ಬೆಳಗಾವಿ: ಬಿಮ್ಸ ನಿರ್ದೇಶಕರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ಆದರೆ, ಸುಳ್ಳು ಸೇವಾ ಪ್ರಮಾಣ ಪತ್ರ ಸಲ್ಲಿಸಿ ಬಡ್ತಿ ಪಡೆದುಕೊಂಡಿರುವವರ ವಿರುದ್ಧ, ಬಡ್ತಿ ನೀಡಿರುವವರ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ ದೂರಿದ್ದಾರೆ.
ಮಾಹಿತಿ ಹಕ್ಕು ಕಾಯ್ದೆ ಅಡಿ ಸರ್ಕಾರ ನೀಡಿರುವ ದಾಖಲೆಯಲ್ಲಿ ಬಿಮ್ಸ್ ನಿರ್ದೇಶಕರು ಮತ್ತು ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಆದರೆ, ಸರ್ಕಾರ ತನಿಖೆ ನಡೆಸದೇ ಕಣ್ಣುಮುಚ್ಚಿ ಕುಳಿತಿದೆ. ಬಿಮ್ಸ್ ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ ಅವರ ನೇಮಕಾತಿಯಲ್ಲಿ ಪ್ರಭಾವಿ ವ್ಯಕ್ತಿಗಳು ಕೆಲಸ ಮಾಡಿದ್ದಾರೆ ಎಂದು ಗಡಾದ ಆರೋಪಿಸಿದರು.
2010-11ನೇ ಸಾಲಿನಲ್ಲಿ ಬಿಮ್ಸ್‌ನಲ್ಲಿ ಸಹ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಆಹ್ವಾನಿಸಿಲ್ಲ. ಆದರೆ, ಅರ್ಜಿ ಕರೆಯದಿದ್ದರೂ ಡಾ.ವಿನಯ ದಾಸ್ತಿಕೊಪ್ಪ ಅವರನ್ನು ಕಾನೂನಿಗೆ ವಿರುದ್ಧವಾಗಿ ಪ್ರಾಧ್ಯಾಪಕರಾಗಿ ನೇಮಕಾತಿ ಮಾಡಿಕೊಳ್ಳಲಾಗಿದೆ. ದಾಸ್ತಿಕೊಪ್ಪ ಸೇವೆಗೆ ಅರ್ಹರಲ್ಲ ಎಂದು ಸಂದರ್ಶನ ಸಮಿತಿ ಸ್ಪಷ್ಟವಾಗಿ ಹೇಳಿದೆ.
ಜತೆಗೆ, ಯಾವುದೇ ನೌಕರ ಸೇವೆಗೆ ಸೇರಿದ 2 ವರ್ಷದಲ್ಲಿ ಸೇವಾ ಅವಧಿಯನ್ನು ಡಿಕ್ಲೆರೇಷನ್ ಮಾಡಿಕೊಳ್ಳಬೇಕು. ಆದರೆ, ವಿನಯ ದಾಸ್ತಿಕೊಪ್ಪ 10 ವರ್ಷದ ಬಳಿಕ ಡಿಕ್ಲೆರೇಷನ್ ಮಾಡಿಕೊಂಡಿರುವುದು ದಾಖಲೆಗಳಿಂದ ಬೆಳಕಿಗೆ ಬಂದಿದೆ ಎಂದು ಅವರು ತಿಳಿಸಿದ್ದಾರೆ.
