More

    ಮಲಗಿದ್ದಾಗ ಮನೆಗೆಲಸದವನಿಂದ ಹೇಯ ಕೃತ್ಯಕ್ಕೆ ಯತ್ನ: ಭಯಾನಕ ಸತ್ಯ ಬಿಚ್ಚಿಟ್ಟ ಬಿಗ್​ಬಾಸ್​ ಸ್ಪರ್ಧಿ

    ಮುಂಬೈ: ಬಾಲಿವುಡ್​ ಕಿರುತೆರೆಯ ಯಶಸ್ವಿ ರಿಯಾಲಿಟಿ ಶೋ ಬಿಗ್​ಬಾಸ್​ 13ನೇ ಆವೃತ್ತಿಯಲ್ಲಿ ಭಾಗವಹಿಸಿರುವ ಸ್ಪರ್ಧಿ ಆರತಿ ಸಿಂಗ್ ತಮ್ಮ ಬಾಲ್ಯದ ಅವಧಿಯ ಕರಾಳ ಘಟನೆಯೊಂದನ್ನು ವಿವರಿಸಿದ್ದಾರೆ. ಆರತಿ ಸಿಂಗ್​ಗೆ 13 ವರ್ಷ ವಯಸ್ಸಾಗಿದ್ದಾಗ ಆಕೆಯ ಮನೆಯಲ್ಲಿಯೇ ಅತ್ಯಾಚಾರಕ್ಕೆ ಯತ್ನ ನಡೆದಿತ್ತು ಎಂಬ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಈ ಘಟನೆಯನ್ನು ಮೆಲುಕು ಹಾಕುವುದಕ್ಕೂ ಒಂದು ಕಾರಣವಿದೆ.

    ಹೌದು, ನಿನ್ನೆ ಬಿಗ್​ಬಾಸ್​ ಶೋಗೆ ದೀಪಿಕಾ ಪಡುಕೋಣೆ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ‘ಚಪಾಕ್​’ ಚಿತ್ರತಂಡದ ಪ್ರಚಾರಕ್ಕೆ ಆಗಮಿಸಿತ್ತು. ಆ್ಯಸಿಡ್​ ದಾಳಿ ಸಂತ್ರಸ್ತೆ ಲಕ್ಷ್ಮೀ ಅಗರ್​ವಾಲ್​ ಜೀವನಾಧಾರಿತ ಚಿತ್ರವಾಗಿದ್ದು, ಬಿಗ್​ಬಾಸ್​ ಹೌಸ್​ನಲ್ಲಿ ಲಕ್ಷ್ಮೀ ಅಗರ್​ವಾಲ್​ ಕೂಡ ಕಾಣಿಸಿಕೊಂಡರು. ಈ ವೇಳೆ ತಮ್ಮ ಜೀವನದಲ್ಲಿ ಎದುರಿಸಿದಂತಹ ಭಯಾನಕ ಘಟನೆಗಳನ್ನು ಹೇಳಿಕೊಳ್ಳುವಂತೆ ಸ್ಪರ್ಧಿಗಳಿಗೆ ಬಿಗ್​ಬಾಸ್​ ಆದೇಶಿಸಿದ್ದರು. ಅದರಂತೆ ಮೊದಲಿಗೆ ಲಕ್ಷ್ಮೀ ಅಗರ್​ವಾಲ್​ ತಮ್ಮ ಜೀವನದ ಕಹಿ ಘಟನೆಯನ್ನು ವಿವರಿಸಿದರು.

    ಬಳಿಕ ಆರತಿ ಸಿಂಗ್​ ಮಾತನಾಡಿ ನಾವು ಲಖನೌದಲ್ಲಿ ವಾಸವಿದ್ದೆವು. ನಮ್ಮ ಮನೆಯಲ್ಲಿ ಮಧ್ಯಾಹ್ನ 3 ಗಂಟೆಗೆ ಒಮ್ಮೆ ಮಲಗುವುದು ಅಭ್ಯಾಸವಾಗಿತ್ತು. ಒಮ್ಮೆ ನಾನು ಮನೆಯಲ್ಲಿ ಒಬ್ಬಳೇ ಇದ್ದೆ. ನಾನು ಮಲಗಿರುವಾಗ ಮನೆಯ ಕೆಲಸದವನು ಅತ್ಯಾಚಾರ ಮಾಡಲು ಯತ್ನಿಸಿದ. ಆ ವೇಳೆ ನಾನು ಕಣ್ಣೀರು ಹಾಕಿದೆ, ಕೂಗಾಡಿದೆ ಮತ್ತು ಆತನ ಬಟ್ಟೆಗಳನ್ನು ಹರಿದುಹಾಕಿದೆ. ಕೂಗಾಡುತ್ತಾ ಹೇಗೋ ಎರಡನೇ ಮಹಡಿಯಿಂದ ಕೆಳಗೆ ಜಿಗಿದು ಬಚಾವ್​ ಆದೆ. ಅಂದು ನನಗೆ ನನ್ನ ಸ್ವಂತ ಶಕ್ತಿ ಬಗ್ಗೆ ಅರಿವಾಯಿತು. ಇಂದಿಗೂ ಕೂಡ ನನ್ನನ್ನು ನಾನು ದೇವರ ಮಗಳು ಎಂದು ಕರೆದುಕೊಳ್ಳುತ್ತೇನೆ ಎಂದು ವಿವರಿಸಿದರು.

    ಘಟನೆ ನಡೆದ ಬಳಿಕ ವರ್ಷಪೂರ್ತಿ ಅದೇ ಭಯದಲ್ಲಿದ್ದೆ. ಅದರಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದೆ. ನನ್ನ ತಾಯಿ ಮತ್ತು ಸಹೋದರನ ಸಹಾಯದಿಂದ ಮೊದಲಿನ ಸ್ಥಿತಿಗೆ ಮರಳಿದೆ. ಕಳೆದ 7-8 ವರ್ಷದಿಂದ ನಾನು ನಾರ್ಮಲ್​ ಆಗಿದ್ದೇನೆ ಎಂದು ನನಗನಿಸುತ್ತಿದೆ ಎಂದರು. ಹೀಗೆ ಅನೇಕ ಸ್ಪರ್ಧಿಗಳು ತಮಗಾದ ಕಹಿ ಅನುಭವವನ್ನು ಹೇಳಿಕೊಂಡರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts