More

    ಬ್ಲ್ಯಾಕ್​​ ಫಂಗಸ್​ ಔಷಧಿ : ಉತ್ಪಾದನೆ, ಆಮದು ಹೆಚ್ಚಳ ; ಹೊಸದಾಗಿ 5 ಕಂಪೆನಿಗೆ ಲೈಸೆನ್ಸ್​

    ನವದೆಹಲಿ : ಕರೊನಾ ಸೋಂಕಿತರಲ್ಲಿ ಅಡ್ಡಪರಿಣಾಮವಾಗಿ ಕಾಣಿಸಿಕೊಳ್ಳುತ್ತಿರುವ ಕಪ್ಪು ಶಿಲೀಂಧ್ರ(ಬ್ಲ್ಯಾಕ್​ ಫಂಗಸ್) ರೋಗದ ಚಿಕಿತ್ಸೆಗೆ ಬಳಸಲಾಗುವ ಆಂಫೊಟೆರಿಸಿನ್-ಬಿ ಔಷಧದ ಲಭ್ಯತೆ ಮತ್ತು ಪೂರೈಕೆಗಾಗಿ ಕೇಂದ್ರ ಸರ್ಕಾರ ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಈ ನಿಟ್ಟಿನಲ್ಲಿ ದೇಶದಲ್ಲಿ ಈ ಔಷಧ ಉತ್ಪಾದನೆ ಮಾಡುತ್ತಿರುವ 5 ಕಂಪೆನಿಗಳಿಗೆ ತಯಾರಿಕೆ ಹೆಚ್ಚಿಸಲು ನೆರವು ನೀಡಿದ್ದು, ಹೆಚ್ಚುವರಿಯಾಗಿ ಇನ್ನೂ 5 ಉತ್ಪಾದಕರಿಗೆ ಲೈಸನ್ಸ್ ಮಂಜೂರು ಮಾಡಲಾಗಿದೆ ಎಂದು ಪ್ರೆಸ್​ ಇನ್​​​ಫರ್ಮೇಷನ್ ಬ್ಯೂರೋ ತಿಳಿಸಿದೆ.

    ಕೇಂದ್ರ ಆರೋಗ್ಯ ಸಚಿವಾಲಯ, ಫಾರ್ಮಸುಟಿಕಲ್ಸ್ ಇಲಾಖೆ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ದೇಶೀಯವಾಗಿ ಆಂಫೊಟೆರಿಸಿನ್-ಬಿ ಉತ್ಪಾದನೆ ಹೆಚ್ಚಿಸುವುದರೊಂದಿಗೆ, ಜಾಗತಿಕ ಉತ್ಪಾದಕರಿಂದ ಆಮದು ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳುತ್ತಿವೆ. ಕಪ್ಪು ಶಿಲೀಂಧ್ರ ರೋಗಕ್ಕೆ ಚಿಕಿತ್ಸೆ ನೀಡಲು ಇತರ ಶಿಲೀಂಧ್ರ ನಿಗ್ರಹ ಔಷಧಗಳ ಖರೀದಿಗೂ ಸಹ ಪ್ರಯತ್ನ ನಡೆದಿದೆ ಎನ್ನಲಾಗಿದೆ.

    ಇದನ್ನೂ ಓದಿ: ಜೈಲಿಗೆ ಹೋಗುವುದಕ್ಕೂ ಬೇಸರವಿಲ್ಲ ಎಂದು ಶಾರೂಖ್ ಹೇಳಿದ್ದ್ಯಾಕೆ?

    ಪ್ರಸ್ತುತ, ಭಾರತ್ ಸೀರಮ್ಸ್ ಅಂಡ್ ವ್ಯಾಕ್ಸಿನ್ಸ್​​, ಬಿಡಿಆರ್ ಫಾರ್ಮಸುಟಿಕಲ್ಸ್, ಸನ್ ಫಾರ್ಮಾ, ಸಿಪ್ಲಾ ಮತ್ತು ಲೈಫ್ ಕೇರ್ ಇನ್ನೋವೇಷನ್ಸ್ ಕಂಪೆನಿಗಳು ಆಂಫೊಟೆರಿಸಿನ್-ಬಿ ಉತ್ಪಾದನೆ ಮಾಡುತ್ತಿವೆ. ಮೈ ಲ್ಯಾಬ್ಸ್ ಕಂಪೆನಿ ಆಮದಿನಲ್ಲಿ ತೊಡಗಿದೆ. ಸರಕಾರ ಹೆಚ್ಚಿನ ಉತ್ಪಾದನೆಗೆ ನೆರವು ನೀಡಿದ್ದು, ಮೇ 2021ರಲ್ಲಿ ಒಟ್ಟಾರೆ 1,63,752 ವಯಲ್ಸ್ ಆಂಫೊಟೆರಿಸಿನ್-ಬಿ ಉತ್ಪಾದಿಸಿವೆ. ಈ ಪ್ರಮಾಣ 2021ರ ಜೂನ್ ತಿಂಗಳಲ್ಲಿ ಮತ್ತಷ್ಟು ಹೆಚ್ಚಳ ಮಾಡಿ 2,55,114 ವಯಲ್ಸ್ ಉತ್ಪಾದಿಸಲಾಗುವುದು ಎಂದಿದೆ.

    ಹೊಸದಾಗಿ ಈ ಔಷಧಿಯನ್ನು ಉತ್ಪಾದಿಸಲು – ನ್ಯಾಟ್ಕೋ ಫಾರ್ಮಸುಟಿಕಲ್ಸ್(ಹೈದರಾಬಾದ್), ಅಲೆಂಬಿಕ್ ಫಾರ್ಮಸುಟಿಕಲ್ಸ್(ವಡೋದರ), ಗುಫಿಕ್ ಬೈಯೋ ಸೈನ್ಸ್ ಲಿಮಿಟೆಡ್(ಗುಜರಾತ್), ಎಮ್ ಕ್ಯೂರ್ ಫಾರ್ಮಸುಟಿಕಲ್ಸ್(ಪುಣೆ) ಮತ್ತು ಲೈಕಾ(ಗುಜರಾತ್) – ಈ ಐದು ಕಂಪೆನಿಗಳಿಗೆ ಪರವಾನಗಿ ನೀಡಲಾಗಿದೆ. ಒಟ್ಟಾರೆ ಈ ಕಂಪನಿಗಳು ಜುಲೈ 2021 ರಿಂದ ಪ್ರತಿ ತಿಂಗಳು 1,11,000 ವಯಲ್ಸ್ ಉತ್ಪಾದನೆ ಆರಂಭಿಸಲಿವೆ ಎನ್ನಲಾಗಿದೆ.

    ಇದನ್ನೂ ಓದಿ: ಹೇರಳವಾಗಿ ಲಭ್ಯವಾಗಲಿದೆ ಸ್ಪುಟ್ನಿಕ್ ವಿ ಲಸಿಕೆ; ಆಗಸ್ಟ್​​ನಿಂದ ಭಾರತದಲ್ಲೇ ಉತ್ಪಾದನೆ ಶುರು

    ಆಮದು ಮೂಲಕ ಈ ಆ್ಯಂಟಿಫಂಗಲ್ ಔಷಧವನ್ನು ಪಡೆಯುವ ಪ್ರಯತ್ನವೂ ನಡೆದಿದ್ದು, ಮೇ 2021ರಲ್ಲಿ 3,63,000 ವಯಲ್ಸ್ ಆಂಫೊಟೆರಿಸಿನ್-ಬಿ ಆಮದು ಮಾಡಿಕೊಳ್ಳಲಾಗಿದೆ, ಇದರಿಂದಾಗಿ ಒಟ್ಟಾರೆ ದೇಶದಲ್ಲಿ ಲಭ್ಯತೆಯು (ದೇಶೀಯ ಉತ್ಪಾದನೆ ಸೇರಿ) ಪ್ರಮಾಣ 5,26,752ಕ್ಕೆ ಏರಿಕೆಯಾಗಿದೆ. ಜೂನ್ 2021 ರಿಂದ 3,15,000 ವಯಲ್ಸ್ ಆಮದು ಮಾಡಿಕೊಳ್ಳಲಾಗುವುದು. ಹಾಗಾಗಿ ಜೂನ್ 2021ರಲ್ಲಿ ಒಟ್ಟು ಆಂಫೊಟೆರಿಸಿನ್-ಬಿ ಲಭ್ಯತೆ ಪ್ರಮಾಣ 5, 70,114 ವಯಲ್ಸ್​​​ಗೆ ಹೆಚ್ಚಾಗಲಿದೆ ಎಂದು ಸರ್ಕಾರ ತಿಳಿಸಿದೆ.

    ತಿಂಗಳಿಗೆ 1 ಕೋಟಿ ಕೋವಾಕ್ಸಿನ್ ಡೋಸ್​ ತಯಾರಿಸಲಿದೆ ಬಿಬ್ಕಾಲ್

    17 ವರ್ಷದ ಬಾಲಕ ಬಲಿ… ಕರೊನಾಗಿಂತ ಮಾರಕವಾದ ಪೊಲೀಸರ ಲಾಠಿ !

    ಡಿಎಲ್​ಎಫ್​ ಲಂಚ ಪ್ರಕರಣದಲ್ಲಿ ಲಾಲು ಪ್ರಸಾದ್​ ಯಾದವ್​​ಗೆ ಕ್ಲೀನ್​ ಚಿಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts