More

    ಬಾಕಿ ಹೆಚ್ಚುವರಿ ಗೌರವಧನ ಬಿಡುಗಡೆಗೊಳಿಸಿ

    ಸಿಂಧನೂರು: ಬಿಸಿಯೂಟ ನೌಕರರ ಗೌರವಧನವನ್ನು ಹೆಚ್ಚಿಸಲು ಆಗ್ರಹಿಸಿ ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘದ ತಾಲೂಕು ಸಮಿತಿ ಶಾಸಕ ಹಂಪನಗೌಡ ಬಾದರ್ಲಿಗೆ ಸೋಮವಾರ ಮನವಿ ಪತ್ರ ಸಲ್ಲಿಸಿತು.

    ಬಿಸಿಯೂಟವನ್ನು ಶಿಕ್ಷಣ ಇಲಾಖೆಗೆ ನೀಡಿ

    ಬಿಸಿಯೂಟ ಯೋಜನೆಯಡಿ ಕೆಲಸ ಮಾಡುತ್ತಿರುವ ಮಹಿಳಾ ಕಾರ್ಮಿಕರು ಅತ್ಯಂತ ಕಡಿಮೆ ಗೌರವಧನದಲ್ಲಿ ದುಡಿಯುತ್ತಿದ್ದಾರೆ. ಹೀಗಾಗಿ ಅವರು ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿಯುವಂತಾಗಿದೆ. ಬೇಡಿಕೆಗಾಗಿ ಈಗಾಗಲೇ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಇದನ್ನೂ ಓದಿ: ಮತ್ತೆ ಶುರು ಸ್ಯಾಂಡಲ್​ವುಡ್ ಕ್ರಿಕೆಟ್ ಹಬ್ಬ, ಡಾ.ರಾಜ್ ಕಪ್ ಸೀಸನ್-6 ಹವಾ: ಯಾವಾಗ, ಎಲ್ಲಿ? ಇಲ್ಲಿದೆ ವಿವರ..

    ಬಿಸಿಯೂಟವನ್ನು ಶಿಕ್ಷಣ ಇಲಾಖೆಗೆ ನೀಡಬೇಕು. ಮೊದಲಿನಂತೆ ಬಿಸಿಯೂಟ ಯೋಜನೆಯನ್ನು ನಿರ್ವಹಣೆ ಮಾಡಬೇಕು. ಈ ಹಿಂದೆ ಬಜೆಟ್‌ನಲ್ಲಿ ಹೆಚ್ಚು ಮಾಡಿದ 1 ಸಾವಿರ ರೂ. ಗೌರವಧನವನ್ನು ಜನವರಿಯಿಂದ ಜಾರಿ ಮಾಡಬೇಕು. ಅಲ್ಲದೆ ಬಾಕಿ ಹೆಚ್ಚುವರಿ ಗೌರವಧನ ನೀಡಬೇಕೆಂದು ಒತ್ತಾಯಿಸಿದರು.
    ಸಮಿತಿಯ ಜಿಲ್ಲಾಧ್ಯಕ್ಷ ರೇಣುಕಮ್ಮ, ತಾಲೂಕು ಅಧ್ಯಕ್ಷೆ ವಿಶಾಲಾಕ್ಷಿ, ಕಾರ್ಯದರ್ಶಿ ಶರಣಮ್ಮ ಪಾಟೀಲ್, ಶರಣಮ್ಮ ಜಿ., ವಿರುಪಾಕ್ಷಮ್ಮ, ಮಲ್ಲಮ್ಮ ಗಿಣಿವಾರ, ಶ್ರೀದೇವಿ ಸುಕಾಲಪೇಟೆ, ಅಂಜಿನಮ್ಮ ಬೂದಿವಾಳ, ಹನುಮಮ್ಮ, ಪುಷ್ಪಾ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts