More

    ವಾಗ್ದಾನದಂತೆ ಸಿಎಂ ಮೀಸಲು ನೀಡಲಿ

    ಬೀಳಗಿ: ಕಳೆದ ಫೆಬ್ರವರಿ ತಿಂಗಳಿನಲ್ಲಿ ರಾಜನಹಳ್ಳಿಯಲ್ಲಿ ನಡೆದ ವಾಲ್ಮೀಕಿ ಜಾತ್ರೆ ವೇಳೆ ಮುಖ್ಯಮಂತ್ರಿ ಅವರು ವಾಗ್ದಾನ ನೀಡಿದಂತೆ ಪರಿಶಿಷ್ಟ ಪಂಗಡದ ಜನಾಂಗಕ್ಕೆ ಶೇ.7.5 ಮೀಸಲು ನೀಡದಿದ್ದರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ಎಂದು ವಾಲ್ಮೀಕಿ ಸಮಾಜದ ಮುಖಂಡ ಸುರೇಂದ್ರ ನಾಯಕ ಎಚ್ಚರಿಕೆ ನೀಡಿದರು.

    ಪರಿಶಿಷ್ಟ ಪಂಗಡದ ಜನಾಂಗಕ್ಕೆ ಮೀಸಲು ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿ ಪಟ್ಟಣದಲ್ಲಿ ಶನಿವಾರ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಭೀಮಪ್ಪ ಆಜೂರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಮಾತನಾಡಿದರು.

    ವೀರ ಸಿಂಧೂರ ಲಕ್ಷ್ಮಣ ಸಂಘದ ಮುಖಂಡ ಟಿ.ವೈ. ಜಾನಮಟ್ಟಿ ಮಾತನಾಡಿ, ಕರ್ನಾಟಕದಲ್ಲಿ ಶೇ.7.5 ಪ್ರಮಾಣದಲ್ಲಿ ರಾಜಕೀಯ ಮೀಸಲು ದೊರೆಯುತ್ತಿದೆ. ಆದರೆ ಉದ್ಯೋಗದಲ್ಲಿ ಕೇವಲ ಶೇ.3 ಮೀಸಲು ನೀಡಲಾಗುತ್ತಿದೆ. ಈ ಕುರಿತು ಸಲ್ಲಿಸಿದ ವಸ್ತುನಿಷ್ಠ ವರದಿಯನ್ನು ಸರ್ಕಾರ ಪರಿಗಣಿಸಿ ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಸ್ಪಷ್ಟ ನಿಲುವು ತಾಳಬೇಕು ಎಂದು ಒತ್ತಾಯಿಸಿದರು.

    ಜಿಪಂ ಸದಸ್ಯ ಮಗಿಯಪ್ಪ ದೇವನಾಳ, ಜಿಪಂ ಮಾಜಿ ಅಧ್ಯಕ್ಷ ಬೆನ್ನಪ್ಪ ಬೀಳಗಿ, ಬಸವರಾಜ ಗೋನಾಳ, ಶ್ರೀಶೈಲ ಅಂಟೀನ, ತೆಗ್ಗಿ ಗ್ರಾಪಂ ಮಾಜಿ ಅಧ್ಯಕ್ಷ ವಿಠ್ಠಲ ಬಿರಾದಾರ, ಸೋಮನಗೌಡ ಪಾಟೀಲ, ಬಸವರಾಜ ಕಲಕುಟಗಿ, ಎಂ.ವೈ. ವಡವಾಣಿ, ದುಂಡಪ್ಪ ದೇವನಾಳ, ಯಲ್ಲಪ್ಪ ಸಂಶಿ, ಸಿದ್ದಪ್ಪ ಕೂಗಟಿ, ಸದಾಶಿವ ಜುಂಜುರ, ಬಾಲು ಕಂಠಿ, ಹನುಮಂತ ಕಟ್ಟೆಪ್ಪನ್ನವರ ಅನೇಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts