More

    ಕಾಂಗ್ರೆಸ್ ವಿಸರ್ಜನೆಗೆ ರಾಹುಲ್ ರೂವಾರಿ

    ಸೇಡಂ: ಸೋನಿಯಾ, ರಾಹುಲ್ ಗಾಂಧಿ ಹಾಗೂ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ದೇಶದೆಲ್ಲೆಡೆ ಸಂಚರಿಸಿ ಕಾಂಗ್ರೆಸ್ ವಿಸರ್ಜನೆ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಈ ಮೂಲಕ ಗಾಂಧೀಜಿ ಅವರ ಕನಸು ನನಸಾಗಿಸಲು ಶ್ರಮಿಸುತ್ತಿದ್ದಾರೆ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್ ವ್ಯಂಗ್ಯವಾಡಿದರು.

    ರಥಬೀದಿಯಲ್ಲಿ ತಾಲೂಕು ಬಿಜೆಪಿಯಿಂದ ಆಯೋಜಿಸಿದ್ದ ಗೋಡೆ ಬರಹ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಿ ಲೋಕಸಭಾ ಪ್ರಚಾರ ಆರಂಭಿಸಿದ ಅವರು, ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ವಿಸರ್ಜನೆ ಮಾಡುವಂತೆ ಮಹಾತ್ಮಾ ಗಾಂಧೀಜಿ ಸೂಚಿಸಿದ್ದರು. ಆದರೆ ಜವಹಾರಲಾಲ್ ನೆಹರು ಆ ಕೆಲಸ ಮಾಡಲಿಲ್ಲ. ಇದೀಗ ಕಾಂಗ್ರೆಸ್ ನಾಯಕರು ಗಾಂಧಿ ಕನಸು ಸಾಕಾರಗೊಳಿಸುತ್ತಿದ್ದಾರೆ. ದಿನಕ್ಕೊಬ್ಬರು ಕೈ ನಾಯಕರು ಪಾರ್ಟಿ ತೊರೆಯುತ್ತಿದ್ದಾರೆ ಎಂದರು.

    ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸುವ ನಿಟ್ಟಿನಲ್ಲಿ ನಿರ್ಮಾಣವಾದ ಇಎನ್‌ಡಿಐಎ (ಇಂಡಿಯಾ) ಒಕ್ಕೂಟದಿಂದ ಛಿದ್ರ-ಛಿದ್ರವಾಗಿದೆ. ದಿನಕ್ಕೊಂದು ಪಾರ್ಟಿ ಒಕ್ಕೂಟದಿಂದ ದೂರವಾಗುತ್ತಿವೆ. ಕಾಂಗ್ರೆಸ್ ನಾಯಕರನ್ನು ಮೋದಿ ಅವರನ್ನು ವಿರೋಧಿಸುವ ಭರಾಟೆಯನ್ನು ಮರ್ಯಾದ ಪುರುಷೋತ್ತಮ ಶ್ರೀರಾಮನಿಗೆ ಅಪಮಾನ ಮಾಡಿದ್ದಾರೆ ಎಂದು ದೂರಿದರು.

    ಕಳೆದ ೯ ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಚಿತ್ರಣವನ್ನೇ ಬದಲಾಯಿಸಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ ಜಗತ್ತಿನ ಸಣ್ಣ-ಪುಟ್ಟ ರಾಷ್ಟçಗಳು ಭಾರತದ ಮೇಲೆ ಸವಾರಿ ಮಾಡುತ್ತಿದ್ದವು. ಆದರೆ ಮೋದಿ ನೇತೃತ್ವದಲ್ಲಿ ಜಗತ್ತಿನ ಬಲಿಷ್ಠ ರಾಷ್ಟ್ರಗಳು ಭಾರತಕ್ಕೆ ಸಲಾಮ್ ಹೊಡೆಯುತ್ತಿವೆ. ಜಗತ್ತಿನ ಯಾವುದೇ ಮೂಲೆಯಲ್ಲೂ ಭಾರತದ ಪ್ರಜೆಗಳಿಗೆ ಸಮಸ್ಯೆ ಆಗುತ್ತಿದ್ದರೆ ಥಟ್ಟನೆ ಕೇಂದ್ರ ಸರ್ಕಾರ ನೆರವಿಗೆ ಬರುತ್ತಿದೆ. ರಷ್ಯಾ- ಉಕ್ರೇನ್ ಯುದ್ಧದ ಸಮಯದಲ್ಲಿ ಮೋದಿ ಅವರು ಎರಡು ದೇಶಗಳ ಅಧ್ಯಕ್ಷರೊಂದಿಗೆ ಮಾತನಾಡಿ, ಸಮಸ್ಯೆಗೆ ಸಿಲುಕಿಕೊಂಡಿದ್ದ ಭಾರತೀಯ ಯುವಕರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆ ತಂದಿದ್ದರು. ಇದು ಭಾರತ ಹಾಗೂ ಮೋದಿಯ ತಾಕತ್ತು ಎಂದು ಶ್ಲಾಘಿಸಿದರು.

    ಸಂಸದ ಡಾ.ಉಮೇಶ ಜಾಧವ್, ಕಲಬುರಗಿ-ಬೀದರ್ ಲೋಕಸಭಾ ಚುನಾವಣೆ ಉಸ್ತುವಾರಿ ಹಾಗೂ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಮಾತನಾಡಿದರು.

    ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕ ಬಸವರಾಜ ಮತ್ತಿಮಡು, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಪ್ರಮುಖರಾದ ಶೋಭಾ ಬಾಣಿ, ಪರ್ವತರೆಡ್ಡಿ ಪಾಟೀಲ್, ಸತೀಶ ಪಾಟೀಲ್ ತರನಳ್ಳಿ, ಅಶೋಕ ಬಗಲಿ ಇತರರಿದ್ದರಯ.

    ಲೂಟಿ ಮಾಡದವರು ಇಡಿಗೆ ಭಯಪಡುವುದೇಕೆ ?
    ಕಾಂಗ್ರೆಸ್ ದೇಶವನ್ನು ೬೦ ವರ್ಷ ಆಳಿದ್ದು, ಸಾಧನೆ ಮಾತ್ರ ಶೂನ್ಯವಾಗಿದೆ. ಬರೀ ಭ್ರಷ್ಟಾಚಾರದಲ್ಲಿಯೇ ಕಾಲ ಕಳೆದಿದೆ. ೨ಜಿ, ೩ಜಿ, ಕಲ್ಲಿದ್ದಲು ಸೇರಿ ಕೇವಲ ಹಗರಣಗಳನ್ನೇ ಮಾಡಿಕೊಂಡು ಬಂದಿದೆ. ಕಾಂಗ್ರೆಸ್ ನಾಯಕರಿಗೆ ಇಡಿ, ಸಿಬಿಐ ಎಂದರೆ ಭಯ ಶುರುವಾಗಿದೆ. ನೀವು ಭ್ರಷ್ಟಾಚಾರ ಮಾಡದಿದ್ದರೆ, ತನಿಖೆ ಸಂಸ್ಥೆಗಳಿಗೆ ಭಯಪಡುವುದೇಕೆ? ಎಂದು ಶಿವಾರಾಜ್ ಸಿಂಗ್ ಚೌಹಾಣ್ ಟಾಂಗ್ ನೀಡಿದರು.

    ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ೩೭೦ಕ್ಕೂ ಅಧಿಕ ಹಾಗೂ ಎನ್‌ಡಿಎ ಒಕ್ಕೂಟ ೪೦೦ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ, ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಕಲಬುರಗಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವ ಮೂಲಕ ಡಾ.ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸರಿಯಾದ ಚುರುಕು ಮುಟ್ಟಿಸಬೇಕು.
    | ಶಿವಾರಾಜ್‌ಸಿಂಗ್ ಚೌಹಾಣ್, ಮಾಜಿ ಮುಖ್ಯಮಂತ್ರಿ, ಮಧ್ಯಪ್ರದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts