More

    ಬಿಜೆಪಿ, ಮೋದಿ ಇವೆರಡೇ ನನ್ನ ಚಿಂತನೆ; ಬಿ.ವೈ.ವಿಜಯೇಂದ್ರ ಭರವಸೆ

    ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಬಲಿಷ್ಠವಾಗಬೇಕು, ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದು, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದಕ್ಕೆ ರಾಜ್ಯದಿಂದ ಕಾಣಿಕೆ ನೀಡಬೇಕು. ಇವರೆಡೇ ನನ್ನ ಮುಂದಿರುವ ಚಿಂತನೆಯಾಗಿದೆ. ಈ ವಿಷಯದಲ್ಲಿ ಕಾರ್ಯಕರ್ತರಿಗೆ ಖಚಿತ ಭರವಸೆ ನೀಡ ಬಯಸುವೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

    ಅರಮನೆ ಮೈದಾನದಲ್ಲಿ ಶನಿವಾರ ಏರ್ಪಡಿಸಿದ್ದ ಚುನಾವಣಾ ಸಿದ್ಧತಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಎರಡು ವಾರಗಳಿಂದ ಮಾಧ್ಯಮಗಳಲ್ಲಿ ಬರುತ್ತಿರುವ ವರದಿ ಗಮನಿಸಿರಬಹುದು. ಈ ಬಗ್ಗೆ ವ್ಯಸನ, ಅನ್ಯ ಯೋಚನೆ ಬೇಡ. ನನಗಿರೋದು ಪಕ್ಷ ಮತ್ತು ಚಿಂತನೆ ಎಂದು ಪುನರುಚ್ಚರಿಸಿದರು.

    ವಿಶೇಷ ವಾತಾವರಣ

     ಪೂರ್ಣ ಐದು ವರ್ಷಗಳ ಅಧಿಕಾರದ ಅವಧಿ ಪೂರ್ಣಗೊಳಿಸಿದ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆಯಿರುವುದು ಸಹಜ. ಆದರೆ, ಈ ಬಾರಿ ಚುನಾವಣೆಯಲ್ಲಿ ವಿಶೇಷ ವಾತಾವರಣವಿದೆ. ಕಳೆದ 10 ವರ್ಷಗಳಿಂದ ದೇಶಕ್ಕಾಗಿ ದುಡಿಯುತ್ತಿರುವ ಮೋದಿ, ಅಭಿವೃದ್ಧಿ, ಜನಪರ ಕಾರ್ಯಕ್ರಮದ ಕೊಡುಗೆಗಳು ಜನರ ಮೆಚ್ಚುಗೆಗೆ ಪಾತ್ರವಾಗಿವೆ ಏಂದರು.

    ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಬಿಜೆಪಿ ಪರವಾದ ವಾತಾರವರಣ, ಮೋದಿ ಪರ ಅಲೆ ಮತ್ತಷ್ಟು ಹೆಚ್ಚಳವಾಗಿದೆ. 2047ಕ್ಕೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸಬೇಕು ಎಂಬ ಕೈಂಕರ್ಯ ತೊಟ್ಟ ಮೋದಿ ಅವರನ್ನು ಮತ್ತೆ ಅಧಿಕಾರಕ್ಕೆ ತರಲು ಜನರು ಬಯಸಿದ್ದು, ಬಿಜೆಪಿ ಗೆಲ್ಲುವ ವಿಶ್ವಾಸ ಮೂಡಿಸಿದೆ.

    ವಿವಾದಾತೀತ ನಾಯಕರಾದ ಮೋದಿಯವರಿಗೆ ಸರಿಸಾಟಿ ನಾಯಕ ವಿರೋಧ ಪಕ್ಷಗಳಲ್ಲಿಲ್ಲ. ಇಡೀ ದೇಶವೇ ವಿಶ್ವ ನಾಯಕ ಎಂದು ಒಪ್ಪಿವೆ. ಈ ಬಾರಿ ಮೋದಿ ಸಾರಥ್ಯದಲ್ಲಿ ಬಿಜೆಪಿ ಎಷ್ಟು ಸೀಟುಗಳನ್ನು ಗೆಲ್ಲಲಿದೆ ಎಂದು ವಿದೇಶಗಳು ಕಾತರದಿಂದ ಕಾಯುತ್ತಿವೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.

    ಜೆಡಿಎಸ್  ಗೆ ಮೂರು ಸೀಟ್ ಖಾತರಿ

    ಪಕ್ಷದ ರಾಜ್ಯ ಲೋಕಸಭಾ ಚುನಾವಣೆ ಉಸ್ತುವಾರಿ ಡಾ.ರಾಧಾ ಮೋಹನದಾಸ್ ಅಗರ್ವಾಲ್ ಅವರು ಜೆಡಿಎಸ್ ಗೆ ಕೋಲಾರ, ಮಂಡ್ಯ ಹಾಗೂ ಹಾಸನ ಲೋಕಸಭೆ ಕ್ಷೇತ್ರಗಳ ಹಂಚಿಕೆಯನ್ನು ಅಧಿಕೃತವಾಗಿ ಖಾತರಿಪಡಿಸಿ, ಉಳಿದ ಐದು ಕ್ಷೇತ್ರಗಳಿಗೆ ಪಕ್ಷದ ಅಭ್ಯರ್ಥಿಗಳು ನಾಳೆಯೊಳಗೆ ಪ್ರಕಟವಾಗುತ್ತವೆ ಎಂದು ತಿಳಿಸಿದರು.

    ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿದರು. ಪಕ್ಷದ ಚುನಾವಣಾ‌ ನಿರ್ವಹಣೆ ಸಮಿತಿ ರಾಜ್ಯ ಸಂಚಾಲಕ ವಿ.ಸುನಿಲ್ ಕುಮಾರ್, ಸದಸ್ಯರಾದ ಭಾರತಿಶೆಟ್ಟಿ,‌ಕೇಶವಪ್ರಸಾದ್,‌ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪಿ.ರಾಜೀವ್, ಪ್ರೀತಂ ಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts