More

    ಸೊಸೈಟಿಗಳಲ್ಲಿ ಕಪ್ಪು-ಬಿಳುಪು ದಂಧೆ!: ದಿವಾಳಿ ಸಂಘಗಳಲ್ಲಿ ನಡೆಯುತ್ತಿದೆ ಬ್ಲ್ಯಾಕ್ ಆ್ಯಂಡ್ ವೈಟ್ ಹಣದ ವ್ಯವಹಾರ

    ಬೆಂಗಳೂರು: ನಿವೇಶನ ಖರೀದಿಸುವ ಕನಸು ಹೊತ್ತು ಸದಸ್ಯತ್ವ ಪಡೆದು ಹಣ ಕಟ್ಟಿದವರಿಗೆ ಐದು, ಹತ್ತು ವರ್ಷಗಳಿಂದ ಸೈಟ್ ಕೊಡದೆ ಸತಾಯಿಸುತ್ತಿರುವ ಹಲವು ಗೃಹ ನಿರ್ಮಾಣ ಸಹಕಾರ ಸಂಘಗಳು ಬೇನಾಮಿ ಹಣವನ್ನು ಸಕ್ರಮಗೊಳಿಸುವ ಕಪು್ಪ-ಬಿಳುಪು ದಂಧೆಯಲ್ಲೂ ಶಾಮೀಲಾಗಿರುವ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ. ಸೊಸೈಟಿ ಹಾಗೂ ಭೂ ಮಾಲೀಕರ ನಡುವೆ ಕೈಜೋಡಿಸುತ್ತಿರುವ ಬಿಲ್ಡರ್​ಗಳು ಹಾಗೂ ರಿಯಲ್ ಎಸ್ಟೇಟ್ ಏಜೆಂಟ್​ಗಳು ಈ ದಂಧೆಯಲ್ಲಿ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಕೆಲವರು ಬ್ಲಾ್ಯಕ್ ಮನಿ ಹೂಡಿಕೆ ಮಾಡುವ ಉದ್ದೇಶದಿಂದಲೇ ಬೇನಾಮಿ ಹೆಸರಿನಲ್ಲಿ ಸಹಕಾರ ಸಂಘಗಳನ್ನು ಸ್ಥಾಪಿಸುತ್ತಿದ್ದಾರೆ. ಆ ಮೂಲಕ ಅಡ್ಡದಾರಿಯಲ್ಲಿ ವ್ಯವಹಾರ ನಡೆಸಿ, ಕಪು್ಪ ಹಣವನ್ನು ವೈಟ್ ಮನಿಯಾಗಿ ಪರಿವರ್ತನೆ ಮಾಡಿಕೊಳ್ಳುತ್ತಿದ್ದಾರೆಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ ಕೇಂದ್ರ, ರಾಜ್ಯ ಸರ್ಕಾರ ವಿವಿಧ ಇಲಾಖೆಗಳ ಹೆಸರಿನಲ್ಲಿ ನೌಕಕರ ಸಂಘದವರು ಗೃಹಮಂಡಳಿ ನಿರ್ಮಾಣ ಸಹಕಾರ ಸಂಘ ತೆರೆದಿದ್ದಾರೆ. ಇಲ್ಲಿ ಮೊದಲಿಗೆ ಆಯಾ ಇಲಾಖೆಯ ಸದಸ್ಯರಿಗೆ ಮಾತ್ರವೇ ನಿವೇಶನ ಹಂಚಿಕೆ ಮಾಡಲಾಗುತ್ತದೆ ಎಂದು ಹೇಳಿ ಸದಸ್ಯರನ್ನು ನಂಬಿಸುತ್ತಾರೆ.

    ಇದರಿಂದ ಬಹುತೇಕ ನಿವೃತ್ತ ನೌಕರರು ಬಂಡಾವಳ ಹೂಡಿಕೆ ಮಾಡುತ್ತಾರೆ. ಕೊನೆಯಲ್ಲಿ ನಿವೇಶನಗಳು ಉಳಿದಾಗ ಇತರ ಪ್ರತಿ ಸದಸ್ಯರಿಗೆ ನೀಡಲಾಗುವುದೆಂದು ಸಾಮಾನ್ಯ ಜನರಿಗೂ ಸದಸ್ಯತ್ವ ನೀಡಿ ಅವರಿಗೂ ನಿವೇಶನ ಹಂಚಿಕೆ ಮಾಡಲಾಗುತ್ತದೆ. ಸದಸ್ಯ ಮತ್ತು ಪ್ರತಿ ಸದಸ್ಯರ ನಡುವಿನ ನಿವೇಶನ ದರದಲ್ಲಿ ಹೆಚ್ಚಿನ ಬದಲಾವಣೆ ಇರುವುದಿಲ್ಲ ಚದರ ಅಡಿಗೆ 10 ರೂ. ಅಷ್ಟೇ ಹೆಚ್ಚಿನ ಬೆಲೆ ಇರಲಿದೆ. ಇದರಿಂದ ಜನರು ಹೂಡಿಕೆಗೆ ಮುಂದಾಗುತ್ತಾರೆ.

    ಸರ್ಕಾರ ಸ್ವಾಮ್ಯದ್ದೇ ಹೆಚ್ಚು: ರಾಜ್ಯದಲ್ಲಿ 5ರಿಂದ 10ವರ್ಷವಾದರೂ ನಿವೇಶನ ಕೊಡದ ಗೃಹ ಮಂಡಳಿಗಳ ಪಟ್ಟಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ನೌಕರರ ಮಂಡಳಿಗಳೇ ಹೆಚ್ಚಿವೆ. ಖಾಸಗಿ ರಿಯಲ್ ಎಸ್ಟೇಟ್ ಕಂಪನಿಗಳ ಮೇಲೆ ನಂಬಿಕೆ ಕಳೆದುಕೊಳ್ಳುತ್ತಿರುವ ನೌಕರರು ತಮ್ಮ ಇಲಾಖೆಯವರೇ ಮಾಡಿರುವ ಸೊಸೈಟಿ ಎಂಬ ನಂಬಿಕೆಯೇ ಮೇಲೆ ಹಣ ಹೂಡಿಕೆ ಮಾಡಿ ಇಲ್ಲಿಯೂ ಸಹ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾರೆ. 5ರಿಂದ 10 ವರ್ಷವಾದರೂ ನಿವೇಶನ ನೀಡದ ಪಟ್ಟಿಯಲ್ಲಿ 127 ಗೃಹ ನಿರ್ಮಾಣ ಸಹಕಾರ ಸಂಘಗಳಿದ್ದು, ಇದರಲ್ಲಿ 56 ಸಂಘಗಳು ಕೇಂದ್ರ ಮತ್ತು ಸರ್ಕಾರದ ಇಲಾಖೆಯ ಹೆಸರಿನಲ್ಲೇ ಇವೆ.

    ಎಲ್ಲ ಗೃಹ ನಿರ್ಮಾಣ ಸಹಕಾರ ಸಂಘಗಳೂ ಅಕ್ರಮದಲ್ಲಿ ತೊಡಗಿವೆ ಎಂದು ಹೇಳುವುದು ಕಷ್ಟ. ಕೆಲವು ಸಂಘ ಸಂಸ್ಥೆಗಳು ಜನರಿಗೆ ಅನ್ಯಾಯ ಮಾಡುತ್ತಿರುವ ಬಗ್ಗೆ ದೂರು ಬಂದಿದ್ದು, ನಾವು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಸಾರ್ವಜನಿಕರು ದೂರು ದಾಖಲಿಸಿದಲ್ಲಿ, ನ್ಯಾಯ ದೊರಕಿಸಿಕೊಡುತ್ತೇವೆ.

    | ಎಸ್.ಜಿಯಾವುಲ್ಲಾ ರಿಜಿಸ್ಟ್ರಾರ್, ಸಹಕಾರ ಸಂಘ ಕರ್ನಾಟಕ

    ಹೇಗೆ ನಡೆಯುತ್ತೆ ವ್ಯವಹಾರ?

    ಸೊಸೈಟಿ ಸದಸ್ಯರಿಂದ ಹಣ ಪಾವತಿಸಿಕೊಂಡ ನಂತರ ನಿವೇಶನಕ್ಕಾಗಿ ಭೂಮಿ ಖರೀದಿಸುವ ಪ್ರಕ್ರಿಯೆ ಆರಂಭಿಸಲಾಗುತ್ತದೆ. ಆ ಸಂದರ್ಭದಲ್ಲಿ ಬಿಲ್ಡರ್​ಗಳು ಅಥವಾ ರಿಯಲ್ ಎಸ್ಟೇಟ್ ಏಜೆಂಟ್​ಗಳು ಮಧ್ಯಪ್ರವೇಶಿಸಿ ಸೊಸೈಟಿ ಅಧ್ಯಕ್ಷರ ಜತೆ ಡೀಲ್ ಕುದುರಿಸುತ್ತಾರೆ. ಉತ್ತಮ ಬೆಲೆಗೆ ಭೂಮಿ ಕೊಡಿಸುವುದಾಗಿ ಭರವಸೆ ಕೊಟ್ಟು ಇಂತಿಷ್ಟು ಕಮಿಷನ್ ನಿಗದಿಪಡಿಸುತ್ತಾರೆ. ಭೂಮಿ ಖರೀದಿಸುವ ವೇಳೆ ಮಾಲೀಕನಿಗೆ ನಗದು ರೂಪದಲ್ಲಿ ಬ್ಲಾ್ಯಕ್ ಮನಿ ಕೊಟ್ಟು, ಸದಸ್ಯರಿಂದ ಪಡೆದ ಹಣವನ್ನು ವೈಟ್​ವುನಿಯಾಗಿ ಖಾತೆಗೆ ವರ್ಗಾವಣೆ ಮಾಡಿಕೊಳ್ಳುತ್ತಾರೆ ಎಂದು ಸಹಕಾರ ಇಲಾಖೆ ಮೂಲಗಳು ಮಾಹಿತಿ ನೀಡಿವೆ. ಸದಸ್ಯರ ಹಣ ನೇರವಾಗಿ ಖಾತೆಗೆ ಬರುವುದರಿಂದ ಕಾನೂನು ಬದ್ಧವಾಗಿಯೇ ಕಪ್ಪು ಹಣ ಬಿಳಿಯಾಗಿ ಪರಿವರ್ತನೆಯಾಗುತ್ತದೆ.

    ಕಾರಣ ಏನು?: ಬ್ರೋಕರೇಜ್, ನೋಂದಣಿ ಶುಲ್ಕ, ರಾಜಸ್ವ ನಿಧಿ, ಮುದ್ರಾಂಕ ಶುಲ್ಕ ಸೇರಿ ಇತರ ಪ್ರಕ್ರಿಯೆಗಳಿಗೆ ನಗದು ಹಣ ಚಲಾವಣೆಯಲ್ಲಿರುವುದರಿಂದ ಬ್ಲಾ್ಯಕ್ ಆಂಡ್ ವೈಟ್ ವ್ಯವಹಾರ ಹೆಚ್ಚಿದೆ. ಮೊದಲೆಲ್ಲ ಚಿನ್ನದ ಮೇಲೆ ಬ್ಲಾ್ಯಕ್​ವುನಿ ಹೂಡಿಕೆಯಾಗುತ್ತಿತ್ತು. ನಂತರದಲ್ಲಿ ರಿಯಲ್ ಎಸ್ಟೇಟ್​ನಲ್ಲೇ ಅತಿ ಹೆಚ್ಚು ವರ್ಗಾವಣೆಯಾಗುತ್ತಿದೆ ಎನ್ನಲಾಗುತ್ತಿದೆ. ಈ ರೀತಿ ರಿಯಲ್ ಎಸ್ಟೇಟ್​ನಲ್ಲಿ ಬ್ಲ್ಯಾಕ್ ಆಂಡ್ ವೈಟ್ ಮಾಡುವುದಕ್ಕೆ ಪ್ರಮುಖ ಕಾರಣ ಇಲ್ಲಿ ಸಿಕ್ಕಿಹಾಕಿಕೊಳ್ಳುವ ಪ್ರಮಾಣ ಕಡಿಮೆ. ಒಂದು ವೇಳೆ ಸಿಕ್ಕಿ ಹಾಕಿಕೊಂಡರೂ, ಶಿಕ್ಷೆಯ ಪ್ರಮಾಣವೂ ಕಡಿಮೆ. ಅಲ್ಲದೆ, ಪ್ರಾಪರ್ಟಿಯ ಮೇಲಿನ ಹೂಡಿಕೆ ಎಂದಿದೂ ಲಾಭದಾಯಕವಾಗಿರಲಿದೆ. ಈ ಅಂಶಗಳಿಂದಲೇ ಹಣವನ್ನು ಹೆಚ್ಚಾಗಿ ಇಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಾರೆ.

    ಸಂಘಕ್ಕೆ ಶಂಕುಸ್ಥಾಪನೆ ಹೇಗೆ?: ಇಲಾಖೆಗಳಲ್ಲಿ ಜಾತಿ ಮತ್ತು ಹಣ ಬಲ ಇರುವ ವ್ಯಕ್ತಿಯೇ ಸೊಸೈಟಿಯ ಸಂಸ್ಥಾಪಕನಾಗುತ್ತಾನೆ. ಇಲಾಖೆಗಳಲ್ಲಿ ಜನರ ವಿಶ್ವಾಸಗಳಿಸುತ್ತಾನೆ. ವಿರೋಧ ಇರುವವರನ್ನೇ ಸೊಸೈಟಿಯ ನಿರ್ದೇಶಕ ಸ್ಥಾನ ನೀಡುವುದಾಗಿ ಒಳ ಸೇರಿಸಿಕೊಳ್ಳುತ್ತಾರೆ. ಇಲ್ಲಿನ ವ್ಯವಹಾರ- ಅವ್ಯವಹಾರ ಸೊಸೈಟಿಯ ಪ್ರತಿ ನಿರ್ದೇಶಕನಿಗೆ ತಿಳಿದಿದ್ದರೂ ಹೊರಗಡೆ ಹೇಳುವುದಿಲ್ಲ.

    ಬಡ್ಡಿ ಆಸೆಗೆ ಬೇರೆಡೆ ಹಣ ಹೂಡಿಕೆ: ಬಹುತೇಕ ಸೊಸೈಟಿಗಳು ದಿವಾಳಿಯಾಗಲು ಅಧ್ಯಕ್ಷರು, ಇತರ ಪದಾಧಿಕಾರಿಗಳೇ ಕಾರಣ. ಸದಸ್ಯರ ಹಣವನ್ನು ಹೆಚ್ಚಿನ ಬಡ್ಡಿ ಆಸೆಗೆ ಬೇರೆಬೇರೆ ಕಡೆ ಹೂಡಿಕೆ ಮಾಡುತ್ತಾರೆ. ನಿಗದಿತ ಸಮಯಕ್ಕೆ ಹಣ ವಾಪಸ್ ಬಾರದಿದ್ದಾಗ ಸೊಸೈಟಿ ದಿವಾಳಿಯಾಗುತ್ತದೆ.

    ಸೊಸೈಟಿ ಸೈಟ್ ಧೋಖಾ! ಹಣ ಕಟ್ಟಿ 5-10 ವರ್ಷ ಕಳೆದರೂ ಕೈಸೇರದ ನಿವೇಶನ; ಮುಚ್ಚುವ ಹಂತದಲ್ಲಿವೆ 362 ಗೃಹ ನಿರ್ಮಾಣ ಸಂಘಗಳು

    ಸೊಸೈಟಿ ಸೈಟ್ ಧೋಖಾ ತಲ್ಲಣ!; ವಿಜಯವಾಣಿ ವರದಿಗೆ ಸ್ಪಂದನೆ, ಇನ್ನಷ್ಟು ಕರ್ಮಕಾಂಡ ಬಯಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts