More

    ಬಿಗ್​​​ಬಾಸ್​​​ ಮನೆಯಲ್ಲಿ ಡ್ರೋನ್​ಗೆ ಸಂಗೀತಾ ಪ್ರಪೋಸ್​​​; ನೀವು ನನಗೆ ಲವರ್ ಎಂದ ಸಂಗೀತಾ…!

    ಬಿಗ್‌ಬಾಸ್‌ ಮನೆಯೊಳಗೆ ಡ್ರೋನ್‌ ಪ್ರತಾಪನ್ನು ಪ್ರೀತಿಸುವ ಹುಡುಗಿ ಬಗ್ಗೆ ಮಾತುಕತೆ ನಡೆಯುತ್ತಿದ್ದು, ನೀತು, ನಮ್ರತಾ ಹಾಗು ನಟಿ ಸಂಗೀತಾ ಶೃಂಗೇರಿ ಡ್ರೋನ್​​ ಕಾಲೆಳೆಯುತ್ತಿದ್ದರು. ಮನೆಯ ಮೂವರು ಹುಡುಗಿಯರು ಕಾಲೆಳೆಯುತ್ತಿದ್ದಂತೆಯೇ ಡ್ರೋನ್​ ಇದಕ್ಕೆ ಪ್ರತಿಕ್ರಯಿಸಿದ್ದಾರೆ. ಡ್ರೋನ್ ಪ್ರತಾಪ್ ದಯವಿಟ್ಟು ಬಿಟ್‌ಬಿಡಮ್ಮ ನನಗೆ ತುಂಬಾ ಗೋಲ್ಸ್‌ ಇದೆ ಲೈಫ್‌ನಲ್ಲಿ ಅಂತೀನಿ ಅಂತ ಹೇಳಿದಕ್ಕೆ, ಸಂಗೀತಾ ಅಪ್ಪನನ್ನ ಒಪ್ಪಿಸ್ತೀನಿ. ಆದರೂ ಡ್ರೋನ್ ಪ್ರತಾಪ್ ಒಪ್ಪದೆ, ನನಗೆ ಮುಂದೆ ಕೆರಿಯರ್‌ ಇದೆ. ನಮ್ಮಪ್ಪ ನೋಡಿದ ಹುಡುಗಿಯನ್ನ ಮದುವೆ ಆಗಬೇಕು. ನನ್ನನ್ನ ಬಿಟ್‌ಬಿಡಮ್ಮ ಹೇಳಿದರು. ಆಗ ಸಂಗೀತಾ ಈಗ ನಾನೇ ಆ ಹುಡುಗಿ.. ಅಪ್ಪನನ್ನ ಒಪ್ಪಿಸ್ತೀನಿ ಅಂತ ಮತ್ತೆ ಡ್ರೋನ್​​​​ಗೆ ಪ್ರತ್ಯುತ್ತರ ಕೊಟ್ಟಿದ್ದಾರೆ.


    ಡ್ರೋನ್ ಪ್ರತಾಪ್ ನಗು ಮುಖದಿಂದಲೇ ನಿಮಗೆ ನಾನು ಇಷ್ಟ ಇಲ್ವಾ? ಅಂತ ಕೇಳಿದ ಸಂಗೀತಾ ಶೃಂಗೇರಿಗೆ ಇಲ್ಲ ಎಂದು ಉತ್ತರಿಸಿದ್ದಾರೆ.
    ನಾನು ಫನ್ನಿ ಆಗಿ ಕಾಣ್ತಿದ್ಧೀನಾ? ನಾನು ನಿಮಗೆ ಚೆನ್ನಾಗಿ ಕಾಣಿಸ್ತಿಲ್ವಾ? ಅಂತ ಪ್ರಶ್ನಿಸಿದಕ್ಕೆ ಡ್ರೋನ್ ಚೆನ್ನಾಗಿ ಕಾಣಿಸುತ್ತಿದ್ದೀರಾ. ಅಕ್ಕನ ತರಹ ಕಾಣ್ತಿದ್ದೀರಾ.. ಉತ್ತರಸಿದ್ದಾರೆ.


    ನನಗೆ ನಿಮ್ಮ ಮೇಲೆ ತುಂಬಾ ಪ್ರೀತಿ ಇದೆ. ನಿಮ್ಮನ್ನ ನೋಡಿದಾಗಿನಿಂದ ನನಗೆ ಕ್ರಶ್ ಆಗ್ಬಿಟ್ಟಿದೆ ಎಂದಿದಕ್ಕೆ ಡ್ರೋನ್ ಪ್ರತಾಪ್ ನನ್ನ ಮೇಲಾ? ಅಂತ ಆಶ್ಚರ್ಯದಿಂದ ಕೇಳಿದರು. ಅದಕ್ಕೆ ಸಂಗೀತಾ ಹೂ ಎಂದಿರೋದು ಸದ್ಯ ಸೋಷಿಯಲ್​​ ಮೀಡಿಯಾದಲ್ಲೂ ಸಾಕಷ್ಟು ವೈರಲ್​ ಆಗಿದೆ.


    ಡ್ರೋನ್ ನಾನು ನಿಮ್ಮನ್ನ ಎಲ್ಲೂ ಕರ್ಕೊಂಡ್ ಹೋಗಲ್ಲ. ನನ್ನದು ಬೋರಿಂಗ್ ಲೈಫ್. ಅದಕ್ಕೆ ಸಂಗೀತಾ ನಾನು ಕರ್ಕೊಂಡ್ ಹೋಗ್ತೀನಿ. ನಾನೇ ನಿಮಗೆ ಎಂಟರ್‌ಟೇನ್ಮೆಂಟ್ ಮಾಡ್ತೀನಿ ಎಂದಿದ್ದಾರೆ. ಈ ವೇಳೆ ಪ್ರತಾಪ್ ವರ್ಷಗಳ ಕಾಲ ನಾನು ಹಾಗೇ ಇರೋದು ಎಂದಿದಕ್ಕೆ ಸಂಗೀತಾ ಬದುಕಿರೋವರೆಗೂ ಜೊತೆಗೆ ಇರ್ತೀನಿ. ಅದಕ್ಕೆ ಡ್ರೋನ್ ಸಿನಿಮಾಗೆ ಹೋಗಲ್ಲ, ರೆಸ್ಟೋರೆಂಟ್‌ಗೆ ಹೋಗಲ್ಲ, ಪಾರ್ಕ್‌ಗೆ ಹೋಗಲ್ಲ ಎಂದಿದಕ್ಕೆ ಸಂಗೀತಾ ಏನೂ ಬೇಡ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts