More

    ಮಹಿಳಾ ಪೇದೆ ಮೇಲೆ ಹಲ್ಲೆ ನಡೆಸಿದ ಬೈಕ್ ಸವಾರರು- ಮೂವರನ್ನು ಬಂಧಿಸಿದ ಹುಳಿಮಾವು ಪೊಲೀಸರು

    ಬೆಂಗಳೂರು: ಲಾಕ್​ಡೌನ್ ಬಂದೋಬಸ್ತ್​ಗೆ ನಿಯೋಜನೆಗೊಂಡಿದ್ದ ಮಹಿಳಾ ಪೊಲೀಸ್ ಪೇದೆ ಮೇಲೆ ಮೂವರು ಬೈಕ್ ಸವಾರರು ಹಲ್ಲೆ ನಡೆಸಿದ್ದಾರೆ. ಹುಳಿಮಾವು ಠಾಣೆಯ ಪೇದೆ ಹೇಮಾ ಹಲ್ಲೆಗೆ ಒಳಗಾದವರು.

    ರವಿ (24), ರೋಹಿತ್ (25) ಮತ್ತು ಪ್ರವೀಣ್ (24) ಎಂಬುವವರು ಬಂಧಿತ ಆರೋಪಿಗಳು. ಇವರು ಹೇಮಾ ಅವರನ್ನು ಬೈಕ್​ನಲ್ಲಿದ್ದುಕೊಂಡೇ ಎಳೆದುಕೊಂಡು ಹೋಗಿ ತಳ್ಳಿದ್ದಾರೆ. ಪರಿಣಾಮ ಕಣ್ಣಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

    ಏ.1ರ ಸಂಜೆ 6 ಗಂಟೆಯಲ್ಲಿ ದೊಡ್ಡಕಮ್ಮನಹಳ್ಳಿಯ ಜುಂಜಪ್ಪ ಸರ್ಕಲ್ ಬಳಿ ರಾಜೇಶ್ವರಿ, ಹೇಮಾ ಮತ್ತು ಚಿಕ್ಕಪ್ಪ ಅವರನ್ನು ಬಂದೋಬಸ್ತ್​ಗೆ ನಿಯೋಜಿಸಲಾಗಿತ್ತು. ಅನವಶ್ಯಕವಾಗಿ ಸಂಚರಿಸುವವರ ತಪಾಸಣೆ ಕೈಗೊಂಡಿದ್ದರು. ಇದೇ ವೇಳೆ ಬೈಕ್ ಮೇಲೆ ಹೋಗುತ್ತಿದ್ದ ಮೂವರನ್ನು ತಡೆದು ತಪಾಸಣೆ ನಡೆಸಿದ್ದಾರೆ. ಪಾಸ್ ಇಲ್ಲದೆ ಓಡಾಡುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಕರ್ತವ್ಯನಿರತ ಸಿಬ್ಬಂದಿ ಜತೆ ಗಲಾಟೆ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಕರೊನಾ ಎಫೆಕ್ಟ್​- ತ್ಯಾಜ್ಯ ಸಂಗ್ರಹಣೆಗೆ ಪ್ರತ್ಯೇಕ ಏಜೆನ್ಸಿ 8 ವಲಯಕ್ಕೆ 4 ಏಜೆನ್ಸಿ ನೇಮಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts