More

    ಚಡ್ಡಿ ಚಿಕ್ಕದಾಗಿ ಹೊಲಿದಿದ್ದಕ್ಕೆ ಠಾಣೆ ಮೆಟ್ಟಿಲೇರಿದ; ಪೊಲೀಸರಿಂದಲೂ ಬಗೆಹರಿಯಲಿಲ್ಲ ಸಮಸ್ಯೆ..!

    ಭೋಪಾಲ್​: ಎರಡು ಚಡ್ಡಿಗೆ ಎರಡು ಮೀಟರ್​ ಬಟ್ಟೆ ಸಾಕಾಗಲ್ವ…! ನೀನ್​ ಕೊಟ್ಟಿರೋ ಬಟ್ಟೇಲಿ ಅಷ್ಟೇ ಉದ್ದ ಹೊಲಿಯೋಕಾಗಿದ್ದು..!
    ಇದು ಮಧ್ಯಪ್ರದೇಶದ ರಾಜಧಾನಿ ಭೋಪಾಲ್​ನ ಭೀಮ್​ನಗರದ ಟೇಲರ್​ ಹಾಗೂ ಗ್ರಾಹಕನ ನಡುವಿನ ವಾಗ್ವಾದ. ಆದರೆ, ಇದು ಇಷ್ಟಕ್ಕೆ ಮುಗಿಯಲಿಲ್ಲ.

    ಸಿಧ್​ ಜಿಲ್ಲೆಯವನಾದ ಕೃಷ್ಣ ಕುಮಾ ದುಬೆ ಕಳೆದ ಅಕ್ಟೋಬರ್​ನಲ್ಲಿ ಕೆಲಸ ಅರಸಿಕೊಂಡು ಭೋಪಾಲ್​ಗೆ ಬಂದಿದ್ದ. ಸೆಕ್ಯುರಿಟಿ ಕೆಲಸ ಮಾಡಿಕೊಂಡು ಭೀಮ್​ನಗರದಲ್ಲಿ ನೆಲೆಸಿದ್ದ. ಆದರೆ, ಕೋವಿಡ್​ ಕಾರಣದಿಂದಾಗಿ ಕಳೆದೆರಡು ತಿಂಗಳಿನಿಂದ ಕೆಲಸ ಕಳೆದುಕೊಂಡಿದ್ದ.
    ನನ್ನ ಸ್ನೇಹಿತನ ಬಳಿ ಖರ್ಚಿಗೆಂದು 1,000 ರೂ. ಸಾಲ ಪಡೆದಿದ್ದೆ. ಅದರಲ್ಲೇ ಎರಡು ಮೀಟರ್​ ಬಟ್ಟೆ ಖರೀದಿಸಿ ಚಡ್ಡಿ ಹೊಲಿಯೋಕೆ ಕೊಟ್ಟಿದ್ದೆ. ಇದಕ್ಕಾಗಿ ಟೇಲರ್​ 190 ರೂ. ಪಡೆದಿದ್ದ. ಆತ ಹೊಲಿದು ಕೊಟ್ಟ ಚಡ್ಡಿ ಧರಿಸಿದಾಗ ತುಂಬಾ ಚಿಕ್ಕದಾಗಿರುವುದು ಗೊತ್ತಾಯಿತು. ಇದನ್ನು ಪ್ರಶ್ನಿಸಿದ್ದಕ್ಕೆ ನೀನು ಕೊಟ್ಟ ಬಟ್ಟೆಯಲ್ಲಿ ಅಷ್ಟೇ ಉದ್ದ ಹೊಲಿಯೋಕಾಗಿದ್ದು ಎಂದು ಹೇಳುತ್ತಿದ್ದಾನೆ ಎನ್ನುವುದು ದುಬೆ ದೂರು.

    ಇದನ್ನೂ ಓದಿ; ನದಿ ನೀರಲ್ಲಿ ಬರಿಗೈಯಿಂದಲೇ ಗುದ್ದಿ ಮೊಸಳೆ ಹಿಮ್ಮೆಟ್ಟಿಸಿದ ಧೀರ….! 

    ಬಟ್ಟೆ ಅಂಗಡಿಯವರಲ್ಲಿ ಕೇಳಿದರೆ, ಎರಡು ಮೀಟರ್​ ಬಟ್ಟೆ ಕೊಟ್ಟಿದ್ದೆ ಎಂದು ಅವರು ಹೇಳುತ್ತಾರೆ. ಹಾಗಿದ್ದರೂ ಇಷ್ಟು ಚಿಕ್ಕ ಚಡ್ಡಿ ಹೊಲಿದಿದ್ದಾನೆ ಎನ್ನುವುದು ದುಬೆ ವಾದ. ಹೀಗಾಗಿ ಆತ ನೇರವಾಗಿ ಹಬೀಬ್​ಗಂಜ್​ ಪೊಲೀಸರಿಗೆ ದೂರು ಕೊಟ್ಟಿದ್ದಾನೆ.

    ಆದರೆ, ಇದು ನಮ್ಮ ವ್ಯಾಪ್ತಿಗೆ ಬರಲ್ಲ, ಕೋರ್ಟ್​ನಲ್ಲಿ ಬಗೆಹರಿಸಿಕೋ ಎಂದು ಪೊಲೀಸರು ಆತನನ್ನು ಸಾಗಹಾಕಿದ್ದಾರೆ. ಒಟ್ಟಿನಲ್ಲಿ ಚಡ್ಡಿ ವ್ಯಾಜ್ಯ ಕೋರ್ಟ್​ ಮೆಟ್ಟಿಲು ಹತ್ತುವಂತಾಗಿದೆ. ಈ ನಡುವೆ, ಆತ ಕೊಟ್ಟ ಹಣ ಮರಳಿಸಲು ಸಿದ್ಧನಿದ್ದೇನೆ ಎಂದು ಟೇಲರ್​ ಹೇಳಿದ್ದಾನೆ.

    ವರ್ಷಾನುಗಟ್ಟಲೇ ಸಿಗಲಿದೆ ಕೋವಿಡ್​ನಿಂದ ರಕ್ಷಣೆ; ಆಕ್ಸ್​ಫರ್ಡ್​ ಲಸಿಕೆ ಹುಟ್ಟಿಸಿದೆ ಹೊಸ ಭರವಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts