More

    ಕಾವೇರಿ ಬಿಕ್ಕಟ್ಟು: ರಾಜ್ಯ ಸರ್ಕಾರ ಸರ್ಕಾರದ ವಿರುದ್ಧ ಬಿಎಸ್​ವೈ, ಎಚ್​ಡಿಕೆ ವಾಗ್ದಾಳಿ

    ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸಿರುವುದನ್ನು ಖಂಡಿಸಿ ರಾಜ್ಯದಲ್ಲಿ ನಿರಂತರವಾಗಿ ಪ್ರತಿಭಟನೆಗಳು ನಡೆಯುತ್ತಿದೆ. ನಿನ್ನೆಯಷ್ಟೇ ಬೆಂಗಳೂರು ಬಂದ್​ ಆಗಿತ್ತು. ನಾಳೆ ಕರ್ನಾಟಕ ಬಂದ್​ ಆಗಲಿದೆ. ಇಂದು ಬಿಜೆಪಿ ಮತ್ತು ಜೆಡಿಎಸ್​ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಒಂದೇ ಬ್ಯಾನರ್​ ಅಡಿಯಲ್ಲಿ ಜಂಟಿಯಾಗಿ ಪ್ರತಿಭಟನೆ ನಡೆಸುತ್ತಿವೆ.

    ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಡಿವಿ ಸದಾನಂದ ಗೌಡ, ಗೋವಿಂದ ಕಾರಜೋಳ, ಬಿಜೆಪಿ ರಾಜ್ಯಾಧ್ಯಕ್ಷರು, ಮಾಜಿ ಸಚಿವರಾದ ಮುನಿರತ್ನ, ಅಶ್ವಥ್ ನಾರಾಯಣ, ‌ಸಂಸದ ಪಿ.ಸಿ. ಮೋಹನ್, ಶಾಸಕರಾದ ಮುನಿರಾಜು, ‌ಸಿಕೆ ರಾಮಮೂರ್ತಿ ಹಾಗೂ ಜೆಡಿಎಸ್​ ಎಂಎಲ್​ಸಿ ಗೋವಿಂದರಾಜು, ಜೆಡಿಎಸ್ ಶಾಸಕ ಎ.ಮಂಜು, ಮುಖಂಡರಾದ ಶ್ರೀಕಂಠೇಗೌಡ, ಶರವಣ ಸೇರಿದಂತೆ ಉಭಯ ಪಕ್ಷಗಳ ನಾಯಕರು ಪ್ರತಿಭಟನೆಯ ಭಾಗಿಯಾಗಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

    ಪ್ರತಿಭಟನೆಯ ನಡುವೆ ಮಾತನಾಡಿದ ಮಾಜಿ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ, ಪ್ರಧಾನಿ ಮಧ್ಯಪ್ರವೇಶ ಮಾಡಬೇಕು‌ ಅಂತಿದ್ದಾರೆ. ಇದರ ಮೂಲಕ ಕೇಂದ್ರ ಸರ್ಕಾರದ ಮೇಲೆ ‌ಹಾಕ್ತಿದ್ದಾರೆ. ಆದರೆ, ನೀರು ‌ಬಿಡುವ ಪರಿಸ್ಥಿತಿಯಲ್ಲಿ ಇಲ್ಲದಿದ್ದರೂ ನೀರು‌ಬಿಟ್ಟಿದ್ದಾರೆ. ಆರಂಭದಲ್ಲಿಯೇ‌ 10 ಸಾವಿರ ಕ್ಯೂಸೆಕ್ ನೀರು ಬಿಟ್ಟುರು. ನೀರು ಬಿಟ್ಟ ಮೇಲೆ ಸಭೆ ಮಾಡಿದರು. ನಿನ್ನೆ ಮತ್ತೆ ನೀರು ಬಿಡಬೇಕು ಎಂದು ಕಾವೇರಿ ನದಿ ನೀರು ಸಮಿತಿ ಹೇಳಿರುವುದು ದುರ್ದೈವದ ಸಂಗತಿ ಎಂದರು.

    ಕ್ಷೇತ್ರ ಅಧ್ಯಯನ ಆಗಬೇಕು

    ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಸತತವಾಗಿ ‌ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಲ್ಲಿ ಸರಿಯಾಗಿ ವಾದ ಮಾಡದೇ ವ್ಯತಿರಿಕ್ತವಾಗಿ ಆದೇಶ ಪಡೆದಿದ್ದಾರೆ. ನಿನ್ನೆ ಮತ್ತೆ 3 ಸಾವಿರ ಕ್ಯೂಸೆಕ್ ‌ಬಿಡಿ ಅಂತ ಆರ್ಡರ್ ಬಂದಿದೆ. ಡಿ.ಕೆ. ಶಿವಕುಮಾರ್ ಅವರು ಈ ಆರ್ಡರ್ ಖುಷಿ‌ ತಂದಿದೆ ಅಂತಾರೆ. ಇಲ್ಲಿನ ವಸ್ತುಸ್ಥಿತಿ ಅವಲೋಕಿಸುವಂತೆ ಸ್ಥಳ ಪರಿಶೀಲನೆ ಮಾಡುವಂತೆ ಅರ್ಜಿ ‌ಹಾಕಬೇಕಿದೆ ಮತ್ತು ಕ್ಷೇತ್ರ ಅಧ್ಯಯನ ಆಗಬೇಕಿದೆ ಎಂದರು.

    ನೀರಾವರಿ ಸಚಿವರ‌ ಹೇಳಿಕೆ ಮತ್ತಷ್ಟು ಮಾರಕ 

    ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿ ರೈತರು‌ ಪ್ರತಿ ದಿನ ಹೋರಾಟ ಮಾಡುತ್ತಿದ್ದಾರೆ. ಇವತ್ತು ಜಂಟಿಯಾಗಿ ಪ್ರತಿಭಟನೆ ಮಾಡ್ತಿರೋದು‌ ರಾಜಕಾರಣಕ್ಕೆ ಅಲ್ಲ. ಸಿಎಂ ರಾಜಕೀಯಕ್ಕೆ ಬಳಸಿಕೊಳ್ಳುವ ಕೆಲಸ ಮಾಡ್ತಿದ್ದಾರೆ. ಈಗಲೂ ಎಚ್ಚೆತ್ತುಕೊಳ್ಳುವ ಪರಿಜ್ಞಾನ ಸರ್ಕಾರಕ್ಕೆ ಇಲ್ಲ. ಸರ್ವಪಕ್ಷ ಸಭೆ‌ ಕರೆದಾಗ ನಾವು ಹೇಳಿದ್ದನ್ನು ಇವರು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಪ್ರತಿದಿನ 5 ಸಾವಿರ ಕ್ಯೂಸೆಕ್‌ ಹೇಳಿದರು. ಸುಪ್ರೀಂಕೋರ್ಟ್ ತೀರ್ಪು‌ ಬರೋವರೆಗೂ ಕಾಯಬೇಕಿತ್ತು. 10 ರಿಂದ 15 ದಿನದ ನೀರನ್ನು ಉಳಿಸಿಕೊಳ್ಳಬಹುದಿತ್ತು‌. ನೀರಾವರಿ ಸಚಿವರಿಂದ ‌ಬೆಂಗಳೂರಿನಲ್ಲಿ ‌ವ್ಯವಹಾರ ಮಾಡೋಕೆ ಸಮಯ ಇಲ್ಲ. ಅಂತಹವರನ್ನ ನೀರಾವರಿ ಸಚಿವರನ್ನಾಗಿ ಮಾಡಿದ್ದಾರೆ. ಬೆಳಗ್ಗೆ ಪ್ರಾಧಿಕಾರದ ಸಭೆ ಇರುವಾಗ ಒಳಹರಿವು ಹೆಚ್ಚಾಗಿದೆ ಅಂತಾ‌ ಜವಬ್ದಾರಿ ಸ್ಥಾನದಲ್ಲಿ ‌ಇರೋರು ‌ಹೇಳ್ತಾರಾ? ಮೆಟ್ಟೂರು‌ ಜಲಾಶಯದಲ್ಲಿ ಒಳಹರಿವು, ಹೊರ ಹರಿವಿನ ಮಾಹಿತಿ ತರಿಸಿದ್ದೇನೆ. ಒಳಹರಿವು‌ 6400 ಕ್ಯೂಸೆಕ್ ಇದೆ. ಕಳೆದ‌ ಕೆಲ ದಿನ ಭಾಗಮಂಡಲದಲ್ಲಿ ಮಳೆ‌ ಆಗಿದ್ದಕ್ಕೆ ಸ್ವಲ್ಪ‌ನೀರು‌ ಬರ್ತಿದೆ. ಸ್ಥಳ‌ ಪರಿಶೀಲನೆಗೆ ಹೋಗ್ತಿಲ್ಲ. ನೀರಾವರಿ ಸಚಿವರ‌ ಹೇಳಿಕೆ ಮತ್ತಷ್ಟು ಮಾರಕ ಆಗಲಿದೆ. ಲಘುವಾದ ನಡವಳಿಕೆಯಿಂದ ಮುಂದಿನ ದಿನದಲ್ಲಿ ಸಮಸ್ಯೆ ಆಗಲಿದೆ ಎಂದು ಎಚ್​ಡಿಕೆ ಹೇಳಿದರು.

    ಏಜೆಂಟ್​ನಂತೆ ವರ್ತಿಸುತ್ತಿದೆ

    ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ, ರಾಜ್ಯ ಸರ್ಕಾರ ತಮಿಳುನಾಡಿನ ಏಜೆಂಟ್​ನಂತೆ ವರ್ತಿಸುತ್ತಿದೆ. ಬರುವ ದಿನಗಳಲ್ಲಿ ನಾಡಿನ‌ ಜನರ ಹಿತದೃಷ್ಟಿಯಿಂದ ಜೆಡಿಎಸ್‌-ಬಿಜೆಪಿ‌ ಹೋರಾಟ ನಡೆಸುತ್ತಿದೆ. ನಿಮ್ಮ ರಾಜಕೀಯ ದೊಂಬರಾಟಕ್ಕೆ ಅವಕಾಶ ನೀಡಲ್ಲ. ಕರ್ನಾಟಕದಲ್ಲಿ ಮಳೆ ಮುಗಿದಿದೆ ಮತ್ತು ತಮಿಳುನಾಡಿನಲ್ಲಿ ಈಗ ಶುರುವಾಗಿದೆ. ಕಾವೇರಿ ಹೋರಾಟಕ್ಕೆ ಕುಮಾರಸ್ವಾಮಿ ಬಂದು ದೊಡ್ಡ ಶಕ್ತಿ ತಂದಿದ್ದಾರೆ. ವಾಸ್ತವ ಸ್ಥಿತಿಯನ್ನು ತಿಳಿದು ನೀರು ನಿಲ್ಲಿಸಬೇಕು ಎಂದು ಹೇಳಿದರು.

    ಬರೋಬ್ಬರಿ ಒಂದು ವರ್ಷ ನಂತರ ಮೊದಲ ಬಾರಿಗೆ ಮಕ್ಕಳ ಫೋಟೋ ಹಂಚಿಕೊಂಡ ನಯನತಾರ ದಂಪತಿ!

    ಏಷ್ಯನ್ ಗೇಮ್ಸ್ 2023: ಭಾರತಕ್ಕೆ ಡಬಲ್ ಸಂತೋಷ.. ಸಿಫ್ಟ್ ಕೌರ್ ಸಮ್ರಾಗೆ ಚಿನ್ನ, ಆಶಿಗೆ ಕಂಚಿನ ಪದಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts