More

    ಹರಿಯಾಣ : ‘ಅವಿಶ್ವಾಸ’ವನ್ನು ಮಣಿಸಿದ ಬಿಜೆಪಿ-ಜೆಜೆಪಿ ಸರ್ಕಾರ

    ಚಂಡೀಗಢ: ಹರಿಯಾಣದಲ್ಲಿ ಆಡಳಿತಾರೂಢ ಬಿಜೆಪಿ-ಜೆಜೆಪಿ ಸಮ್ಮಿಶ್ರ ಸರ್ಕಾರವು, ಇಂದು ಕಾಂಗ್ರೆಸ್ ಮಂಡಿಸಿದ ಅವಿಶ್ವಾಸ ಮತ ಯಾಚನೆಯ ಅಗ್ನಿಪರೀಕ್ಷೆಯಲ್ಲಿ ಗೆದ್ದಿದೆ. ಸರ್ಕಾರ ಉಳಿಸಿಕೊಳ್ಳಲು ಅಗತ್ಯವಿದ್ದ 45 ಮತಗಳ ಬದಲಿಗೆ 55 ಮತಗಳನ್ನು ಪಡೆದುಕೊಂಡ ಸಿಎಂ ಮನೋಹರ್​ಲಾಲ್ ಖತ್ತರ್ ಸರ್ಕಾರ ಹೊಸ ಶಕ್ತಿಯಿಂದ ಮುನ್ನಡೆದಿದೆ.

    ಕೃಷಿ ಕಾನೂನುಗಳ ವಿರುದ್ಧದ ರೈತ ಹೋರಾಟವನ್ನೇ ಮುಖ್ಯ ವಿಚಾರವಾಗಿ ತೆಗೆದುಕೊಂಡು ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಶಾಸಕ ಭೂಪಿಂದರ್ ಸಿಂಗ್ ಹೂಡ ಇಂದು ಬೆಳಿಗ್ಗೆ ಸರ್ಕಾರದ ವಿರುದ್ಧ ಅವಿಶ್ವಾಸ ಮತದ ಮಂಡನೆ ಮಾಡಿದ್ದರು. ಈ ಬಗ್ಗೆ ಸದನದಲ್ಲಿ ದಿನವಿಡೀ ನಾಯಕರ ನಡುವೆ ಮಾತಿನ ಚಕಮಕಿ ನಡೆಯಿತು.

    ಇದನ್ನೂ ಓದಿ: ಸರ್ಕಾರದಿಂದ ಹಿರಿಯ ನಾಗರಿಕರಿಗೆ ಅಯೋಧ್ಯೆ ತೀರ್ಥಯಾತ್ರೆ ಉಚಿತ!

    ಕಾಂಗ್ರೆಸ್​ ನಾಯಕರು ಅವಿಶ್ವಾಸ ಮತ ಮಂಡನೆಯಿಂದಾಗಿ ಯಾವ ಶಾಸಕರು ಸರ್ಕಾರದ ಪರ ನಿಂತಿದ್ದಾರೆ ಮತ್ತು ಯಾವ ಶಾಸಕರು ರೈತರ ಪರ ನಿಲ್ಲುತ್ತಾರೆ ಎಂಬುದು ತಿಳಿಯುತ್ತದೆ ಎಂದರು. ಇತ್ತ ಸಿಎಂ ಮನೋಹರ್​ಲಾಲ್ ಖತ್ತರ್ ಅವರು ತಮ್ಮ ಸರ್ಕಾರ ರೈತರ ಏಳಿಗೆಗೆ ಬದ್ಧವಾಗಿದ್ದು, ಪ್ರತಿಕೂಲ ಸನ್ನಿವೇಶಗಳಲ್ಲೂ ಪ್ರತಿಭಟನಾನಿರತ ರೈತರ ವಿರುದ್ಧ ಯಾವುದೇ ಬಲಪ್ರಯೋಗ ಮಾಡಲಾಗಿಲ್ಲ ಎಂದರು.

    ಒಟ್ಟು 90 ಸೀಟುಗಳಿರುವ ಹರಿಯಾಣ ವಿಧಾನಸಭೆಯಲ್ಲಿ ಹಾಲಿ 88 ಶಾಸಕರಿದ್ದಾರೆ. ಇದರಲ್ಲಿ ಬಿಜೆಪಿ 40 ಸೀಟುಗಳನ್ನು ಹೊಂದಿದೆ. ಉಪಮುಖ್ಯಮಂತ್ರಿ ದುಷ್ಯಂತ್ ಚೌತಾಲಾ ಅವರ ಜನನಾಯಕ ಜನತಾ ಪಾರ್ಟಿ(ಜೆಜೆಪಿ)ಯ 10 ಶಾಸಕರು, ಒಬ್ಬ ಲೋಕಹಿತ ಪಕ್ಷದ ಶಾಸಕ ಮತ್ತು 5 ಸ್ವತಂತ್ರ ಶಾಸಕರ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚಿಸಿದೆ. ಕಾಂಗ್ರೆಸ್​ 31 ಶಾಸಕರನ್ನು ಹೊಂದಿದ್ದು, ಬಹುಮತ ಸಾಬೀತುಪಡಿಸಲು ಸರ್ಕಾರಕ್ಕೆ 45 ಮತಗಳ ಅಗತ್ಯವಿತ್ತು.

    ಇದನ್ನೂ ಓದಿ: ಮನೆ ಮುಂದೆ ಕಸ ಹಾಕಿದ್ದಕ್ಕೆ ಜಗಳ : 11 ವರ್ಷದ ಬಾಲಕಿ ಆತ್ಮಹತ್ಯೆ

    ಸಂಜೆಯ ವೇಳೆಗೆ ನಡೆದ ಮತಚಲಾವಣೆಯಲ್ಲಿ, ಎಲ್ಲಾ ಕಾಂಗ್ರೆಸ್ ಶಾಸಕರೂ ಮತ್ತು ಒಬ್ಬ ಸ್ವತಂತ್ರ ಶಾಸಕ ಅವಿಶ್ವಾಸ ಮತವನ್ನು ಬೆಂಬಲಿಸಿದರು. ಬಿಜೆಪಿ ಮತ್ತು ಜೆಜೆಪಿಯ ಶಾಸಕರೆಲ್ಲ ಅದರ ವಿರುದ್ಧ ಮತ ಚಲಾಯಿಸಿದರು. ಅವಿಶ್ವಾಸದ ಪರವಾಗಿ 32 ಸದಸ್ಯರು ಮತ ಚಲಾಯಿಸಿದರೆ, ವಿರೋಧವಾಗಿ 55 ಸದಸ್ಯರು ಮತ ಹಾಕಿದ್ದಾರೆಂದು ಸ್ಪೀಕರ್​ ಘೋಷಿಸಿದರು.

    ಸರ್ಕಾರದ ವಿರುದ್ಧ ಮಾತನಾಡುತ್ತಿದ್ದ ಜೆಜೆಪಿ ಶಾಸಕರಾದ ರಾಮ್​ಕುಮಾರ್ ಗೌತಮ್ ಮತ್ತು ದೇವೇಂದ್ರ ಬಬ್ಲಿ ಕೂಡ ಸರ್ಕಾರದ ಉಳಿವಿಗಾಗಿ ಮತ ಚಲಾಯಿಸಿದ್ದು ಗಮನಾರ್ಹ ಸಂಗತಿಯಾಗಿತ್ತು. (ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಹೆಚ್ಚಿದ ಕರೊನಾ : ಮದುವೆ ಸಮಾರಂಭಗಳಿಗೆ ಪೊಲೀಸರಾಗಲಿದ್ದಾರೆ ವಿಶೇಷ ಅತಿಥಿಗಳು !

    ಅಭಿಮಾನಿಗೆ ಎಸಿ ಸರ್ವೀಸ್​ ಫ್ರೀ ! ಇದು ಹೃತಿಕ್ ರೋಶನ್​ ಜಾದೂ !

    ಬಿಎಸ್​​ಎನ್​ಎಲ್​ : ಹೊಸ ಪ್ರೀಪೇಯ್ಡ್​ ಗ್ರಾಹಕರಿಗೆ ಆಕರ್ಷಕ ಸೌಲಭ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts