More

    ವಿಶ್ವದ ಶ್ರೀಮಂತ ದಂಪತಿ ಡಿವೋರ್ಸ್​: 27 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯವಾಡಿದ ಬಿಲ್​ ಗೇಟ್ಸ್​!

    ವಾಷಿಂಗ್ಟನ್​: ಟೆಕ್​ ದೈತ್ಯ ಕಂಪನಿ ಮೈಕ್ರೋಸಾಫ್ಟ್​ ಸಂಸ್ಥಾಪಕ ಬಿಲ್​ ಗೇಟ್ಸ್​ ಮತ್ತು ಪತ್ನಿ ಮೆಲಿಂಡಾ ಗೇಟ್ಸ್​ ಡಿವೋರ್ಸ್​ ಪಡೆದುಕೊಂಡಿರುವುದಾಗಿ ಸೋಮವಾರ ಘೋಷಿಸಿದ್ದು, 27 ವರ್ಷಗಳ ಸುದೀರ್ಘ ದಾಂಪತ್ಯ ಜೀವನಕ್ಕೆ ಅಂತ್ಯವಾಡಿದ್ದಾರೆ.

    ಬಿಲ್​ ಗೇಟ್ಸ್​ ಮತ್ತು ಮೆಲಿಂಡಾ ವಿಶ್ವದ ಶ್ರೀಮಂತ ದಂಪತಿಗಳಲ್ಲಿ ಒಬ್ಬರಾಗಿದ್ದರು. ಇಬ್ಬರ ಆಸ್ತಿ ಮೌಲ್ಯ 130 ಬಿಲಿಯನ್​ ಡಾಲರ್​ ಎಂದು ಅಂದಾಜಿಸಲಾಗಿದೆ. ಗೇಟ್ಸ್​ ಪರೋಪಕಾರಿ ಗುಣವುಳ್ಳ ವ್ಯಕ್ತಿಯಾಗಿದ್ದು, ತಮ್ಮ ಭಾರಿ ಪ್ರಭಾವಶಾಲಿ ಅಡಿಪಾಯದ ಮೂಲಕ ವಿಶ್ವದಾದ್ಯಂತ ಶತಕೋಟಿ ಹಣವನ್ನು ದತ್ತಿ ಕಾರ್ಯಗಳಿಗೆ ನೀಡಿದ್ದಾರೆ.

    ಡಿವೋರ್ಸ್​ ವಿಚಾರವನ್ನು ತಮ್ಮ ಟ್ವಿಟರ್​ ಮೂಲಕ ಬಿಲ್​ ಗೇಟ್ಸ್​ ತಿಳಿಸಿದ್ದಾರೆ. ಜಾಗತಿಕವಾಗಿ ಆರೋಗ್ಯ, ಲಿಂಗ ಸಮಾನತೆ, ಶಿಕ್ಷಣ ಮತ್ತು ಇತರೆ ಉದ್ದೇಶಿತ ಕಾರ್ಯಕ್ರಮಗಳಿಗೆ ದೇಣಿಗೆ ನೀಡುವ ಬಿಲ್​ ಮತ್ತು ಮೆಲಿಂಡಾ ಗೇಟ್ಸ್​ ಫೌಂಡೇಶನ್​ ಜಂಟಿ ಕಾರ್ಯವನ್ನು ನಾವು ಮುಂದುವರಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

    ನಮ್ಮ ಸಂಬಂಧದ ಬಗ್ಗೆ ಹೆಚ್ಚಿನ ಚಿಂತನೆ ನಂತರ ನಾವು ನಮ್ಮ ಮದುವೆ ಬಂಧವನ್ನು ಕೊನೆಗೊಳಿಸುವ ನಿರ್ಧಾರವನ್ನು ಕೈಗೊಂಡಿದ್ದೇವೆ ಎಂದು ಅವರು ಬಿಲ್​ ಗೇಟ್ಸ್​ ಮತ್ತು ಮೆಲಿಂಡಾ, ತಮ್ಮ ಜಂಟಿ ಹೇಳಿಕೆಯ ಪ್ರತಿಯೊಂದನ್ನು ಅಧಿಕೃತ ಟ್ವಿಟರ್​ ಖಾತೆಗಳಲ್ಲಿ ಪೋಸ್ಟ್ ಮಾಡಿದ್ದಾರೆ.

    ಕಳೆದ 27 ವರ್ಷಗಳಲ್ಲಿ ಮೂವರು ಮಕ್ಕಳನ್ನು ಬೆಳೆಸಿದ್ದೇವೆ ಮತ್ತು ಜನರಿಗೆ ಆರೋಗ್ಯ ಮತ್ತು ಸುಧಾರಿತ ಜೀವನಕ್ಕೆ ನೆರವಾಗಲು ಜಾಗತಿಕವಾಗಿ ಕೆಲಸ ಮಾಡುವಂತಹ ಫೌಂಡೇಶನ್​ ಅನ್ನು ನಿರ್ಮಿಸಿದ್ದೇವೆ. ನಮ್ಮ ಡಿವೋರ್ಸ್​ ಹೊರತಾಗಿ ಈ ಜಂಟಿ ಕಾರ್ಯ ಹೀಗೆ ಮುಂದುವರಿಯಲಿದೆ. ನಾವು ಒಟ್ಟಿಗೆ ಕೆಲಸ ಮಾಡಲಿದ್ದೇವೆ. ಆದರೆ, ನಮ್ಮ ಜೀವನದ ಈ ಮುಂದಿನ ಹಂತದಲ್ಲಿ ನಾವು ದಂಪತಿಯಾಗಿ ಇರುವುದಿಲ್ಲ ಎಂದಿದ್ದಾರೆ.

    ಗೇಟ್ಸ್​ ದಂಪತಿ ಡಿವೋರ್ಸ್​ ಪಡೆದುಕೊಂಡಿರುವ ಬಗ್ಗೆ ಮಾತ್ರ ತಿಳಿಸಿದ್ದು, ಹೆಚ್ಚಿನ ಮಾಹಿತಿ ನೀಡಿಲ್ಲ. ಇಬ್ಬರ ನಡುವಿನ ಹಣ ಹಂಚಿಕೆ ಕುರಿತು ಯಾವುದೇ ಪ್ರಸ್ತಾಪವಿಲ್ಲ.

    ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಮತ್ತು ಅವರ ಪತ್ನಿ ಮ್ಯಾಕೆಂಜಿ ಡಿವೋರ್ಸ್​ ಪಡೆದ ಎರಡು ವರ್ಷಗಳ ನಂತರ ಗೇಟ್ಸ್​ ದಂಪತಿಯ ಈ ಪ್ರಕಟಣೆ ಬಂದಿದೆ. (ಏಜೆನ್ಸೀಸ್​)

    ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಹೋದರ ಕೋವಿಡ್​ಗೆ ಬಲಿ; ಕಿರಣ್​ ಜನ್ಯ ಇನ್ನಿಲ್ಲ…

    ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ‌ ಮತ್ತೊಂದು ಎಡವಟ್ಟು; ನಾಪತ್ತೆಯಾಗಿದ್ದ ಸೋಂಕಿತನ ಮೃತದೇಹ ಆಸ್ಪತ್ರೆ ಶವಾಗಾರದಲ್ಲೇ ಪತ್ತೆ!

    ಸೋಲಿನಿಂದ ಪಾಠ ಕಲಿಯೋಣ: ಮನೋಲ್ಲಾಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts