More

    ಮುದ್ರಾಂಕ ಶುಲ್ಕ ಏರಿಕೆಗೆ ಬಿಜೆಪಿ ಗರಂ; ಜಾಗಟೆ ಬಾರಿಸಿ ಪ್ರತಿಭಟನೆ

    ಸಾಗರ: ರಾಜ್ಯ ಸರ್ಕಾರ ಆಸ್ತಿ ಕ್ರಯ ಮತ್ತು ಸ್ಟಾಂಪ್ ಪೇಪರ್‌ಗಳ ಮೌಲ್ಯ ಹೆಚ್ಚಿಸಿರುವುದನ್ನು ವಿರೋಧಿಸಿ ಶನಿವಾರ ಬಿಜೆಪಿ ಕಾರ್ಯಕರ್ತರು ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಇದಕ್ಕೂ ಮೊದಲು ಜಾಗಟೆ ಬಾರಿಸುವ ಮೂಲಕ ರಾಜ್ಯ ಸರ್ಕಾರದ ದರ ಹೆಚ್ಚಳ ನೀತಿ ಖಂಡಿಸಲಾಯಿತು. ನಂತರ ಉಪವಿಭಾಗಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಲಾಯಿತು.

    ನಗರ ಮಂಡಲ ಅಧ್ಯಕ್ಷ ಕೆ.ಆರ್.ಗಣೇಶಪ್ರಸಾದ್ ಮಾತನಾಡಿ, ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ದಿವಾಳಿಯಾಗಿದೆ. ಜನರ ಕೈಗೆ ಎಟುಕದಷ್ಟು ಮುದ್ರಾಂಕ ಶುಲ್ಕ ಏರಿಸಲಾಗಿದೆ. ಚುನಾವಣೆ ಗೆಲ್ಲಲು ನೀಡಿದ್ದ ಗ್ಯಾರಂಟಿಗಳ ಸರಿದೂಗಿಸಲು ಸಿದ್ದರಾಮಯ್ಯ ಮುಂದಿನ ದಿನಗಳಲ್ಲಿ ಉಸಿರಾಡುವ ಗಾಳಿ ಮೇಲೆ ತೆರಿಗೆ ಹಾಕಿದರೂ ಅಚ್ಚರಿಯಿಲ್ಲ. ಕಳೆದ ಒಂಬತ್ತು ತಿಂಗಳಿನಿಂದ ರಾಜ್ಯ ಸರ್ಕಾರ ಯಾವ ಕ್ಷೇತ್ರಕ್ಕೂ ನಯಾಪೈಸೆ ಅನುದಾನ ನೀಡಿಲ್ಲ. ಹಿಂದಿನ ನಮ್ಮ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾದ ಕಾಮಗಾರಿಗೇ ಹಾಲಿ ಶಾಸಕರು ಗುದ್ದಲಿಪೂಜೆ ಮಾಡಿ, ನಾವು ತಂದಿದ್ದು ಎನ್ನುತ್ತಿದ್ದಾರೆ. ರಾಜ್ಯ ಸರ್ಕಾರ ನಯಾ ಪೈಸೆ ಬಿಡುಗಡೆ ಮಾಡಿಲ್ಲ. ಒಟ್ಟಾರೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಡವರು ಬದುಕು ನಡೆಸುವುದೇ ಕಷ್ಟವಾಗಿದೆ ಎಂದು ದೂರಿದರು.
    ಗ್ರಾಮಾಂತರ ಬಿಜೆಪಿ ಘಟಕದ ಅಧ್ಯಕ್ಷ ದೇವೇಂದ್ರಪ್ಪ ಯಲಕುಂದ್ಲಿ ಮಾತನಾಡಿ, ರಾಜ್ಯ ಸರ್ಕಾರ ಭಾಷಣದಲ್ಲಿ ತಾವು ಬಡವರ ಪರ, ರೈತರ ಪರ ಎಂದು ಹೇಳುತ್ತದೆ. ಆದರೆ ಮುದ್ರಾಂಕ ಶುಲ್ಕವನ್ನು ಅತ್ಯಧಿಕವಾಗಿ ಏರಿಸಿರುವುದರಿಂದ ಬಡವರು ತಮ್ಮ ಆಸ್ತಿಯನ್ನು ನೋಂದಣಿ ಮಾಡಿಸಲು ಸಹ ಹೆದರುವ ಸ್ಥಿತಿ ನಿರ್ಮಾಣವಾಗಿದೆ. ಗ್ಯಾರಂಟಿ ಜಾರಿ ಮಾಡಲು ಹೆಚ್ಚಿನ ಒತ್ತಡ ಹೇರಿದ್ದು ಬಿಜೆಪಿ. ಈಗ ಗ್ಯಾರಂಟಿ ವಿರೋಧಿಗಳು ಎಂದು ಬಿಜೆಪಿಗೆ ಹಣೆಪಟ್ಟಿ ಕಟ್ಟಲು ನೋಡುತ್ತಿದೆ. ತಕ್ಷಣ ಮುದ್ರಾಂಕ ಶುಲ್ಕವನ್ನು ಇಳಿಸಬೇಕು. ವಿಷೇಶವಾಗಿ ಬರಗಾಲದಂತಹ ಈ ಪರಿಸ್ಥಿಯಲ್ಲಿ ಅನ್ನದಾತರಿಗೆ ಇದು ಹೊರೆಯಾಗಲಿದೆ. ಕೂಡಲೆ ಮುದ್ರಾಂಕ ಶುಲ್ಕ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.
    ಪ್ರಮುಖರಾದ ಆರ್.ಶ್ರೀನಿವಾಸ್ ಮೇಸ್ತ್ರಿ, ಮಧುರಾ ಶಿವಾನಂದ್, ವಿ.ಮಹೇಶ್, ಕೆ.ಎಸ್.ಪ್ರಶಾಂತ್, ಕೆ.ಸತೀಶ್, ಸಂತೋಷ್ ಶೇಟ್, ಸಂತೋಷ್ ರಾಯಲ್, ಪ್ರೇಮಾ ಕಿರಣ್‌ಸಿಂಗ್, ಮೈತ್ರಿ ಪಾಟೀಲ್, ಕೃಷ್ಣ ಶೇಟ್, ಬಿ.ಟಿ.ರವೀಂದ್ರ, ಅರುಣ ಕುಗ್ವೆ, ಲಿಂಗರಾಜ್, ಕೆ.ವಿ.ಪ್ರವೀಣ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts