More

    ಕೆರೆಗೋಡ ಘಟನೆ ಖಂಡಿಸಿ ಬಿಜೆಪಿ ಪ್ರತಿಭಟನೆ

    ಹುಬ್ಬಳ್ಳಿ : ಮಂಡ್ಯ ಜಿಲ್ಲೆಯ ಕೆರೆಗೋಡ ಗ್ರಾಮದಲ್ಲಿನ ಹನುಮಧ್ವಜ ತೆರವು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ನಗರದ ಮಿನಿ ವಿಧಾನಸೌಧದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

    ರಾಜ್ಯ ಕಾಂಗ್ರೆಸ್ ಸರ್ಕಾರ ಶ್ರೀರಾಮ ಮತ್ತು ಹಿಂದು ವಿರೋಧಿ ಸರ್ಕಾರ ಆಡಳಿತ ನಡೆಸುತ್ತಿದೆ. ಕೆರೆಗೋಡಿನಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಅನುಮತಿಯೊಂದಿಗೆ ಹನುಮ ಧ್ವಜವನ್ನು ಆರೋಹಣ ಮಾಡಲಾಗಿತ್ತು. ಆದರೆ, ಸ್ಥಳೀಯ ಶಾಸಕರ ಪ್ರಚೋದನೆಯಿಂದ ಹನುಮಧ್ವಜವನ್ನು ಪೊಲೀಸರ ದುರ್ಬಳಕೆ ಮಾಡಿ ಈ ಕೃತ್ಯ ನಡೆಸಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

    ರಾಜ್ಯ ಸರ್ಕಾರವು ನಿರಂತರವಾಗಿ ಹಿಂದು ವಿರೋಧಿ ಧೋರಣೆ ಅನುಸರಿಸುತ್ತಿದ್ದು, ದೌರ್ಜನ್ಯ, ದಬ್ಬಾಳಿಕೆ ನಡೆಸುತ್ತಿದೆ. ಒಂದು ಧರ್ಮದ ಪರವಾಗಿ ತುಷ್ಟೀಕರಣ ನೀತಿಯನ್ನು ಅನುಸರಿಸುತ್ತಿದೆ ಎಂದು ದೂರಿದರು.

    ಕೆರೆಗೋಡಿನಲ್ಲಿ ಮತ್ತೆ ಹನುಮ ಧ್ವಜವನ್ನು ಹಾರಿಸಬೇಕು. ಈ ಮೂಲಕ ಹಿಂದು ಸಮಾಜಕ್ಕೆ ಗೌರವ ಕೊಡುವ ಮಾದರಿಯಲ್ಲಿ ರಾಜ್ಯ ಸರ್ಕಾರ ನಡೆದುಕೊಳ್ಳಬೇಕೆಂದು ಒತ್ತಾಯಿಸಿದರು.

    ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯಪಾಲರು ಮತ್ತು ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ಬಿಜೆಪಿ ಮಹಾನಗರ ಜಿಲ್ಲಾ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಶಾಸಕ ಮಹೇಶ ಟೆಂಗಿನಕಾಯಿ, ಪ್ರಮುಖರಾದ ದತ್ತಮೂರ್ತಿ ಕುಲಕರ್ಣಿ, ಜಯತಿರ್ಥ ಕಟ್ಟಿ, ಮಹೇಂದ್ರ ಕೌತಾಳ, ತೋಟಪ್ಪ ನೀಡಗುಂದಿ, ಕೃಷ್ಣಾ ಗಂಡಗಾಳೇಕರ, ವಸಂತ ನಾಡಜೋಶಿ, ಮುರಗೇಶ ಹೊರಡಿ, ಅಶೋಕ ವಾಲ್ಮೀಕಿ, ಮಂಜುನಾಥ ಕಾಟಕರ, ರಾಜು ಕಾಳೆ, ಶಶಿಕಾಂತ ಬಿಜವಾಡ, ವಿಶ್ವನಾಥ ಪಾಟೀಲ, ಸಂತೋಷ ವೇರ್ಣೆಕರ, ಉಮಾ ಮುಕುಂದ, ಅಕ್ಕಮ್ಮಾ ಹೆಗಡೆ, ಸವಿತಾ ಚವ್ಹಾಣ, ಸಂಗೀತಾ ಬದ್ದಿ ಹಾಗೂ ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts