More

    ಜೆಎನ್​ಯು ಕುಲಪತಿ ಜಗದೀಶ್​ ಕುಮಾರ್​ ವಜಾಗೊಳಿಸಲು ಸಲಹೆ ನೀಡಿದ ಬಿಜೆಪಿ ಹಿರಿಯ ಮುಖಂಡ ಮುರಳಿ ಮನೋಹರ ಜೋಷಿ!

    ನವದೆಹಲಿ: ಜೆಎನ್​ಯು ಮತ್ತು ಕುಲಪತಿ ನಡುವಿನ ಸಂಘರ್ಷಕ್ಕೆ ಕೊನೆ ಹಾಡಲು ಕುಲಪತಿ ಎಂ. ಜಗದೀಶ ಕುಮಾರ್​ ಅವರನ್ನು ವಜಾ ಮಾಡುವಂತೆ ಬಿಜೆಪಿ ಹಿರಿಯ ಧುರೀಣ ಮುರಳಿ ಮನೋಹರ ಜೋಷಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

    ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿರುವ ಅನುಭವವುಳ್ಳ ಜೋಷಿ ಅವರ ಈ ಸಲಹೆ ಹಲವರ ಹುಬ್ಬೇರುವಂತೆ ಮಾಡಿದೆ.

    ಶುಲ್ಕ ಹೆಚ್ಚಳಕ್ಕೆ ಸಂಬಂಧಪಟ್ಟಂತೆ ಸರ್ಕಾರವು ಕುಲಪತಿಗೆ ಎರಡು ಬಾರಿ ತನ್ನ ನಿಲುವನ್ನು ತಿಳಿಸಿತ್ತು. ಆದರೂ ಈ ಬಗ್ಗೆ ಕ್ರಮ ಕೈಗೊಂಡಿಲ್ಲ.

    “ಇದು ನಿಜವಾಗಿಯೂ ಅಚ್ಚರಿ​ ಆಗುವಂತದ್ದು. ಸರ್ಕಾರದ ಪ್ರಸ್ತಾವನೆಯನ್ನು ಈಡೇರಿಸದ ಅಧಿಕಾರಿ ವರ್ತನೆ ಆಶ್ಚರ್ಯ ತಂದಿದೆ. ಇಂತಹ ವರ್ತನೆ ಸಹಿಸಲಾಗುವುದಿಲ್ಲ. ಇಂತವರು ಆ ಸ್ಥಾನದಲ್ಲಿ ಮುಂದುವರಿಯಲು ಬಿಡಬಾರದು ಎಂದು ನನ್ನ ಅನಿಸಿಕೆ” ಎಂದು ಜೋಷಿ ಗುರುವಾರ ಟ್ವೀಟ್​ ಮಾಡಿದ್ದಾರೆ.

    ಗುರುವಾರ ಮಧ್ಯಾಹ್ನದಿಂದ ಮಂಡಿ ಹೌಸ್​ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಜೆಎನ್​ಯು ಪ್ರತಿಭಟನಾಕಾರರು ರಾಷ್ಟ್ರಭವನದತ್ತ ಹೊರಟಿದ್ದರು. ಇವರನ್ನು ಮಾರ್ಗ ಮಧ್ಯದಲ್ಲಿ ಪೊಲೀಸರು ಕಾರು ಮತ್ತು ಬ್ಯಾರಿಕೇಡ್​ಗಳನ್ನು ಅಡ್ಡ ಹಾಕಿ ಪ್ರತಿಭಟನಾಕಾರರನ್ನು ತಡೆದಿದ್ದರು.

    ಈ ವೇಳೆ ಕೆಲ ವಿದ್ಯಾರ್ಥಿಗಳು ಬ್ಯಾರಿಕೇಡ್​ನ್ನು ಹತ್ತಿ ಮುನ್ನುಗ್ಗಲು ಯತ್ನಿಸಿದರು. ಪ್ರತಿಭಟನಾ ನಿರತ ಕೆಲ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದ ಬಸ್​ನಲ್ಲಿ ಕರೆದೊಯ್ಯಲಾಗಿತ್ತು.

    ಕುಲಪತಿ ಜಗದೀಶ್​ ಕುಮಾರ್​ ಅವರು ದೇಶ ವ್ಯಾಪಿಯಲ್ಲಿ ಟೀಕೆಗೊಳಗಾಗಿದ್ದಾರೆ. ಅದೂ ಅವರ ಅವಧಿಯಲ್ಲಿ ಮುಸುಕುಧಾರಿಗಳು ವಿವಿ ಆವರಣ ಪ್ರವೇಶಿಸಿ ದಾಂಧಲೆ ನಡೆಸಿದ್ದು ಕಾರಣವಾಗಿತ್ತು.

    ಆ ಸಂದರ್ಭದಲ್ಲಿ ಮುಸುಕುಧಾರಿಗಳನ್ನು ತಡೆಯಲು ಯತ್ನಿಸಲಿಲ್ಲ ಹಾಗೂ ಗೇಟ್​ ಬಳಿ ಇದ್ದ ಪೊಲೀಸರಿಗೂ ಮಾಹಿತಿ ತಿಳಿಸಿಲ್ಲ ಎಂಬ ಆರೋಪ ಹೊತ್ತಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts