More

    ‘ಮುಸುಕು ತೆಗೆದು ಆಖಾಡಕ್ಕೆ ಇಳಿಯಿರಿ…ನೇರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ’ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ಗೆ ಭೀಮ್ ಆರ್ಮಿ ಮುಖ್ಯಸ್ಥನಿಂದ ಸವಾಲು

    ನಾಗ್ಪುರ: ಮನುವಾದಿ ಸಿದ್ಧಾಂತವನ್ನು ಒಳಗೊಂಡಿರುವ ಸಂಘಪರಿವಾರಕ್ಕೆ ಈ ದೇಶದ ಜನರ ಬೆಂಬಲ ಎಷ್ಟರಮಟ್ಟಿಗೆ ಇದೆ ಎಂಬುದನ್ನು ನೋಡಬೇಕಂದರೆ ನೀವು ಚುನಾವಣೆಯಲ್ಲಿ ಸ್ಪರ್ಧಿಸಿ ಎಂದು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರು ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ ಅವರಿಗೆ ಸವಾಲು ಹಾಕಿದ್ದಾರೆ.

    ನಾಗ್ಪುರ​ದ ರೇಶಿಂಬಾಗ್ ಮೈದಾನದಲ್ಲಿ ನಡೆದ ಸಭೆಯಲ್ಲಿ ಭೀಮ್​ ಆರ್ಮಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್​ಪಿಆರ್​), ರಾಷ್ಟ್ರೀಯ ಪೌರತ್ವ ಕಾಯ್ದೆ (ಎನ್​ಆರ್​ಸಿ)ಗಳೆಲ್ಲವೂ ಆರ್​ಎಸ್​ಎಸ್​ನ ಕಾರ್ಯಸೂಚಿಗಳು ಎಂದು ಹೇಳಿದರು.

    ಆರ್​ಎಸ್​ಎಸ್​ ಮುಖ್ಯಸ್ಥರಿಗೆ ನಾನೊಂದು ಸಲಹೆ ನೀಡುತ್ತೇನೆ. ನೀವು ಹಾಕಿಕೊಂಡಿರುವ ಸುಳ್ಳುಗಳ ಮುಸುಕನ್ನು ತೆಗೆದು ಆಖಾಡಕ್ಕೆ ಇಳಿಯಿರಿ. ಇದು ಪ್ರಜಾಪ್ರಭುತ್ವ. ನೀವು ನಿಮ್ಮದೇ ಸಿದ್ಧಾಂತಗಳನ್ನು ಮುಂದಿಟ್ಟುಕೊಂಡು ನೇರವಾಗಿ ಚುನಾವಣೆಗೆ ಇಳಿಯಿರಿ. ಜನರೇ ಎಲ್ಲದಕ್ಕೂ ಉತ್ತರಿಸುತ್ತಾರೆ. ಮನುಸ್ಮೃತಿ ಬೇಕೋ, ಸಂವಿಧಾನ ಬೇಕೋ ಎಂದು ಅವರೇ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಚಂದ್ರಶೇಖರ್​ ಆಜಾದ್​ ಹೇಳಿದರು. ಹಾಗೇ ಮೀಸಲಾತಿ ಬಗ್ಗೆ ಚರ್ಚೆಗೆ ಬರುವಂತೆ ಆಹ್ವಾನಿಸಿದರು.

    ಸಿಎಎ ವಿರೋಧಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಭೀಮ್​ ಆರ್ಮಿ ಮುಖ್ಯಸ್ಥ ಚಂದ್ರಶೇಖರ್​ ಆಜಾದ್​ ಅವರನ್ನು ಈಗಾಗಲೇ ಎರಡು ಬಾರಿ ಪೊಲೀಸರು ಬಂಧಿಸಿದ್ದರು. ನಾಗ್ಪುರದಲ್ಲಿ ಭೀಮ್​ ಆರ್ಮಿ ಕಾರ್ಯಕರ್ತರ ಸಭೆ ನಡೆಸಲು ಬಾಂಬೆ ಹೈಕೋರ್ಟ್​ನ ನಾಗ್ಪುರ ಪೀಠ ಕೆಲವು ಷರತ್ತುಗಳನ್ನು ವಿಧಿಸಿ ಅನುಮತಿ ನೀಡಿತ್ತು.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts