More

    2 ದಿನಗಳ ಬಿಜೆಪಿ ಕಾರ್ಯಕಾರಿಣಿ ಮುಕ್ತಾಯ: ಏನೇನಾಯ್ತು ಚರ್ಚೆ!

    ವಿಜಯನಗರ: ಹೊಸಪೇಟೆಯಲ್ಲಿ ಎರಡು ದಿನಗಳಿಂದ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿ ಸಭೆ ಮುಕ್ತಾಯಗೊಂಡಿದ್ದು, ಮುಂದಿನ ಚುನಾವಣೆ ಹಿನ್ನೆಲೆಯಲ್ಲಿ ಹಲವಾರು ವಿಷಯಗಳು ಚರ್ಚೆ ಆಗಿವೆ. ಕಾರ್ಯಕಾರಿಣಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸುದೀರ್ಘ 40 ನಿಮಿಷಗಳ ಕಾಲ ಮಾತನಾಡಿದರು.

    ದೇಶದಲ್ಲಿರುವ ಏಕೈಕ ರಾಷ್ಟ್ರೀಯ ಪಕ್ಷ ಬಿಜೆಪಿ, ಉಳಿದವು ಪರಿವಾರ ಪಕ್ಷಗಳು. ಕಾಂಗ್ರೆಸ್, ಶಿರೋಮಣಿ ಅಕಾಲ ದಳ, ಲೋಕದಳ, ಸಮಾಜವಾದಿ ಪಕ್ಷ, ಆರ್‌ಜೆಡಿ, ಟಿಎಂಸಿ, ಬಿಜು ಜನತಾ ದಳ, ವೈಎಸ್ಸಾರ್, ಕೆಸಿಆರ್ ಟಿಆರ್​ಎಸ್, ಜೆಡಿಎಸ್, ಶಿವಸೇನೆ, ಎನ್​ಸಿಪಿ ಎಲ್ಲವೂ ಪರಿವಾರ ಪಕ್ಷಗಳು, ಅದರಲ್ಲೂ ಕಾಂಗ್ರೆಸ್​ ಅಣ್ಣ-ತಂಗಿ ಪಕ್ಷ ಎಂದ ನಡ್ಡಾ, ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕಿದೆ ಎಂದರು.

    ಇನ್ನು ಎರಡು ದಿನಗಳ ಕಾಲ ಬಿಜೆಪಿ ನಾಯಕರು 150 ಮಿಷನ್ ಜಪ ಮಾಡಿದರು. 2023ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಮುಕ್ತ ಮಾಡುವ ಬಗ್ಗೆಯೂ ಚರ್ಚೆ ನಡೆದಿದ್ದು, ಸರ್ಕಾರದಲ್ಲಿ ಆಗ್ತಿರುವ ಗೊಂದಲಗಳಿಂದ ಹೊರಬರಬೇಕು ಮತ್ತು ಕಾಂಗ್ರೆಸ್ ಹಿಂದು ವಿರೋಧಿ ನೀತಿ ಬಯಲು ಮಾಡಬೇಕು ಎಂಬ ಅಭಿಪ್ರಾಯವನ್ನೂ ತಳೆಯಲಾಯಿತು.

    2023ಕ್ಕೆ ಮತ್ತೊಮ್ಮೆ ಮೋದಿ ಸ್ವಚ್ಛ ಆಡಳಿತ, ಯಡಿಯೂರಪ್ಪ ಮಾರ್ಗದರ್ಶನ ಮತ್ತು ಬೊಮ್ಮಾಯಿ ನಾಯಕತ್ವದಲ್ಲಿ ಚುನಾವಣೆ ಎದುರಿಸಿ, ಅಧಿಕಾರಕ್ಕೆ ಬರುವ ಬಗ್ಗೆ ಚರ್ಚೆ ಮಾಡಲಾಯಿತು. ಕಾಂಗ್ರೆಸ್ ಆಂತರಿಕ ಜಗಳ ಹಾಗೂ ಹಿಂದು ವಿರೋಧಿ ನೀತಿ, ಜೆಡಿಎಸ್​ನ ಕುಟುಂಬ ರಾಜಕಾರಣವನ್ನ ಜನರಿಗೆ ಮುಟ್ಟಿಸಿ ಆ ಮೂಲಕ‌ 150 ಮಿಷನ್ ಗುರಿ ತಲುಪಬೇಕು ಎಂಬ ನಿಲುವು ಹೊಂದಲಾಯಿತು.

    ಬೆಟ್ಟದ ಇಳಿಜಾರಿನಲ್ಲಿ ಅಪಘಾತಕ್ಕೀಡಾಯ್ತು 90 ಜನರಿದ್ದ ಬಸ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts