More

    ಕೊಟ್ಟು, ತೆಗೆದುಕೊಳ್ಳುವ ಹೊಂದಾಣಿಕೆಯಲ್ಲಿ ಬಿಜೆಪಿ-ಜೆಡಿಎಸ್ ದೋಸ್ತಿ; ರಾಜಕಾರಣ ಹೆಜ್ಜೆ ತನ್ನ ನೆಲೆಗಳನ್ನು ಗಟ್ಟಿಗೊಳಿಸಲು ಮುಂದಾದ ಬಿಜೆಪಿ

    ಬೆಂಗಳೂರು:
    ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ದೋಸ್ತಿ ಮಾಡಿಕೊಂಡಿರುವ ಬಿಜೆಪಿ, ತನ್ನ ನೆಲೆಯನ್ನು ಇನ್ನಷ್ಟು ವಿಸ್ತಾರ ಮಾಡಿ ಭದ್ರ ಮಾಡಿಕೊಳ್ಳಲು ಮುಂದಾಗಿದೆ.
    ಜೆಡಿಎಸ್ ಸ್ಪರ್ಧೆ ಮಾಡಿರುವ ಹಾಸನ, ಮಂಡ್ಯ ಮತ್ತು ಕೋಲಾರ ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಸಾಥ್ ನೀಡುವುದು. ಅಲ್ಲಿ ಪಕ್ಷದಿಂದ ವಿರೋಧ ಬಂದರೂ ಅದನ್ನು ನಿಭಾಯಿಸಿಕೊಂಡು, ಪಕ್ಷದ ಹೊಂದಾಣಿಕೆ ಧರ್ಮಕ್ಕೆ ಎಲ್ಲಿಯೂ ಚ್ಯುತಿ ಆಗದಂತೆ ನೋಡಿಕೊಳ್ಳಲು ಎಚ್ಚರಿಕೆ ಹೆಜ್ಜೆ ಇಡಲು ಬಿಜೆಪಿ ನಿರ್ಧರಿಸಿದೆ.
    ಹಾಸನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೊಂದಾಣಿಕೆ ಬಗ್ಗೆ ವಿರೋಧಾಭಾಸಗಳ ಹೇಳಿಕೆಗಳು ಬಂದರೂ ಅದನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿಲ್ಲ. ಬದಲಿಗೆ ಅಲ್ಲಿ ಹೊಂದಾಣಿಕೆ ಸೂತ್ರವನ್ನೆ ಭಜಿಸಿ ಮತ್ತೆ ಧ್ವನಿ ಎತ್ತಿದವರನ್ನೆ ಸಮಾಧಾನಿಸುವ ಪ್ರಯತ್ನ ಚುನಾವಣೆ ೋಷಣೆಯಾದ ದಿನದಿಂದಲೂ ನಡೆಯುತ್ತಲೇ ಇದೆ.
    ಇದೇ ಹೊತ್ತಿನಲ್ಲಿ ಈ ಮೂರು ಕ್ಷೇತ್ರಗಳ ಹೊರತಾಗಿರುವ ಜಿಲ್ಲೆಗಳಲ್ಲಿ ಜೆಡಿಎಸ್ ಶಕ್ತಿಯನ್ನು ಸಂಪೂರ್ಣವಾಗಿ ತನ್ನೆಡೆಗೆ ಸೆಳೆದುಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ನಾಯಕರು ಸತತ ಪ್ರಯತ್ನ ನಡೆಸಿದ್ದಾರೆ.
    ಮೈತ್ರಿ ಧರ್ಮದಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಪ್ರಧಾನಿ ಮೋದಿ ಅವರು ಭಾಗವಹಿಸಿದ ವೇದಿಕೆಯಿಂದ ಹಿಡಿದು ಹಲವು ವೇದಿಕೆಗಳಲ್ಲಿ ಹೊಂದಾಣಿಕೆಯಿಂದಲೇ ಭಾಗವಹಿಸಿರುವುದು ಬಿಜೆಪಿ ನಾಯಕರ ಸಮಾಧಾನಕ್ಕೂ ಕಾರಣವಾಗಿದೆ.
    ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಶಕ್ತಿ ಇರುವ ಕಡೆಯಲ್ಲಿ ಕ್ರಮೇಣ ಬಿಜೆಪಿ ಶಕ್ತಿ ವೃದ್ಧಿಸಿಕೊಳ್ಳಲು ಮಾಸ್ಟರ್ ಪ್ಲಾನ್ ಮಾಡಲಾಗಿದೆ. ವಿಶೇಷವಾಗಿ ಕಲಬುರ್ಗಿ, ಯಾದಗಿರಿ, ಬೀದರ್, ವಿಜಯಪುರ ಜಿಲ್ಲೆಯಲ್ಲಿ ಹೆಚ್ಚಿನ ಗಮನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
    ಪರಸ್ಪರ ಕೊಟ್ಟು ತೆಗೆದುಕೊಳ್ಳುವ ಮನೋಭಾವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಹೊಂದಾಣಿಕೆಯ ಹೆಜ್ಜೆ ಇಡುತ್ತಿರುವುದು ವಿಶೇಷ. ಈ ಹೊಂದಾಣಿಕೆ ರಾಜಕೀಯ ಲೋಕಸಭೆ ಚುನಾವಣೆಯಲ್ಲಿ ಯಶಸ್ವಿಯಾದರೆ, ಮುಂದಿನ ಎಲ್ಲಾ ಚುನಾವಣೆಯಲ್ಲಿಯೂ ದೋಸ್ತಿ ಮುಂದುವರಿಸಿಕೊಂಡು ಹೋಗುವ ಲೆಕ್ಕಾಚಾರ ಎರಡೂ ಪಕ್ಷದ ನಾಯಕರಲ್ಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts