ಕಂದಕಕ್ಕೆ ಬೈಕ್​ ಬಿದ್ದು ಸ್ಥಳದಲ್ಲೇ ಮೃತಪಟ್ಟ ಸವಾರ; 20 ಗಂಟೆಗಳ ಬಳಿಕ ಗೊತ್ತಾಯ್ತು ವಿಷಯ!

Accident Bike
Published on

ಚಿಕ್ಕಮಗಳೂರು: ಲಾಕ್​ಡೌನ್​ ಸಂದರ್ಭ ಬೈಕ್​ನಲ್ಲಿ ಹೊರಗೆ ಬಂದಿದ್ದ ವ್ಯಕ್ತಿಯೊಬ್ಬರು ಕಂದಕಕ್ಕೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ದುರಂತವೆಂದರೆ ಅಪಘಾತವಾಗಿ ವ್ಯಕ್ತಿ ಮೃತಪಟ್ಟು ಸುಮಾರು 20 ಗಂಟೆಗಳ ಬಳಿಕ ವಿಷಯ ಬೆಳಕಿಗೆ ಬಂದಿದೆ. ಚಿಕ್ಕಮಗಳೂರು ಜಿಲ್ಲೆ ಸಂಪ್ಲಿ ಗ್ರಾಮದ ರಂಜಿತ್ (33) ಮೃತಪಟ್ಟ ಬೈಕ್​ ಸವಾರ.

ಚಿಕ್ಕಮಗಳೂರು ಜಿಲ್ಲೆ ಬಾಳೂರು ಪೊಲೀಸ್​ ಠಾಣೆ ವ್ಯಾಪ್ತಿಯ ಸುಂಕಸಾಲೆ ಗ್ರಾಮದ ಸಮೀಪ ಈ ಅಪಘಾತ ಸಂಭವಿಸಿದೆ. ರಂಜಿತ್ ಬೈಕ್ ಸಮೇತ 6 ಅಡಿ ಕಂದಕಕ್ಕೆ ಬಿದ್ದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುಮಾರು 20 ಗಂಟೆಗಳ ಹಿಂದೆ ಅಂದರೆ ಭಾನುವಾರ ರಾತ್ರಿ ಈ ಅಪಘಾತ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಲಾಕ್​ಡೌನ್​ ಕಾರಣಕ್ಕೆ ವಾಹನ ಸಂಚಾರ ಇರದ್ದರಿಂದ ಈ ಅಪಘಾತದ ಬಗ್ಗೆ ತಕ್ಷಣ ಯಾರಿಗೂ ಗೊತ್ತಾಗಿರಲಿಲ್ಲ. ಇಂದು ಸಂಜೆ ಸ್ಥಳೀಯರಿಂದ ಈ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಅವರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net