More

    ಕಂಬಾಲಹಳ್ಳಿ ಮತಗಟ್ಟೆ ಬಳಿ ವಾಮಾಚಾರ ; ಅರಿಶಿಣ-ಕುಂಕುಮ ಹಚ್ಚಿದ ನಿಂಬೆಹಣ್ಣು ಪತ್ತೆ

    ಶಿಡ್ಲಘಟ್ಟ : ಗ್ರಾಪಂ ಚುನಾವಣೆ ಮೊದಲ ಹಂತದ ಮತದಾನಕ್ಕೆ ಕ್ಷಣಗಣನೆ ಶುರುವಾಗಿರುವ ಹೊತ್ತಿನಲ್ಲಿ ಕೆಲವರು ವಾಮಾಚಾರಕ್ಕೆ ಮೊರೆ ಹೋಗಿರುವುದು ಮತದಾರರಲ್ಲಿ ಆತಂಕ ಮೂಡಿಸಿದೆ.

    ಕಂಬಾಲಹಳ್ಳಿ ಸರ್ಕಾರಿ ಶಾಲೆಯ ಮತಗಟ್ಟೆ ಸುತ್ತ ಅರಿಶಿಣ, ಕುಂಕುಮ ಹಚ್ಚಿರುವ ನಿಂಬೆಹಣ್ಣುಗಳನ್ನು ನೆಲದಲ್ಲಿ ಹೂತು ಪೂಜೆ ಸಲ್ಲಿಸಿರುವುದು ಭಾನುವಾರ ಬೆಳಕಿಗೆ ಬಂದಿದೆ. ಚುನಾವಣಾ ಸ್ಪರ್ಧಿ ದಾಸಮ್ಮಎಂಬುವವರ ಪತಿ ವೆಂಕಟಪ್ಪ ಹಾಗೂ ಮಗ ರಾಮಾಂಜಿ ಈ ಕೃತ್ಯವೆಸಗಿದ್ದಾರೆ ಎಂದು ಗ್ರಾಮಸ್ಥರು ದಿಬ್ಬೂರಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.

    ಕಂಬಾಲಹಳ್ಳಿ ಸೇರಿ ಅಕ್ಕಪಕ್ಕದ ಮೂರು ಗ್ರಾಮಗಳ 450 ಮತದಾರರು ಈ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಲಿದ್ದು, ಘಟನೆಯಿಂದ ಈ ಮತಗಟ್ಟೆಗೆ ತೆರಳಿ ಮತ ಚಲಾಯಿಸಲು ಜನರು ಹಿಂದೇಟು ಹಾಕುತ್ತಿದ್ದಾರೆ. ಸ್ಥಳಕ್ಕೆ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ತೆರಳಿ ಪರಿಶೀಲಿಸಿದ್ದು, ಮೂಢನಂಬಿಕೆಗೆ ಬಲಿಯಾಗಿ ಮತದಾನದಿಂದ ದೂರ ಉಳಿಯಬಾರದು. ಶಾಂತಿಯುತ ಮತದಾನಕ್ಕೆ ಅಗತ್ಯವಾದ ಬಂದೋಬಸ್ತ್ ಏರ್ಪಡಿಸಲಾಗುವುದು ಎಂದು ತಹಸೀಲ್ದಾರ್ ಜಿ.ಎಸ್.ಅನಂತರಾಮು ಮತದಾರರಲ್ಲಿ ಮನವಿ ಮಾಡಿದ್ದಾರೆ.

    ಜಾಲತಾಣದಲ್ಲಿ ಹರಿದಾಡಿದ ಚಿತ್ರಗಳು: ಕಂಬಾಲಹಳ್ಳಿ ಮತಗಟ್ಟೆ ಬಳಿ ಮಂತ್ರಿಸಿದ ನಿಂಬೆಹಣ್ಣು ಪತ್ತೆಯಾಗಿರುವ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಪಕ್ಕದ ಬಚ್ಚನಹಳ್ಳಿಯ ಮತಗಟ್ಟೆ ಬಳಿಯೂ ಮಂತ್ರಿಸಿದ ನಿಂಬೆಹಣ್ಣು ಸಿಕ್ಕಿವೆ ಎಂಬ ಸುದ್ದಿ ಹರಿದಾಡಿವೆ, ಆದರೆ ಬಚ್ಚನಹಳ್ಳಿಯಲ್ಲಿ ನಿಂಬೆಹಣ್ಣುಗಳು ಪತ್ತೆಯಾಗಿಲ್ಲ, ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ಗ್ರಾಮಸ್ಥರು ಸ್ಪಷ್ಟಪಡಿಸಿದ ಬಳಿಕ ಮತದಾರರು ನಿಟ್ಟುಸಿರು ಬಿಟ್ಟರು.

    ಕಂಬಾಲಹಳ್ಳಿ ಮತಗಟ್ಟೆಯಲ್ಲಿ ಚುನಾವಣಾ ಅಧಿಕಾರಿಗಳು ಪರಿಶೀಲನೆ ನಡೆಸಿ ಸ್ಥಳ ಸ್ವಚ್ಛಗೊಳಿಸಿದ್ದಾರೆ. ಮತದಾರರು ಭೀತಿಪಡುವ ಅಗತ್ಯ ಇಲ್ಲ. ಯಾವುದೇ ಆತಂಕ ಇಲ್ಲದೆ ಮತದಾರರು ಮತ ಚಲಾಯಿಸಬಹುದು.
    ದಿಢೀರ್ ಎಂದು ಮತಗಟ್ಟೆ ಬದಲಾಯಿಸಲು ಸಾಧ್ಯ ಇಲ್ಲ.
    ಜಿ.ಎಸ್.ಅನಂತರಾಮು, ತಹಸೀಲ್ದಾರ್, ಶಿಡ್ಲಘಟ್ಟ,

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts