More

    ಪ್ರತಿಯೊಬ್ಬರೂ ದೇಶದ ಸಂವಿಧಾನ ಗೌರವಿಸಿ

    ಚಿಕ್ಕೋಡಿ: ಪ್ರತಿಯೊಬ್ಬರೂ ಸಂವಿಧಾನ ಗೌರವಿಸುವ ಮೂಲಕ ದೇಶದ ಪ್ರಗತಿಗೆ ಶ್ರಮಿಸಬೇಕು ಎಂದು ಉಪವಿಭಾಗಾಧಿಕಾರಿ ಮಾಧವ ಗಿತ್ತೆ ಹೇಳಿದರು.

    ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ 74ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಲು ಶ್ರಮಿಸಿದ ಮಹಾನ್ ನಾಯಕರನ್ನು ಪ್ರತಿಯೊಬ್ಬರೂ ಸ್ಮರಿಸುವುದರ ಜತೆಗೆ ಯುವ ಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕು ಎಂದರು. ಶಾಸಕ ಗಣೇಶ ಹುಕ್ಕೇರಿ ಮಾತನಾಡಿ, ರಾಜ್ಯ ಸರ್ಕಾರ 15 ಎಕರೆ ಜಾಗದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಕುರಿತು ಮ್ಯೂಜಿಯಂ ಮಂಜೂರು ಮಾಡಿದೆ. ಅಧಿಕಾರಿಗಳು ತಕ್ಷಣ ಮ್ಯೂಜಿಯಂ ನಿರ್ಮಿಸಬೇಕು ಎಂದರು.

    ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಮತ್ತು ಸುಧಾಮೂರ್ತಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿರುವುದು ಸಂತಸ ತಂದಿದೆ ಎಂದರು.
    ಪೊಲೀಸ್, ಎನ್‌ಸಿಸಿ ಮತ್ತು ಸ್ಕೌಟ್ಸ್ ಹಾಗೂ ಗೈಡ್ಸ್ ವಿದ್ಯಾರ್ಥಿಗಳಿಂದ ಪರೇಡ್ ಜರುಗಿತು. ಪಿಎಸ್‌ಐ ಯಮನಪ್ಪ ಮಾಂಗ ಪರೇಡ್ ನೇತೃತ್ವ ವಹಿಸಿದ್ದರು. ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಪುರಸಭೆ ಉಪಾಧ್ಯಕ್ಷ ಸಂಜಯ ಕವಟಗಿಮಠ, ಪುರಸಭೆ ಸದಸ್ಯರಾದ ಸಾಭೀರ್ ಜಮಾದಾರ, ರಮಾ ಮಾನೆ, ಗುಲಾಬ ಬಾಗವಾನ್, ಅನಿಲ ಮಾನೆ, ವರ್ಧಮಾನ ಸದಲಗೆ, ಡಿಡಿಪಿಐ ಮೋಹನಕುಮಾರ ಹಂಚ್ಯಾಟೆ, ತಹಸೀಲ್ದಾರ್ ಸಿ.ಎಸ್.ಕುಲಕರ್ಣಿ, ಲೋಕೋಪಯೋಗಿ ಇಲಾಖೆ ಅಭಿಯಂತ ವಿ.ಎನ್. ಪಾಟೀಲ, ಡಿಎಚ್‌ಒ ಡಾ.ಎಸ್.ಎಸ್.ಗಡೇದ, ಟಿಎಚ್‌ಒ ಡಾ. ವಿಠ್ಠಲ ಶಿಂಧೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಭಿಯಂತ ಆನಂದ ಬಣಗಾರ, ಬಿಇಒ ಪಿ.ಬಿ.ಹಿರೇಮಠ, ಡಿವೈಎಸ್‌ಪಿ ಬಸವರಾಜ ಯಲಿಗಾರ, ಸಿಪಿಐ ಆರ್.ಆರ್.ಪಾಟೀಲ, ಶಿಕ್ಷಕ ಎ.ಬಿ.ಸೊಲ್ಲಾಪೂರೆ ಇದ್ದರು.

    ಐಗಳಿ ವರದಿ: ಗ್ರಾಮದ ವಿವಿಧೆಡೆ ಗಣರಾಜ್ಯೋತ್ಸವ ಆಚರಿಸಲಾಯಿತು. ಗ್ರಾಪಂದಲ್ಲಿ ಅಧ್ಯಕ್ಷೆ ರಾಜಶ್ರೀ ಪಾಟೀಲ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿ.ಎಸ್. ನೇಮಗೌಡ, ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ, ಎಸ್.ಎಚ್. ಪವಾರ ಧ್ವಜಾರೋಹಣ ನೆರವೇರಿಸಿದರು.

    ಕಕಮರಿ ವರದಿ: ಸಂವಿಧಾನದ ಆಶಯ ಉಳಿಸಿ, ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಹನುಮಂತ ಕಾಂಬಳೆ ಹೇಳಿದರು. ಇಲ್ಲಿನ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಅಪ್ಪುಗೌಡ ಪಾಟೀಲ, ತಾಪಂ ಮಾಜಿ ಸದಸ್ಯ ಅಪ್ಪಾಸಾಬ ಈರಗೌಡ, ಬಸಪ್ಪ ದುಂಡಿ, ಮಹಾದೇವ ಬಿರಾದಾರ, ಪಿಡಿಒ ಎ್.ಎಸ್.ಅತ್ತಾರ ಇದ್ದರು.

    ತೆಲಸಂಗ ವರದಿ: ಗ್ರಾಮದಲ್ಲಿ ಗುರುವಾರ ವಿವಿಧೆಡೆ ಗಣರಾಜ್ಯೋತ್ಸ ವ ಆಚರಿಸಲಾಯಿತು. ಗ್ರಾಮದ ನಾಡಕಚೇರಿಯಲ್ಲಿ ಉಪತಹಸೀಲ್ದಾರ್ ಬಿ.ವೈ.ಹೊಸಕೇರಿ ಧ್ವಜಾರೋಹಣ ನೆರವೇರಿಸಿದರು. ಕಂದಾಯ ನಿರೀಕ್ಷಕ ಮುಬಾರಕ್ ಮುಜಾವರ, ಗ್ರಾಮ ಲೆಕ್ಕಾಧಿಕಾರಿ ಬಿ.ಜಿ.ಇರಕಾರ, ರಾಜು ವಾಗಮೋರೆ, ಹಣಮಂತ ಮಾಳಿ, ಹುಸೇನ ಅರಟಾಳ, ರವಿ ದಳವಾಯಿ ಇತರರು ಇದ್ದರು. ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ವಿಲಾಸ ಮೋರೆ ಧ್ವಜಾರೋಹಣ ನೆರವೇರಿಸಿದರು. ಪಿಡಿಒ ಬೀರಪ್ಪ ಕಡಗಂಚಿ, ಉಪಾಧ್ಯಕ್ಷೆ ಮೀನಾಕ್ಷಿ ಬಾಣಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts