More

    ಲಾಕ್​ಡೌನ್​ನಿಂದ ಹೆಚ್ಚಿದ ಮದ್ಯ ಸೇವನೆ; ಬಿಂಜ್ ಡ್ರಿಂಕಿಂಗ್​ನಲ್ಲಿ ಏರಿಕೆ

    ನ್ಯೂಯಾರ್ಕ್​: ಕೋವಿಡ್​-19 ಸೋಂಕನ್ನು ನಿಯಂತ್ರಿಸುವ ಹಿನ್ನೆಲೆಯಲ್ಲಿ ಜಾರಿಗೊಳಿಸಲಾಗಿದ್ದ ಲಾಕ್​ಡೌನ್​ ಮತ್ತೊಂದೆಡೆ ಕುಡಿತವನ್ನು ಹೆಚ್ಚಿಸಿದ್ದು ಈಗ ಸಮೀಕ್ಷೆಯೊಂದರಲ್ಲಿ ಕಂಡುಬಂದಿದೆ. ಲಾಕ್​ಡೌನ್​ನಿಂದಾಗಿ ಬಿಂಜ್ ಡ್ರಿಂಕಿಂಗ್ ಹೆಚ್ಚಾಗಿದೆ ಎಂದು ಈ ಅಧ್ಯಯನ ತಿಳಿಸಿದೆ.

    ಈ ಅಧ್ಯಯನದ ಅಂಶಗಳು ಅಮೆರಿಕನ್​ ಜರ್ನಲ್​ ಆಫ್​ ಡ್ರಗ್​ ಆ್ಯಂಡ್​ ಆಲ್ಕೋಹಾಲ್​ ಅಬ್ಯೂಸ್​ನಲ್ಲಿ ಪ್ರಕಟವಾಗಿವೆ. ಕೋವಿಡ್​-19ನಿಂದಾಗಿ ಅಪಾಯಕಾರಿ ಮದ್ಯಸೇವನೆ ಹಾಗೂ ಜೀವನದಲ್ಲಿದ ಒತ್ತಡ ಹೆಚ್ಚಾಗಿವೆ ಎಂದು ಈ ಅಧ್ಯಯನ ತಿಳಿಸಿದೆ.

    ಅದರಲ್ಲೂ ಖಿನ್ನತೆ ಅಥವಾ ಬೇರೆ ಕಾಯಿಲೆ ಇದ್ದೂ ಅಪಾಯಕಾರಿ ಆಗಿ ಕುಡಿಯುತ್ತಿರುವವರ ಸಂಖ್ಯೆ ಸಾಮಾನ್ಯ ಕುಡುಕರಿಗಿಂತ ಹೆಚ್ಚಳಗೊಂಡಿದೆ ಎಂಬುದು ಈ ಅಧ್ಯಯನದಲ್ಲಿ ಉಲ್ಲೇಖಗೊಂಡಿದೆ. ಕೋವಿಡ್​-19 ಲಾಕ್​ಡೌನ್​​ನಿಂದಾಗಿ ದೀರ್ಘಕಾಲ ಮನೆಯಲ್ಲೇ ಇರುವುದು ಹಾಗೂ ಮಾನಸಿಕ ಒತ್ತಡದಿಂದಾಗಿ ಈ ಬಿಂಜ್ ಡ್ರಿಂಕಿಂಗ್ ಹೆಚ್ಚಾಗಿದೆ. ಮತ್ತೊಂದೆಡೆ ಮಕ್ಕಳೊಂದಿಗೆ ಇದ್ದವರು ಕುಡಿಯುವ ಪ್ರಮಾಣ ಕಡಿಮೆ ಆಗಿದೆ ಎಂದು ಆನ್​ಲೈನ್​ನಲ್ಲಿ ನಡೆಸಲಾಗಿದ್ದ ಈ ಸಮೀಕ್ಷೆ ಹೇಳಿದೆ. (ಏಜೆನ್ಸೀಸ್​)

    ಪತ್ನಿಯ ಮೇಲಿನ ಸಿಟ್ಟಿನಿಂದ 450 ಕಿ.ಮೀ ನಡೆದ ಪತಿರಾಯ ಪೊಲೀಸರಿಂದ ದಂಡ ಹಾಕಿಸಿಕೊಂಡ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts