More

    ಮಧ್ಯಪ್ರದೇಶ ವಿಧಾನಸಭೆ ಸ್ಪೀಕರ್ ಆಗಿ ಬಿಜೆಪಿಯ ಗಿರೀಶ್ ಗೌತಮ್ ಆಯ್ಕೆ

    ಭೋಪಾಲ್: ಹಿರಿಯ ಬಿಜೆಪಿ ಶಾಸಕ ಗಿರೀಶ್ ಗೌತಮ್ ಅವರು ಮಧ್ಯಪ್ರದೇಶದ ವಿಧಾನಸಭೆಯ ಸ್ಪೀಕರ್ ಆಗಿ ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 68 ವರ್ಷದ ಗೌತಮ್​ ಅವರು ರೇವಾ ಜಿಲ್ಲೆಯ ದಿಯೊತಲಬ್ ಕ್ಷೇತ್ರದಿಂದ ನಾಲ್ಕು ಬಾರಿ ಅವಿರತವಾಗಿ ಚುನಾಯಿತರಾಗಿರುವ ನಾಯಕರಾಗಿದ್ದಾರೆ.

    ರಾಜ್ಯದ ಬಜೆಟ್​ ಅಧಿವೇಶನದ ಮೊದಲನೇ ದಿನವಾದ ಇಂದು ಗೌತಮ್ ಅವರನ್ನು ಸಭಾಪತಿಯ ಸ್ಥಾನಕ್ಕೆ ಚುನಾಯಿಸಲು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಪ್ರಸ್ತಾವನೆ ಮಾಡಿದರು. ಈ ಪ್ರಸ್ತಾವನೆಯನ್ನು ಗೃಹ ಮಂತ್ರಿ ನರೋತ್ತಮ್ ಮಿಶ್ರ, ವೈದ್ಯಕೀಯ ಶಿಕ್ಷಣ ಮಂತ್ರಿ ವಿಶ್ವಾಸ್ ಸಾರಂಗ್ ಮತ್ತು ಕೃಷಿ ಮಂತ್ರಿ ಕಮಲ್ ಪಟೇಲ್ ಬೆಂಬಲಿಸಿದರು. ವಿರೋಧ ಪಕ್ಷದ ನಾಯಕರಾದ ಕಮಲ್ ನಾಥ್ ಕೂಡ ಬೆಂಬಲ ವ್ಯಕ್ತಪಡಿಸಿದರು. ನಂತರ ಪ್ರೊ ಟೆಮ್​ ಸ್ಪೀಕರ್​ ರಾಮೇಶ್ವರ ಶರ್ಮ ಗೌತಮ್ ಅವರನ್ನು ಸಭಾಪತಿಯಾಗಿ ಘೋಷಿಸಿದರು.

    ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಂಡ ದಾದರ್ ಸಂಸದ ಮೋಹನ್ ದೇಲ್ಕರ್

    ಕಳೆದ ವರ್ಷ ಮಾರ್ಚ್​ನಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಪತನಗೊಂಡಾಗ ಆಗಿನ ಸ್ಪೀಕರ್ ಎನ್.ಪಿ.ಪ್ರಜಾಪತಿ ರಾಜೀನಾಮೆ ನೀಡಿದ್ದರಿಂದ ಈ ಸ್ಥಾನ ತೆರವಾಗಿತ್ತು. ಆನಂತರ ಬಿಜೆಪಿಯ ಶಿವರಾಜ್ ಸಿಂಗ್ ಚೌಹಾನ್ ಸರ್ಕಾರವು ಅಧಿಕಾರ ಸ್ವೀಕರಿಸಿದ್ದು, ರಾಮೇಶ್ವರ ಶರ್ಮ ಅವರನ್ನು ಪ್ರೊ ಟೆಮ್ ಸ್ಪೀಕರ್ ಆಗಿ ನೇಮಕ ಮಾಡಲಾಗಿತ್ತು.(ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    “ದಿಲ್ಲಿ ಅಬ್ ದೂರ್​ ನಹಿ, ಆಪ್​ಕೆ ದರವಾಜೆ ಪರ್​ ಹೆ” : ಪ್ರಧಾನಿ ಮೋದಿ

    ಕಲ್ಲಿದ್ದಲು ಕಳ್ಳಸಾಗಾಣಿಕೆ ಸಿಬಿಐ ತನಿಖೆ : “ನನಗೆ ಏನೂ ಗೊತ್ತಿಲ್ಲ” ಎಂದ ರುಜಿರಾ ಬ್ಯಾನರ್ಜಿ

    ಹದಿಹರೆಯದ ಮಗಳನ್ನೇ ರೇಪ್ ಮಾಡಿ ಗರ್ಭಿಣಿಯಾಗಿಸಿದ, ಗರ್ಭಪಾತವಾದ ಮೇಲೆ ಮತ್ತೆ ಮೇಲೆರಗಿದ… ಕೋರ್ಟ್ ಹೇಳಿದ್ದೇನು ?

     

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts