'ಅನ್ನಭಾಗ್ಯ' ಯೋಜನೆ ಹೊಗಳಿದ ಬಿಜೆಪಿ ಶಾಸಕ ಗುರುರಾಜ್​ ಗಂಟಿಹೊಳೆ!

Gururaj
Published on

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರದ ಅನ್ನ ಭಾಗ್ಯ ಯೋಜನೆ ಕುರಿತು ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಗುರುರಾಜ್ ಗಂಟಿಹೊಳೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆಯಲ್ಲಿ ಸೋಮವಾರ ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ''ನಾನು ಬಿಜೆಪಿ ಸದಸ್ಯನಾಗಿದ್ದರೂ ಬಡವರ ಮನೆಗೆ ಅಕ್ಕಿಯನ್ನು ಮುಟ್ಟಿಸುವ ಯೋಜನೆಯನ್ನು ಅಭಿನಂದಿಸುತ್ತೇನೆ. ಅನ್ನಭಾಗ್ಯ ಯೋಚನೆ ಮತ್ತು ಯೋಜನೆ ರೂಪಿಸಿದವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇದನ್ನು ಯಾವುದೇ ಸರಕಾರ ಜಾರಿ ಮಾಡಿರಲಿ, ಕೊನೆಗೆ ಬಡವನ ಮನೆಗೆ ಅದು ಮುಟ್ಟಿದೆ. ಬಡತನವನ್ನು ಅನುಭವಿಸಿದವನಿಗಷ್ಟೇ ಅದರ ಮೌಲ್ಯ ಗೊತ್ತಾಗುತ್ತೆ" ಎಂದು ಹೇಳಿದರು.

ಆದರೆ ಬಡತನ ಎನ್ನುವುದು ಅಣಕದ ವಿಚಾರವಾಗ ಕೂಡದು. ದುಡಿಯುವ ಕೈಗಳಿಗೆ ಕೆಲಸ ಒದಗಿಸಿದರೆ ಬಡತನ ಎನ್ನುವುದಕ್ಕೆ ತಿಲಾಂಜಲಿ ಹಾಡಬಹುದು. ಸರಕಾರ ಈ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸಬೇಕು ಎಂದು ಗುರುರಾಜ್ ಅವರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net