ಬಿಮ್ಸನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಸತೀಶ ಪಾಟೀಲ 2010ರಲ್ಲಿ ನೇಮಕವಾಗಿದ್ದರು. ಈ ವೇಳೆ ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ಎಂದು ಪ್ರಮಾಣ ಪತ್ರ ನೀಡಿದ್ದರು. ಆದರೆ, ರಿಮ್ಸ್‌ನಲ್ಲಿ ಡಾ.ಸತೀಶ ಸೇವೆ ಸಲ್ಲಿಸಿಲ್ಲ. ಸರ್ಕಾರ ಸತೀಶ ಪಾಟೀಲ ವಜಾಗೊಳಿಸಿ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಮತ್ತು ಸರ್ಕಾರಕ್ಕೆ ಮರಳಿ ವೇತನ ಪಡೆಯುವಂತೆ 2019ರಲ್ಲಿಯೇ ಆದೇಸ ನೀಡಿತ್ತು. ಸಂಬಂಧಪಟ್ಟವರು ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಬಡ್ತಿ ಮಾಡುವಾಗ ಸಚಿವರ ಹಾಗೂ ಪ್ರಧಾನ ಕಾರ್ಯದರ್ಶಿ ಅವರ ಅನುಮೋದನೆ ಪಡೆಯಬೇಕಾಗುತ್ತದೆ. ಆದರೆ, ಡಾ.ದಾಸ್ತಿಕೊಪ್ಪ ಅವರಿಗೆ ನೀಡಲಾಗಿರುವ ಬಡ್ತಿಯಲ್ಲಿ ಸಹ ಕಾರ್ಯದರ್ಶಿಯಿಂದ ಅನುಮೋದನೆ ನೀಡಲಾಗಿದೆ. ಸರ್ಕಾರ ಕೂಡಲೇ ತನಿಖೆಗೆ ಒಳಪಡಿಸಿ ಕ್ರಮ ಜರುಗಿಸಬೇಕು ಎಂದು ಭೀಮಪ್ಪ ಗಡಾದ ಆಗ್ರಹಿಸಿದ್ದಾರೆ. ಆದರೆ, ವಿನಯ ದಾಸ್ತಿಕೊಪ್ಪ 10 ವರ್ಷದ ಬಳಿಕ ಡಿಕ್ಲೆರೇಷನ್ ಮಾಡಿಕೊಂಡಿರುವುದು ದಾಖಲೆಗಳಿಂದ ಬೆಳಕಿಗೆ ಬಂದಿದೆ ಎಂದು ಅವರು ತಿಳಿಸಿದ್ದಾರೆ.
ಬಿಮ್ಸನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಸತೀಶ ಪಾಟೀಲ 2010ರಲ್ಲಿ ನೇಮಕವಾಗಿದ್ದರು. ಈ ವೇಳೆ ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದೇನೆ ಎಂದು ಪ್ರಮಾಣ ಪತ್ರ ನೀಡಿದ್ದರು. ಆದರೆ, ರಿಮ್ಸ್‌ನಲ್ಲಿ ಡಾ.ಸತೀಶ ಸೇವೆ ಸಲ್ಲಿಸಿಲ್ಲ. ಸರ್ಕಾರ ಸತೀಶ ಪಾಟೀಲ ವಜಾಗೊಳಿಸಿ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಮತ್ತು ಸರ್ಕಾರಕ್ಕೆ ಮರಳಿ ವೇತನ ಪಡೆಯುವಂತೆ 2019ರಲ್ಲಿಯೇ ಆದೇಸ ನೀಡಿತ್ತು. ಸಂಬಂಧಪಟ್ಟವರು ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಬಡ್ತಿ ಮಾಡುವಾಗ ಸಚಿವರ ಹಾಗೂ ಪ್ರಧಾನ ಕಾರ್ಯದರ್ಶಿ ಅವರ ಅನುಮೋದನೆ ಪಡೆಯಬೇಕಾಗುತ್ತದೆ. ಆದರೆ, ಡಾ.ದಾಸ್ತಿಕೊಪ್ಪ ಅವರಿಗೆ ನೀಡಲಾಗಿರುವ ಬಡ್ತಿಯಲ್ಲಿ ಸಹ ಕಾರ್ಯದರ್ಶಿಯಿಂದ ಅನುಮೋದನೆ ನೀಡಲಾಗಿದೆ. ಸರ್ಕಾರ ಕೂಡಲೇ ತನಿಖೆಗೆ ಒಳಪಡಿಸಿ ಕ್ರಮ ಜರುಗಿಸಬೇಕು ಎಂದು ಭೀಮಪ್ಪ ಗಡಾದ ಆಗ್ರಹಿಸಿದ್ದಾರೆ.