More

    ಕರೊನಾದಿಂದ ತಪ್ಪಿಸಿಕೊಳ್ಳಲು ಬಟ್ಟೆಗಳನ್ನು 2 ಗಂಟೆಗಳ ಕಾಲ ಬಿಸಿಲಿನಲ್ಲಿ ಒಣಗಿಸಿ: ಬಿಜೆಪಿ ಸಂಸದ

    ನವದೆಹಲಿ: ಜಾಗತಿಕವಾಗಿ ಸಾವಿರಾರು ಮಂದಿಯನ್ನು ಬಲಿಪಡೆದುಕೊಂಡಿರುವ ಮಾರಕ ಕರೊನಾ ವೈರಸ್​ ಭಾರತದ ಮೇಲೂ ವಕ್ರದೃಷ್ಟಿ ಬೀರಿದೆ. 50 ಮಂದಿಗೆ ಸೋಂಕು ತಗುಲಿರುವುದು ಅಧಿಕೃತವಾಗಿರುವ ಬೆನ್ನಲ್ಲೇ ಇನ್ನಷ್ಟು ಸೋಂಕು ಹರಡದಿರಲು ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಹೀಗಿರುವಾಗ ಪಶ್ಚಿಮ ಬಂಗಾಳದ ಬಿಜೆಪಿ ಸಂಸದರೊಬ್ಬರು ಸಲಹೆಯೊಂದನ್ನು ನೀಡಿದ್ದಾರೆ.

    ಸಂಸದ ದಿಲೀಪ್​ ಘೋಷ್ ಮಾಧ್ಯಮಗಳೊಂದಿಗೆ ಮಾತನಾಡಿ, ಯಾರು ಪ್ರಕೃತಿಯಿಂದ ದೂರ ಉಳಿದಿದ್ದಾರೋ ಅಂಥವರ ಮೇಲೆ ಕರೊನಾ ದಾಳಿ ಮಾಡುತ್ತದೆ. ಯಾರು ಪ್ರಕೃತಿ ಜತೆಗೆ ನಿರಂತರ ಸಂಪರ್ಕ ಹೊಂದಿರುತ್ತಾರೋ ಅವರಿಗೆ ಕರೊನಾ ಏನು ಮಾಡುವುದಿಲ್ಲ ಎಂದಿದ್ದರೆ.

    ಮುಂದುವರಿದು ಮಾತನಾಡಿ, ಕರೊನಾದಿಂದ ತಪ್ಪಿಸಿಕೊಳ್ಳಲು ನಿಮ್ಮ ಬಟ್ಟೆಗಳನ್ನು ಸುಮಾರು 2 ಗಂಟೆಗಳ ಕಾಲ ಬಿಸಿಲಿನಲ್ಲಿ ಒಣಗಿಸಿ, ಸೂರ್ಯನ ತಾಪ ಕರೊನಾ ವೈರಸ್​ ಅನ್ನು ಕೊಲ್ಲಲಿದೆ ಎಂದು ಹೇಳಿದ್ದಾರೆ.

    ಮಿಯಾಂದ್​ಪುರ ಕ್ಷೇತ್ರದ ಸಂಸದರಾಗಿರುವ ದಿಲೀಪ್​ ಘೋಷ್​ ಇತ್ತೀಚೆಗಷ್ಟೇ ಗೋವಿನ ಹಾಲಿನಿಂದ ಚಿನ್ನವನ್ನು ತೆಗೆಯಬಹುದು ಎಂದು ಹೇಳಿಕೆ ನೀಡಿದ್ದರು. ಇದರಿಂದ ಸಾಮಾಜಿಕ ಜಾಲತಾಣದಲ್ಲಿ ಘೋಷ್​ ವಿರುದ್ಧ ಭಾರಿ ಟೀಕೆ ವ್ಯಕ್ತವಾಗಿತ್ತು. ಬಳಿಕ ಘೋಷ ಇದಕ್ಕೆ ಸ್ಪಷ್ಟನೆಯನ್ನು ನೀಡಿದ್ದರು.

    ಭಾರತದಲ್ಲಿ ಕೇರಳ, ದೆಹಲಿ, ಜೈಪುರ, ಆಗ್ರಾ, ನೋಯ್ಡಾ, ಜಮ್ಮು, ಪುಣೆ, ಪಂಜಾಬ್​, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕರೊನಾ ಶಂಕಿತರ ಪ್ರಕರಣ ವರದಿಯಾಗಿದೆ. (ಏಜೆನ್ಸೀಸ್​)

    ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ!: ಕರೊನಾ ವೈರಸ್​ ತಡೆಯಲು ಲಡಾಕ್​ ಸರ್ಕಾರದ ಕ್ರಮ

    ಕರೊನಾ ಪೀಡಿತ ದೇಶಗಳಿಗೆ ಪ್ರವಾಸ ಕೈಗೊಂಡ ಉದ್ಯೋಗಿಗಳಿಗೆ ರಜೆ ನೀಡಿ: ಖಾಸಗಿ ಸಂಸ್ಥೆಗಳಿಗೆ ಸಲಹೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts