More

    ದೇಶದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವ ಸಂಕಲ್ಪ: ವಿಜಯೇಂದ್ರ

    ಬೆಂಗಳೂರು:
    ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವ ಸಂಕಲ್ಪ ಪತ್ರವನ್ನು ಜನರ ಮುಂದಿಡಲಾಗಿದೆ ಎಂದು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
    ಬಿಜೆಪಿ ಚುನಾವಣಾ ಪ್ರಣಾಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಪ್ರನಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷದಂತೆ ಪೊಳ್ಳು ಭರವಸೆಗಳನ್ನು ನೀಡಿಲ್ಲ ಎಂದರು.
    ದೇಶದ 97 ಕೋಟಿ ಮತದಾರರ ಮುಂದೆ ಮಂಡಿಸಿರುವ ಸಂಕಲ್ಪ ಪತ್ರದಲ್ಲಿ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಬದ್ದತೆಯನ್ನು ಒತ್ತಿ ಹೇಳಿದೆ ಎಂದರು.
    ಇಂದಿನ ಸಂದರ್ಭದಲ್ಲಿ ದೇಶದ ಉಜ್ವಲ ಭವಿಷ್ಯ ರೂಪಿಸುವುದು ಮುಖ್ಯವಾಗಿದೆ. ಅದಕ್ಕಾಗಿಯೇ ಬಿಜೆಪಿ ಆ ನಿಟ್ಟಿನಲ್ಲಿ ಚಿಂತನೆಗಳನ್ನು ರೂಪಿಸುವ ಪ್ರಯತ್ನವನ್ನು ಮಾಡಿದೆ ಎಂದರು.
    ಒಂದು ದೇಶ ಒಂದು ಚುನಾವಣೆ ಎನುವುದು ಚರ್ಚೆಯಾಗುತ್ತಿದೆ. ಇದು ಜಾರಿಗೆ ಬಂದಲ್ಲಿ ಸಾವಿರಾರು ಕೋಟಿ ರೂ ದೇಶದ ಮೇಲಿನ ಹೊರೆಯಾಗುವುದನ್ನು ತಪ್ಪಿಸಲು ಸಾಧ್ಯವಿದೆ ಎಂದರು.
    ರಾಮಾಯಣ ಹಬ್ಬವನ್ನು ಇಡೀ ವಿಶ್ವದಲ್ಲಿಯೇ ಆಚರಣೆ ಮಾಡುವಂತೆ ಆಗಬೇಕು ಎನ್ನುವ ಕಲ್ಪನೆ ಜಾರಿಗೆ ಬರಲಿ. ಅಂಬೇಡ್ಕರ್ ಅವರು ಬಯಸಿದಂತೆ ದೇಶ ಕಟ್ಟ ಕಡೆಯವರಿಗೂ ಸವಲತ್ತು ಸಿಗುವಂತಾಗಬೇಕು ಎಂದರು.
    3 ಕೋಟಿ ಮನೆ ನಿರ್ಮಾಣ ಸಂಕಲ್ಪ, ಮುದ್ರ ಯೋಜನೆಯಲ್ಲಿ 10 ಲಕ್ಷ ಇದ್ದ ಸಾಲ ಮೊತ್ತವನ್ನು 20 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. 70 ವರ್ಷ ಮೇಲ್ಪಟ್ಟವರಿಗೆ ಆರೋಗ್ಯ ಯೋಜನೆ, ಲಕ್ ಪತಿ ದೀದಿ ಕಾರ್ಯಕ್ರಮ, ಅಟೋಮೊಬೈಲ್ ಕ್ಷೇತ್ರದಿಂದ ಹಿಡಿದು ಪ್ರವಾಸೋದ್ಯಮ ಕ್ಷೇತ್ರದ ತನಕ ಎಲ್ಲದಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
    ಮೂಲಭೂತ ಸೌಕರ್ಯಗಳಿಗೂ ಈ ಪತ್ರದಲ್ಲಿ ಒತ್ತು ನೀಡಲಾಗಿದೆ. ದೇಶದ ಸರ್ವಾಂಗೀಣ ಅಭಿವೃದ್ಧಿಯ ಆಶಯವನ್ನು ಈ ಸಂಕಲ್ಪ ಪತ್ರ ಹೊಂದಿದೆ. ಯುವ ಪೀಳಿಗೆಯ ಅಭಿವೃದ್ಧಿ, ಮಹಿಳೆಯರ ಅಭಿವೃದ್ಧಿ ಇವೆಲ್ಲಾ ದೇಶದ ಅಭಿವೃದ್ಧಿಯ ಭದ್ರ ಬುನಾದಿಗೆ ಕಾರಣವಾಗಲಿದೆ. 2047ರ ವೇಳೆಗೆ ಅಭಿವೃದ್ಧಿ ಹೊಂದುವ ಜನರ ಕನಸನ್ನು ಈ ಸಂಕಲ್ಪ ಪತ್ರ ನನಸು ಮಾಡಲಿದೆ ಎಂದರು.
    ಬಿಜೆಪಿಯ ಈ ಸಂಕಲ್ಪ ಪತ್ರದಿಂದ ದೇಶಕ್ಕೆ ಒಳಿತಾಗಲಿದೆ. ಜಾಗತೀಕ ಮಟ್ಟದಲ್ಲೂ ಭಾರತ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಲು ಕಾರಣವಾಗಲಿದೆ ಎಂದು ವಿಜಯೇಂದ್ರ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts