗರನ್ನು ಮತ್ತೊಮ್ಮೆ ಸೆಳೆದಿದೆ. ಒಂದು ಚಿತ್ರದಲ್ಲಿ ಕರಿಚಿರತೆ ಹಾಗೂ ಸಾಮಾನ್ಯ ಚಿರತೆ ನೋಡಿದ ನೆಟ್ಟಿಗರು ಅದನ್ನು ಸೆರೆಹಿಡಿದ ಫೋಟೋಗ್ರಾಫರ್​ಗೆ ಭಲೇ ಎಂದಿದ್ದಾರೆ.

    ಸದ್ಯ ವೈರಲ್​ ಆಗಿರುವ ಚಿತ್ರ ನೋಡಿದರೆ ಒಂದು ಕ್ಷಣ ಚಿರತೆಯ ಛಾಯೆ ಇರಬಹುದೇನೋ ಎಂದೆನಿಸದೇ ಇರದು. ಆದರೆ, ಈ ಅಪರೂಪದ ಚಿತ್ರವನ್ನು ಸರೆಹಿಡಿದ ಕೀರ್ತಿ ಮಿಥುನ್.ಎಚ್​ ಅವರಿಗೆ ಸಲ್ಲುತ್ತದೆ. ಈ ಅದ್ಭುತ ಚಿತ್ರ ತೆಗೆಯುಲು ತಾಳ್ಮೆಯಿಂದ ಬರೋಬ್ಬರಿ 6 ದಿನ ಕಾಡಿನಲ್ಲಿ ಕಾದಿದ್ದರಂತೆ.

    ತಮ್ಮ ಅನುಭವವನ್ನು ಫೋಟೋದೊಂದಿಗೆ ಇನ್​ಸ್ಟಾಗ್ರಾಂನಲ್ಲಿ ತಿಳಿಸಿರುವ ಮಿಥುನ್, ಈ ಎರಡು ಪ್ರಾಣಿಗಳು ಕಳೆದ ಕೆಲ ವರ್ಷಗಳಿಂದ ಒಟ್ಟಿಗೆ ಬದುಕುತ್ತಿವೆ ಎಂದಿದ್ದಾರೆ. ಅವುಗಳನ್ನು ಸಾಯಾ ಮತ್ತು ಕ್ಲಿಯೋಪಾತ್ರ ಎಂದು ಕರೆದಿರುವ ಮಿಥುನ್​, ಇಬ್ಬರು ಒಟ್ಟಿಗೆ ಇದ್ದಾಗಲೆಲ್ಲಾ ಅವರು ನೋಡುವ ದೃಷ್ಟಿ ಇದೆ. ಈ ರೀತಿ ಪ್ರಾಣಿಗಳು ಒಟ್ಟಿಗೆ ತಿರುಗಾಡುವಾಗ ಗಂಡು ಪ್ರಾಣಿ ಉಸ್ತುವಾರಿಯನ್ನು ವಹಿಸಿಕೊಂಡು ಹೆಣ್ಣು ಪ್ರಾಣಿಯೊಂದಿಗೆ ತಿರುಗುತ್ತದೆ. ಆದರೆ, ಈ ಜೋಡಿಯ ವಿಚಾರದಲ್ಲಿ ನಡೆದಿದ್ದೇ ಬೇರೆ, ಇಲ್ಲಿ ಕ್ಲಿಯೋ ಉಸ್ತುವಾರಿಯನ್ನು ವಹಿಸಿಕೊಂಡಿದ್ದು, ಕರಿಚಿರತೆ ಅದನ್ನು ಹಿಂಬಾಲಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ಹಿಂದುಳಿದ ಸಮುದಾಯಗಳಿಗೆ ಮೀಸಲು ಮುಂದುವರಿಸಲು ಒತ್ತಾಯಿಸಿ ಶಾಸಕ ರಾಜಾ ವೆಂಕಟಪ್ಪನಾಯಕಗೆ ಮನವಿ

    ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಾಗಿನಿಂದ ಈವರೆಗೂ 63 ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳನ್ನು ಗಿಟ್ಟಿಸಿಕೊಂಡಿದ್ದು, ಫೇಸ್​​ಬುಕ್​ ಹಾಗೂ ಟ್ವಿಟರ್​ನಲ್ಲಿ ಸಿಕ್ಕಾಪಟ್ಟೆ ಶೇರ್​ ಆಗುತ್ತಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts