More

    VIDEO | ನಾಂದೇಡ್ ಸರ್ಕಾರಿ ಆಸ್ಪತ್ರೆಯಲ್ಲಿ 31 ಸಾವು; ಡೀನ್ ಕೈಯಲ್ಲಿ ಶೌಚಾಲಯ ಸ್ವಚ್ಛಗೊಳಿಸಿದ ಬಿಜೆಪಿ ಸಂಸದ

    ಮಹಾರಾಷ್ಟ್ರ: ಮಹಾರಾಷ್ಟ್ರದ ನಾಂದೇಡ್‌ನ ಸರ್ಕಾರಿ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸೋಮವಾರ (ಅಕ್ಟೋಬರ್​ 02) 24 ಗಂಟೆಗಳ ಅವಧಿಯಲ್ಲಿ 24 ರೋಗಿಗಳು ಸಾವನ್ನಪ್ಪಿದ್ದರು. ಇಂದು ಸಾವಿನ ಸಂಖ್ಯೆ ಕ್ರಮೇಣ 24 ರಿಂದ 31ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಿ

    ಈ ಬೆನ್ನಲ್ಲೇ ರಾಜಕೀಯ ಜಟಾಪಟಿ ತೀವ್ರ ಬುಗಿಲೆದ್ದಿದ್ದು, ಇಂದು ಆಸ್ಪತ್ರೆಯ ಡೀನ್​ ಕೈಯಲ್ಲಿ ಬಿಜೆಪಿ ಸಂಸದ ಶೌಚಾಲಯ ಸ್ವಚ್ಛಗೊಳಿಸಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

    ಎರಡು ದಿನಗಳಲ್ಲಿ 31 ರೋಗಿಗಳು ಸಾವನ್ನಪ್ಪಿದ ಘಟನೆ ತಿಳಿದ ಬಿಜೆಪಿ ಸಂಸದ ಹೇಮಂತ್ ಪಾಟೀಲ್, ನಾಂದೇಡ್‌ನ ಸರ್ಕಾರಿ ಆಸ್ಪತ್ರೆ ಭೇಟಿ ನೀಡಿದ್ದು, ಪೊರಕೆಯಿಂದ ಶೌಚಾಲಯವನ್ನು ಸ್ವಚ್ಛಗೊಳಿಸುವಂತೆ ಆಸ್ಪತ್ರೆಯ ಡೀನ್‌ಗೆ ತಿಳಿಸಿದರು. ಡೀನ್ ಶೌಚಾಲಯವನ್ನು ಕ್ಲೀನ್​ ಮಾಡುತ್ತಿರುವ ದೃಶ್ಯ ಈಗ ವೈರಲ್​ ಆಗಿದೆ.

    ಇದನ್ನೂ ಓದಿ:  ‘ತಲೈವರ್​ 170’: 32 ವರ್ಷಗಳ ಬಳಿಕ ರಜನಿಕಾಂತ್​ ಜತೆಗೆ ನಟಿಸಲಿದ್ದಾರೆ ಈ ದಿಗ್ಗಜ ನಟ!

    “ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 2ರ ನಡುವೆ ಸಂಭವಿಸಿದ ಸಾವುಗಳಿಗೆ ಆಸ್ಪತ್ರೆಯ ವೈದ್ಯರನ್ನೇ ಹೊಣೆಗಾರರನ್ನಾಗಿ ಮಾಡಿ, ಅವರೆಲ್ಲರ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು” ಎಂದು ಪಾಟೀಲ್ ಒತ್ತಾಯಿಸಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಸಂಸದರು, “ಡೀನ್‌ನ ಶೌಚಾಲಯದ ಬ್ಲಾಕ್‌ಗೆ ಭೇಟಿ ನೀಡಿದ್ದು, ತಿಂಗಳಿಂದ ಬಳಕೆಯಾಗದೆ ಉಳಿದಿರುವ ಸ್ನಾನಗೃಹಗಳು ಕೊಳಕಿನಿಂದ ತುಂಬಿರುವುದು ಕಂಡುಬಂದಿದೆ. ಮಕ್ಕಳ ಬ್ಲಾಕ್‌ನಲ್ಲಿರುವ ಶೌಚಾಲಯಗಳಿಗೆ ಬೀಗ ಹಾಕಲಾಗಿದ್ದು, ಮಹಿಳೆಯರ ಬ್ಲಾಕ್‌ನಲ್ಲಿ ಮದ್ಯದ ಬಾಟಲಿಗಳು ತುಂಬಿವೆ. ಆಸ್ಪತ್ರೆಯ ಸುತ್ತಮುತ್ತ ಹಂದಿಗಳು ಸೇರಿದಂತೆ ಹಲವು ಪ್ರಾಣಿಗಳು ಓಡಾಡುತ್ತಿವೆ. ಸುತ್ತಲೂ ಸಾಕಷ್ಟು ಕೊಳಕು ಬಿದ್ದಿದ್ದು, ಯಾರೂ ಇತ್ತ ಗಮನ ಹರಿಸುತ್ತಿಲ್ಲ” ಎಂದು ಹೇಳಿದರು.

    ಇದನ್ನೂ ಓದಿ:  ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

    ಆಸ್ಪತ್ರೆಯ ಡೀನ್ ಮತ್ತು ವಿಭಾಗದ ಮುಖ್ಯಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರಿಗೆ ಮನವಿ ಮಾಡಿದ ಅವರು, ಯಾವುದೇ ಕ್ರಮ ಕೈಗೊಳ್ಳದೆ ಹೋದರೆ ಆಸ್ಪತ್ರೆಯಲ್ಲಿ ಯಾವ ಸುಧಾರಣೆ ತರಲು ಸಾಧ್ಯವಿಲ್ಲ ಎಂದು ಹೇಳಿದರು,(ಏಜೆನ್ಸೀಸ್).

    ‘ತಲೈವರ್​ 170’: 32 ವರ್ಷಗಳ ಬಳಿಕ ರಜನಿಕಾಂತ್​ ಜತೆಗೆ ನಟಿಸಲಿದ್ದಾರೆ ಈ ದಿಗ್ಗಜ ನಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts