More

    ಹೋರಾಟಗಾರರ ತ್ಯಾಗ, ಬಲಿದಾನ ಸ್ಮರಣೀಯ

    ಯಾದಗಿರಿ: ಕರೊನಾ ಆತಂಕದ ಮಧ್ಯೆಯೂ ಜಿಲ್ಲಾದ್ಯಂತ ಶನಿವಾರ 74ನೇ ಸ್ವಾತಂತ್ರೃ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.

    ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರಡ್ಡಿ ನಾಯ್ಕಲ್ ಮಾತನಾಡಿ, 200 ವರ್ಷಗಳ ಸುದೀರ್ಘ ಹೋರಾಟದ ಫಲವಾಗಿ ದೇಶಕ್ಕೆ ಸ್ವಾತಂತ್ರೃ ಸಿಕ್ಕಿದೆ. ಈ ಹೋರಾಟದಲ್ಲಿ ಮಹಾತ್ಮ ಗಾಂಧಿ, ಭಗತಸಿಂಗ್ ಸುಭಾಷಚಂದ್ರ ಬೋಸ್, ಬಾಲಗಂಗಾಧರ ತಿಲಕ್, ಚಂದ್ರಶೇಖರ ಆಜಾದ್ ಮೊದಲಾದವರ ತ್ಯಾಗ, ಬಲಿದಾನ ಅಡಗಿದೆ ಎಂದು ಸ್ಮರಿಸಿದರು.

    ಶಾಸಕ ವೆಂಕಟರಡ್ಡಿ ಮುದ್ನಾಳ್, ಮಾಜಿ ಶಾಸಕ ಡಾ.ವೀರಬಸವಂತರಡ್ಡಿ ಮುದ್ನಾಳ್, ಜಿಲ್ಲಾ ಪ್ರಧಾನ ಕಾರ್ಯದಶರ್ಿಗಳಾದ, ದೇವೇಂದ್ರನಾಥ ನಾದ, ವೆಂಕಟರಡ್ಡಿ ಅಬ್ಬೆತುಮಕೂರ, ಗುರು ಕಾಮಾ, ಲಲಿತಾ ಅನಪುರ, ಖಂಡಪ್ಪ ದಾಸನ್, ಸುರೇಶ ಅಂಬಿಗೇರ, ಮಾರುತಿ ಕಲಾಲ್, ಕೃಷ್ಣ ನಾಯಯ, ವಿಲಾಸ ಪಾಟೀಲ್, ಹನುಮಂತ ಇಟಗಿ, ನವಾಬ್, ಸ್ವಾಮಿದೇವ ದಾಸನಕೇರಿ, ವೀಣಾ ಮೋದಿ, ಸುನಿತಾ ಚವ್ಹಾಣ್, ಪರಶುರಾಮ ಕುರಕುಂದಿ, ದೀಪಕ ಪೋದ್ದಾರ ಇತರರಿದ್ದರು.

    ಜಿಲ್ಲಾ ಕಸಾಪ ಕಚೇರಿ: ಹಿಂದಿ ಪ್ರಚಾರ ಸಭಾ ಆವರಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನಿಂದ ಸ್ವಾತಂತ್ರೃ ದಿನೋತ್ಸವ ಜರುಗಿತು. ಹಿರಿಯ ಸಾಹಿತಿ ಅಯ್ಯಣ್ಣ ಹುಂಡೇಕಾರ ಧ್ವಜಾರೋಹಣ ನೆರವೇರಿಸಿದರು. ಮಹಾತ್ಮ ಗಾಂಧಿ ಭಾವಚಿತ್ರಕ್ಕೆ ಕಸಾಪ ಅಧ್ಯಕ್ಷ ಡಾ.ಸಿದ್ದಪ್ಪ ಹೊಟ್ಟಿ ಪೂಜೆ ಸಲ್ಲಿಸಿದರು. ಡಾ.ಎಸ್.ಎಸ್. ನಾಯಕ, ನಾಗಪ್ಪ ಸಜ್ಜನ್, ಬಸವಂತ್ರಾಯಗೌಡ ಮಾಲಿಪಾಟೀಲ್, ವೀರಭದ್ರಯ್ಯ ಸ್ವಾಮಿ ಜಾಕಾಮಠ, ರಾಜು, ನಾಗೇಂದ್ರ ಜಾಜಿ, ಬಾಲರಾಜ ನಕ್ಕಲ್, ಸಂಗಣ್ಣ ಹೋತಪೇಟೆ, ಅನಿಲ್ ಗುರೂಜಿ, ಮಲ್ಲಪ್ಪ ಹಳಕಟ್ಟಿ, ಅಬ್ದುಲ್ ಸಲೀಂ ಸಾಬ ಐಕೂರು ಇದ್ದರು.

    ವೀರನಿಕೇತನ ಕಚೇರಿ: ಮಾಜಿ ಶಾಸಕ ಡಾ.ವೀರಬಸವಂತರಡ್ಡಿ ಮುದ್ನಾಳ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದೇಶದ ಸ್ವಾತಂತ್ರೃಕ್ಕಾಗಿ ಅನೇಕ ನಾಯಕರು ತಮ್ಮ ಜೀವ ಬಲಿ ಕೊಟ್ಟಿದ್ದಾರೆ. ಇಂತಹ ಸ್ವಾತಂತ್ರೃವನ್ನು ನಾವು ಉಳಿಸಿಕೊಂಡು ಹೋಗಬೇಕಾಗಿದೆ ಎಂದರು. ಡಾ.ಸಿದ್ದಪ್ಪ ಹೊಟ್ಟಿ, ರಾಚಣ್ಣಗೌಡ ಮುದ್ನಾಳ್, ನಾಗಪ್ಪ ಬೆನಕಲ್, ಗುಂಡೇರಾವ ಪಂಚಾಹತ್ರಿ, ನೀಲಕಂಠ ಶೀಲವಂತ, ಸುಭಾಷ ಮಾಳಿಕೇರಿ, ಬಲವಂತ ದಾಸನಕೇರಿ, ಮೋಹನ ಬಾಬು, ಅನೀಲ್ ಗುರೂಜಿ, ಸೈಯದ್ ಗೌಸ್ ಚೌದ್ರಿ, ಅನಿಲ್ ಕರಾಟೆ ಇತರರಿದ್ದರು.

    ಕರವೇ ಕಾರ್ಯಾಲಯ: ಕರ್ನಾಟಕ ರಕ್ಷಣಾ ವೇದಿಕೆ ಕಚೇರಿಯಲ್ಲಿ ಸ್ವಾತಂತ್ರ್ಯ ದಿನ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ಆಚರಿಸಲಾಯಿತು. ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕರ ರಕ್ತ ಹರಿದಿದೆ. ಲಕ್ಷಾಂತರ ಜನ ಮನೆ, ಮಠ ಬಿಟ್ಟು ಹೋರಾಟಕ್ಕೆ ಧುಮುಕಿ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ ಎಂದು ಹೇಳಿದರು. ಪ್ರಧಾನ ಕಾರ್ಯದಶರ್ಿ ಸಿದ್ದು ನಾಯಕ ಹತ್ತಿಕುಣಿ, ಮಲ್ಲು ಮಾಳಿಕೇರಿ, ತೇಜರಾಜ ರಾಠೋಡ್, ವಿಶ್ವಾರಾಧ್ಯ ದಿಮ್ಮೆ, ರವಿಕುಮಾರ ಮಸಳಿ, ಸಾಹೇಬಗೌಡ ನಾಯಕ, ನಾಗು ತಾಂಡೂರಕರ್, ದೀಪಕ ಒಡೆಯರ್, ರಾಜು ಪಗಲಾಪುರ, ಕಾಶೀನಾಥ ನಾನೇಕ, ಶರಣು ನಾಯಕ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts