More

    ಬೈಕ್, ಕ್ಯಾಮರಾ ಕಳ್ಳತನ ಆರೋಪಿ ಬಂಧನ

    ರಾಣೆಬೆನ್ನೂರ: ರಸ್ತೆ ಬದಿ ನಿಲ್ಲಿಸಿದ್ದ ಎರಡು ಬೈಕ್ ಹಾಗೂ ಕ್ಯಾಮರಾಗಳನ್ನು ದೋಚಿಕೊಂಡು ಹೋಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ತಾಲೂಕಿನ ಕುಮಾರಪಟ್ಟಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

    ಬ್ಯಾಡಗಿ ತಾಲೂಕಿನ ಬೆಳಕೇರಿ ಗ್ರಾಮದ ನವೀನ ಅಜ್ಜಪ್ಪ ಹಾನಗಲ್ಲ (25) ಬಂಧಿತ ಆರೋಪಿ. ಈತನಿಂದ 2.90 ಲಕ್ಷ ರೂ. ಮೌಲ್ಯದ ಎರಡು ಬೈಕ್ ಹಾಗೂ ಎರಡು ಕ್ಯಾಮರಾ ವಶಪಡಿಸಿಕೊಳ್ಳಲಾಗಿದೆ.

    ಈತ ತಾಲೂಕಿನ ಕರೂರ ಕ್ರಾಸ್ ಬಳಿ ನಿಲ್ಲಿಸಿದ್ದ ಬೈಕ್ ಹಾಗೂ ಅದರಲ್ಲಿದ್ದ ಕ್ಯಾಮರಾಗಳನ್ನು ದೋಚಿಕೊಂಡು ಪರಾರಿಯಾಗಿದ್ದ. ಈ ಕುರಿತು ಎಸ್ಪಿ ಹನುಮಂತರಾಯ ಮಾರ್ಗದರ್ಶನದಲ್ಲಿ ಕಾಯಾಚರಣೆ ನಡೆಸಿದ ಕುಮಾರಪಟ್ಟಣ ಠಾಣೆ ಪೊಲೀಸರು ಆರೋಪಿಯನ್ನು ವಸ್ತುಗಳ ಸಮೇತ ಬಂಧಿಸಿದ್ದಾರೆ. ಈ ಕುರಿತು ಕುಮಾರಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts