More

    ಹೃದಯಾಘಾತದಿಂದ ಕಾಡುಕೋಣ ಸಾವು

    ಮಂಗಳೂರು: ಮಂಗಳವಾರ ಮೃತಪಟ್ಟ ಕಾಡುಕೋಣದ ಮರಣೋತ್ತರ ಪರೀಕ್ಷಾ ವರದಿ ಲಭ್ಯವಾಗಿದ್ದು, ಅತಿ ಉದ್ವೇಗ, ಹೃದಯಾಘಾತದಿಂದ(ಶಾಕ್ ವಿದ್ ಕಾರ್ಡಿಯಾಕ್ ಫೈಲ್ಯೂರ್) ಮೃತಪಟ್ಟಿದೆ ಎಂದು ವೈದ್ಯರು ಉಲ್ಲೇಖಿಸಿದ್ದಾರೆ.

    ದಾರಿ ತಪ್ಪಿ ಮಂಗಳವಾರ ನಗರಕ್ಕೆ ಬಂದಿದ್ದ ಎರಡು ಕಾಡುಕೋಣಗಳ ಪೈಕಿ ಒಂದನ್ನು ಅರಣ್ಯ ಇಲಾಖೆ ಸೆರೆ ಹಿಡಿದು ಚಾರ್ಮಾಡಿ ಬಳಿ ಕಾಡಿಗೆ ಬಿಡುವ ಪ್ರಯತ್ನದಲ್ಲಿದ್ದಾಗ ಅದು ಮೃತಪಟ್ಟಿತ್ತು. ಬಳಿಕ ಅದನ್ನು ಚಾರ್ಮಾಡಿ ಅರಣ್ಯ ಇಲಾಖೆ ನರ್ಸರಿಯಲ್ಲಿ ಅಲ್ಲಿನ ಸರ್ಕಾರಿ ಪಶು ಆಸ್ಪತ್ರೆಯ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದರು. ಕಲ್ಮಂಜ ಗ್ರಾಮದ ನಿಡಿಗಲ್ ಅರಣ್ಯದಲ್ಲಿ ಕಾಡುಕೋಣದ ಅಂತಿಮ ಸಂಸ್ಕಾರ ನಡೆಸಲಾಗಿತ್ತು.
    ಮರಣೋತ್ತರ ಪರೀಕ್ಷಾ ವರದಿಯನ್ನು ವೈದ್ಯರು ಶುಕ್ರವಾರ ಬೆಳ್ತಂಗಡಿ ವಲಯ ಅರಣ್ಯ ಅಧಿಕಾರಿಗೆ ನೀಡಿದ್ದು, ಶನಿವಾರ ಮಂಗಳೂರು ಕಚೇರಿಗೆ ತಲುಪಲಿದೆ. ವೈದ್ಯರು ಕಾಡುಕೋಣ ಹೃದಯಾಘಾತದಿಂದ ಮೃತಪಟ್ಟಿದೆ ವರದಿಯಲ್ಲಿ ತಿಳಿಸಿದ್ದಾರೆ. ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕರಿಕಾಳನ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಮುಂದುವರಿದ ಕಾರ್ಯಾಚರಣೆ: ನಗರ ಪ್ರವೇಶಿಸಿದ್ದ ಇನ್ನೊಂದು ಕಾಡುಕೋಣವನ್ನು ಕಾಡಿಗೆ ಅಟ್ಟುವ ಅರಣ್ಯ ಇಲಾಖೆ ಕಾರ್ಯಾರಣೆ ಮೂರನೇ ದಿನವೂ ಮುಂದುವರಿದಿದೆ. ಜೋಕಟ್ಟೆ ಬಳಿಯ ಎನ್‌ಎಂಪಿಟಿಗೆ ಸೇರಿದ ಸುಮಾರು 150 ಎಕರೆ ಕಾಡು, ಕುರುಚಲು ಪ್ರದೇಶದಲ್ಲಿ ಕಾಡುಕೋಣ ಬಾಕಿಯಾಗಿದ್ದು, ಅಲ್ಲಿಂದ ಮುಂದಕ್ಕೆ ಕಳುಹಿಸಲು ಯತ್ನಿಸಲಾಗುತ್ತಿದೆ.

    50ರಷ್ಟು ಸಿಬ್ಬಂದಿ ವುೂರು ಶಿಫ್ಟ್‌ನಲ್ಲಿ ಕೋಣವನ್ನು ಮತ್ತೆ ನಗರಕ್ಕೆ ಬಾರದಂತೆ ಕಾವಲು ಕಾಯುತ್ತಾ ಕಾಡಿಗೆ ಕಳುಹಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಆ ಪ್ರದೇಶದಲ್ಲಿ ನೀರು ಹಾಗೂ ಹಸಿರು ಹುಲ್ಲು, ನೆರಳು ಎಲ್ಲವೂ ಇರುವುದರಿಂದ ಕೋಣ ಅಲ್ಲಿಂದ ಮುಂದಕ್ಕೆ ಹೋಗಲು ಮನಸ್ಸು ಮಾಡುತ್ತಿಲ್ಲ. ಕೋಣವನ್ನು ಹಿಡಿಯುವ ಬದಲು ಕಾಡಿಗೆ ಕಳುಹಿಸುವ ಉದ್ದೇಶ ಅರಣ್ಯ ಇಲಾಖೆ ಹೊಂದಿರುವುದರಿಂದ ಸಿಬ್ಬಂದಿ ಚಾಣಾಕ್ಷತನದಿಂದ ಕೆಲಸ ಮಾಡುತ್ತಿದ್ದಾರೆ. ಕೋಣವಿದ್ದ ಪ್ರದೇಶಕ್ಕೆ ಹೋಗಲು ಸಾಧ್ಯವಾಗದ ಕಾರಣ ಡ್ರೋನ್ ಕ್ಯಾಮರಾ ಬಳಸಿ ಚಲನವಲನದ ಮೇಲೆ ನಿಗಾ ಇಡಲಾಗುತ್ತಿದೆ ಎಂದು ವಲಯ ಅರಣ್ಯ ಅಧಿಕಾರಿ ಶ್ರೀಧರ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts