ಬೆಂಗಳೂರು: ಬಿಗ್ಬಾಸ್ ಸೀಸನ್ 8ರ ಫಿನಾಲೆಗೆ ಇನ್ನು ಕೆಲವೇ ದಿನಗಳು ಬಾಕಿಯುಳಿದಿವೆ. ಮನೆಯಲ್ಲಿ ಎಂಟು ಮಂದಿ ಇದ್ದು ಅದರಲ್ಲಿ ಫಿನಾಲೆ ಹಂತಕ್ಕೆ ಕೇವಲ ಐದು ಮಂದಿ ಮಾತ್ರ ತಲುಪಲಿದ್ದಾರೆ. ಆ ಹಿನ್ನೆಲೆಯಲ್ಲಿ ಈ ವಾರ ಡಬಲ್ ಎಲಿಮಿನೇಷನ್ ಆಗಲಿದ್ದು, ಇಂದೇ ಒಬ್ಬರು ಸ್ಪರ್ಧಿಯನ್ನು ಮನೆಯಿಂದ ಹೊರಗೆ ಕರೆಯಲಾಗಿದೆ.
ಹೌದು. ಬಿಗ್ಬಾಸ್ನ ಶನಿವಾರದ ಸಂಚಿಕೆಯಲ್ಲಿ ಒಬ್ಬರು ಮನೆಯಿಂದ ಹೊರಗೆ ಬರಲಿದ್ದಾರೆ. ಮನೆಯಲ್ಲಿ ಅತ್ಯಂತ ಅನ್ಯೋನ್ಯವಾಗಿ ಎಲ್ಲರೊಂದಿಗೂ ಸ್ನೇಹ ಬೆಳೆಸಿಕೊಂಡಿದ್ದ ವ್ಯಕ್ತಿಯೇ ಈ ವಾರ ಹೊರ ಬರಲಿದ್ದಾರೆ. ಇರುವಷ್ಟು ಕಾಲ ನಗುತ್ತಿರಬೇಕು ಎಂದು ಎಲ್ಲರ ಮನಸ್ಸನ್ನು ಗೆದ್ದಿದ್ದ ವ್ಯಕ್ತಿಯನ್ನೇ ಕಿಚ್ಚ ಹೊರಗೆ ಕರೆಯಲಿದ್ದಾರೆ.
ಮನೆಯಲ್ಲಿ ಮಗುವಿನ ಮುಗ್ಧತೆಯೊಂದಿಗೆ ಕನ್ನಡಿಗರ ಮನಸ್ಸು ಕದ್ದಿದ್ದ ನಟಿ ಶುಭಾ ಪೂಂಜಾ ಇಂದು ಮನೆಯಿಂದ ಹೊರಗೆ ಬರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸದಾ ಮಾತನಾಡಿಕೊಂಡು, ಅವರಿವರ ಕಾಲೆಳೆದುಕೊಂಡಿರುತ್ತಿದ್ದ ಶುಭಾ ಅವರನ್ನು ಕಿಚ್ಚ ವೇದಿಕೆಗೆ ಕರೆದು, ಎಲಿಮಿನೇಟ್ ಮಾಡಲಿದ್ದಾರೆ.
ಶುಭಾ ಪೂಂಜಾ ಮನೆಗೆ ಬಂದಾಗಿನಿಂದಲೂ ಎಲ್ಲರೊಂದಿಗೆ ಸ್ನೇಹ ಭಾವ ಬೆಳೆಸಿಕೊಂಡಿದ್ದರು. ವಿಶೇಷವಾಗಿ ನಿಧಿ ಸುಬ್ಬಯ್ಯಾ ಜತೆ ಫ್ರೆಂಡ್ ಆಗಿದ್ದ ಆಕೆ ನಿಧಿ ಔಟ್ ಆದ ಮೇಲೆ ಮಂಜು ಪಾವಗಡ ಹಾಗೂ ದಿವ್ಯಾ ಉರುಡುಗ ಜತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಮನೆಯ ಕೆಲಸಗಳಲ್ಲಿ ಹೆಚ್ಚಾಗಿ ಭಾಗವಹಿಸುತ್ತಿರಲಿಲ್ಲವಾದರೂ, ಅವರ ಮಾತು, ಮುಗ್ಧತೆಯಿಂದಲೇ ಮನೆಯ ಮಂದಿ ಅವರನ್ನು ಇಷ್ಟಪಡುವಂತಾಗಿತ್ತು.
ಇಂದು ಮಾತ್ರವಲ್ಲದೆ ನಾಳೆಯೂ ಬಿಗ್ಬಾಸ್ ಮನೆಯಲ್ಲಿ ಒಂದು ಎಲಿಮಿನೇಶನ್ ಆಗಲಿದೆ. ದಿವ್ಯಾ ಉರುಡುಗ ಹೊರೆತುಪಡಿಸಿ ಬೇರೆಲ್ಲರೂ ನಾಮಿನೇಟ್ ಆಗಿದ್ದು, ಯಾರು ಇಂದು ಸೇಫ್ ಆಗುತ್ತಾರೆ, ಯಾರು ನಾಳೆ ಎಲಿಮಿನೇಟ್ ಆಗುತ್ತಾರೆ ಎನ್ನುವುದನ್ನು ಕಾದು ನೋಡಬೇಕು. (ಏಜೆನ್ಸಿಸ್)
ರಸ್ತೆ ಮಧ್ಯೆಯೇ ದೊಡ್ಡ ಹೊಂಡ! ಕೇಜ್ರಿವಾಲ್ ನಾಡಿನ ಅವಸ್ಥೆ ಬಗ್ಗೆ ಟೀಕಿಸಿದ ಬಿಜೆಪಿ
ಆನ್ಲೈನ್ ಗೇಮ್ನಲ್ಲಿ 40 ಸಾವಿರ ಕಳೆದುಕೊಂಡ ಬಾಲಕ! ಅಮ್ಮ ಬೈದಿದ್ದಕ್ಕೆ ಮನನೊಂದು ಆತ್ಮಹತ್ಯೆ