More

    ಬಿಜೆಪಿ ತಡೆಯಲು ಕಾರ್ಮಿಕ ವರ್ಗ ನಿರ್ಧಾರ-ಸಿಐಟಿಯು ಕಾರ್ಯಕರ್ತರ ಸಭೆಯಲ್ಲಿ ವಸಂತ ಆಚಾರಿ ಕರೆ

    ಮಂಗಳೂರು: ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರ ನಿತ್ಯ ನಿರಂತರವಾಗಿ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸಿ ದುಡಿಯುವ ವರ್ಗದ ಜನತೆಯ ಬದುಕನ್ನೇ ಸರ್ವನಾಶಗೊಳಿಸಿದೆ. ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ತಡೆಯಲು ಕಾರ್ಮಿಕ ವರ್ಗ ಒಂದಾಗಿ ನಿಲ್ಲಬೇಕಾಗಿದೆ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ ಜಿಲ್ಲೆಯ ಕಾರ್ಮಿಕ ವರ್ಗಕ್ಕೆ ಕರೆ ನೀಡಿದರು.

    ಬಿಜೆಪಿ ಸರ್ಕಾರ ದುಡಿಮೆಯ ಅವಧಿಯನ್ನು ಹೆಚ್ಚಳಗೊಳಿಸಿದ್ದು, ಮಾತ್ರವಲ್ಲದೆ ರಾತ್ರಿ ಪಾಳಿಯಲ್ಲಿ ಮಹಿಳೆಯರನ್ನು ದುಡಿಸುವ ಮೂಲಕ ತೀರಾ ಅಮಾನವೀಯ ಕಾರ್ಯಕ್ಕೆ ಮುಂದಾಗಿದೆ. ಇಂತಹ ಫ್ಯಾಸಿಸ್ಟ್ ಮನೋಭಾವದ ಸರ್ಕಾರ ಮತ್ತೆ ಅಧಿಕಾರಕ್ಕೇರಿದರೆ ಜನತೆಯ ಬದುಕಿಗೆ ಮಾತ್ರವಲ್ಲ, ನಾಡಿನ ಸೌಹಾರ್ದ ಪರಂಪರೆಗೆ ಅಪಾಯ ಕಟ್ಟಿಟ್ಟ ಬುತ್ತಿ. ಅದನ್ನು ತಡೆಯಲು ಕಾರ್ಮಿಕ ವರ್ಗ ಒಂದಾಗಿ ನಿಲ್ಲಬೇಕಾಗಿದೆ ಎಂದು ಹೇಳಿದರು.

    ಮಂಗಳೂರಿನಲ್ಲಿ ಜರುಗಿದ ಸಿಐಟಿಯು ದ.. ಜಿಲ್ಲಾ ಮಟ್ಟದ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

    ಜನರಲ್ಲಿ ಬೆಳೆದು ಬರುತ್ತಿರುವ ತೀವ್ರ ಪ್ರತಿರೋಧವನ್ನು ಬಗ್ಗು ಬಡಿಯಲು ಕೋಮುವಾದದ ಭೂತವನ್ನು ಮುನ್ನೆಲೆಗೆ ತಂದು ತಾನು ಮಾಡುತ್ತಿರುವ ಅನ್ಯಾಯವನ್ನು ಮರೆಮಾಚಲಾಗುತ್ತಿದೆ ಎಂದು ಅವರು ಆರೋಪಿಸಿದರು.

    ಅಧ್ಯಕ್ಷತೆ ವಹಿಸಿದ ಸಿಐಟಿಯು ಜಿಲ್ಲಾಧ್ಯಕ್ಷ ಜೆ ಬಾಲಕೃಷ್ಣ ಶೆಟ್ಟಿ ಮಾತನಾಡಿ, .ಕ ಜಿಲ್ಲೆಯು ಅಭಿವೃದ್ದಿಯಾಗಬೇಕಾದರೆ ಸೌಹಾರ್ದ ತೀರಾ ಅಗತ್ಯ. ದುಡಿಯುವ ವರ್ಗದ ಚಳುವಳಿಯಿಂದ ಮಾತ್ರವೇ ಸೌಹಾರ್ದತೆ ಮತ್ತು ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

    ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಪ್ರಸ್ತಾವನೆಗೈದರು. ಜಿಲ್ಲಾ ನಾಯಕರಾದ ಯು.ಬಿ ಲೋಕಯ್ಯ, ಯೋಗೀಶ್ ಜಪ್ಪಿನಮೋಗರು, ಸುಕುಮಾರ್, ಮುನೀರ್ ಕಾಟಿಪಳ್ಳ, ರಾಧಾ ಮೂಡುಬಿದಿರೆ, ನೋಣಯ್ಯ ಗೌಡ, ಸುಂದರ ಕುಂಪಲ, ಬಿ.ಕೆ ಇಮ್ತಿಯಾಜ್, ವಸಂತಿ ಕುಪ್ಪೆಪದವು, ಗಿರಿಜಾ ಮೂಡುಬಿದಿರೆ, ಲೋಲಾಕ್ಷಿ ಬಂಟ್ವಾಳ ಉಪಸ್ಥಿತರಿದ್ದರು._

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts