More

    ಮಾದಿಗ ಸಮಾಜಕ್ಕೆ ಬಿಜೆಪಿ ಅನ್ಯಾಯ ಮಾಡಿಲ್ಲ

    ಕಡೂರು: ಮೀಸಲಾತಿ ವಂಚಿತ ಸಮುದಾಯಕ್ಕೆ ನ್ಯಾಯದೊರಕಿಸಲು ಆರ್‌ಎಸ್‌ಎಸ್ ಮುಂಚೂಣಿಯಲ್ಲಿದೆ. ಬಿಜೆಪಿ ಮಾದಿಗ ಸಮಾಜಕ್ಕೆ ಯಾವುದೇ ಅನ್ಯಾಯ ಮಾಡಿಲ್ಲ. ಸಂಘ ಪರಿವಾರ ಮಾದಿಗ ಸಮಾಜಕ್ಕೆ ಮೀಸಲಾತಿ ದೊರಕಿಸಲು ಪ್ರಾಮಾಣಿಕವಾಗಿ ಒತ್ತು ನೀಡುತ್ತಿದೆ ಎಂದು ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಹೇಳಿದರು.
    ಪಟ್ಟಣ ಸಮೀಪದ ಮಚ್ಚೇರಿಯಲ್ಲಿ ಬುಧವಾರ ನಡೆದ ಮಾದಿಗರ ಆತ್ಮಗೌರವದ ಮಾದಿಗರ ಮುನ್ನೆಡೆ ಸಮಾವೇಶ ಉದ್ಘಾಟಿಸಿ ಮಾತನಾಡಿ, ಮಾದಿಗ ಸಮಾಜದ ವಾಸ್ತವತೆ ಬದುಕನ್ನು ಸಮಾಜಕ್ಕೆ ತೆರದಿರುಡುವುದೇ ಮಾದಿಗ ಮುನ್ನಡೆಯ ಸಮಾವೇಶದ ಆಶಯವಾಗಿದೆ. ಪ್ರಸ್ತುತ ಮೀಸಲಾತಿ ವಿಚಾರದಲ್ಲಿ ನಡೆದ ತಾರತಮ್ಯದ ಬಗ್ಗೆ ಸಮಾಜಕ್ಕೆ ಜಾಗೃತಿ ಸಂದೇಶ ಸಾರಲು ಈಗಾಗಲೇ 26 ಕಡೆಗಳಲ್ಲಿ ರಾಜ್ಯಾದ್ಯಂತ ಯಶಸ್ವಿಯಾಗಿ ಮಾದಿಗ ಮುನ್ನೆಡೆ ನಡೆಸಲಾಗಿದೆ ಎಂದರು.
    ಕಳೆದ 35 ವರ್ಷಗಳಿಂದ ವಿವಿಧ ಕಡೆ ರಾಜ್ಯಗಳಲ್ಲಿ ಮಾದಿಗ ಸಮಾಜ ಮೀಸಲಾತಿಗಾಗಿ ಹೋರಾಡುತ್ತಿದೆ. ರಾಜ್ಯದಲ್ಲಿ 28 ವರ್ಷಗಳಿಂದ ಸಮಾಜ ನಿರಂತರವಾಗಿ ಹೋರಾಟ ನಡೆಸಲಾಗುತ್ತಿದೆ. 60 ವರ್ಷ ದೇಶದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ಮೀಸಲಾತಿ ದೊರಕಿಸಲು ಯಾವುದೇ ಪ್ರಯತ್ನ ನಡೆಸಲಿಲ್ಲ. 16ವರ್ಷದಿಂದ ರಚನೆಯಾದ ಸಮಿತಿ ವರದಿಯನ್ನು ಕಾಂಗ್ರೆಸ್ ಬಿಚ್ಚಿಡುವುದಿಲ್ಲ. ಅಂದಿನ ಸರ್ಕಾರದ ಯೋಜನೆಗಳನ್ನು ಮಾದಿಗ ಸಮಾಜಕ್ಕೆ ದೊರಕಿಸಲಿಲ್ಲ. ಬೇರೆಯವರ ಜತೆ ಪೈಪೋಟಿ ನಡೆಸಬೇಕಾದ ಪರಿಸ್ಥಿತಿ ಎದುರಾಗಿದೆ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.
    ಪ್ರಧಾನಿ ನರೇಂದ್ರ ಮೋದಿ ಅವರು ಮೀಸಲಾತಿ ಪರವಾಗಿ ಗಟ್ಟಿ ಧ್ವನಿಯೊಂದಿಗೆ ನಿಲ್ಲುತ್ತೇನೆ ಎಂದು ಕೊಟ್ಟ ಮಾತಿನಂತೆ ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳನ್ನು ನಿಯೋಜಿಸಿ ಸಮಿತಿ ರಚಿಸಿದ್ದಾರೆ. ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಯಾವುದೇ ಕಾನೂನುಗಳು ಅಡ್ಡಿಯಾಗದಂತೆ ಸೂಚಿಸಿದ್ದಾರೆ. ನಾವು ಧೈರ್ಯಗೆಡುವ ಅಗತ್ಯವಿಲ್ಲ. ಈಗಾಗಲೇ ಸದಾಶಿವ ಆಯೋಗದ ವರದಿ ಸುಪ್ರಿಂಕೋರ್ಟ್ ಅಂಗಳದಲ್ಲಿದ್ದು, ಜ.24ರಂದು ಕೋರ್ಟ್‌ನಲ್ಲಿ ಕಲಾಪ ನಡೆಯಲಿದೆ ಎಂದರು.
    ಬಿಜೆಪಿ ಮಾದಿಗರಿಗೆ ನ್ಯಾಯ ದೊರಕಿಸಿದ್ದರೂ ಮಾದಿಗರು ಬಿಜೆಪಿ ಪರವಾಗಿ ನಿಲ್ಲದಿರುವುದು ವಿಪರ್ಯಾಸ. ಬಿಜೆಪಿ ಸರ್ಕಾರದ ದಕ್ಷಿಣ ಭಾರತದ ಐದು ರಾಜ್ಯಗಳಲ್ಲಿ ಮೀಸಲಾತಿಗಾಗಿ ಆಯೋಗ ರಚಿಸಿದೆ. ಮಾದಿಗರ ಪ್ರಸ್ತುತ ಬದುಕಿನ ಬಗ್ಗೆ ಚರ್ಚೆಯಾಗಬೇಕಿದೆ. ಆದರೆ ಒಂದು ವರ್ಗ ನಮ್ಮ ಸಮಾಜದ ಬಗ್ಗೆ ತಿರಸ್ಕಾರದ ಮಾತನಾಡುತ್ತಿರುವುದು ವಿಪರ್ಯಾಸ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts