More

    ವಿಚಾರಣೆಗೆ ಬಾರದೆ ಭವಾನಿ ಕಾರು ಚಾಲಕ ನಾಪತ್ತೆ ?

    ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ ಅವರ ಕಾರು ಚಾಲಕ ಎಸ್‌ಐಟಿ ವಿಚಾರಣೆಗೆ ಹಾಜರಾಗದೆ ನಾಪತ್ತೆಯಾಗಿದ್ದಾನೆ.

    ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಶಾಸಕ ಎಚ್.ಡಿ ರೇವಣ್ಣ ಪತ್ನಿ ಭವಾನಿ ಅವರ ಕಾರು ಚಾಲಕ ಅಜಿತ್‌ಗೆ ಎರಡು ಬಾರಿ ಎಸ್‌ಐಟಿ ನೋಟಿಸ್ ಜಾರಿಗೊಳಿಸಿತ್ತು. ತಲೆಮರೆಸಿಕೊಂಡಿರುವ ಅಜಿತ್ ಪತ್ತೆಗೆ ಹಾಸನ, ಮಂಡ್ಯ ಮತ್ತು ಮೈಸೂರು ಸೇರಿ ಇತರೆಡೆ ಎಸ್‌ಐಟಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.

    ಹೊಳೆನರಸೀಪುರ ತಾಲೂಕಿನ ಅಜಿತ್ ಮನೆಗೆ ಎಸ್‌ಐಟಿ ಅಧಿಕಾರಿಗಳು ನೋಟಿಸ್ ಅಂಟಿಸಿದ್ದರು. ಇನ್ನೊಂದೆಡೆ ಕುಟುಂಬ ಸದಸ್ಯರ ಮೂಲಕ ಸಣಪರ್ಕಿಸುವ ಪ್ರಯತ್ನ ವಿಫಲವಾಗಿದೆ. ಕಾರು ಚಾಲಕನ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಿ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಭವಾನಿ ಕೂಡ ನಾಪತ್ತೆ?

    ಪ್ರಕರಣದ ಬಳಿಕ ಭವಾನಿ ರೇವಣ್ಣ ಕೂಡ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ. ವಿಚಾರಣೆಗೆ ಹಾಜರಾಗುವಂತೆ ಭವಾನಿ ಅವರಿಗೂ ಎಸ್‌ಐಟಿ ನೋಟಿಸ್ ಜಾರಿಗೊಳಿಸಿದ್ದರೂ ಪ್ರತಿಕ್ರಿಯಿಸಿಲ್ಲ. ಕಾರು ಚಾಲಕ ಕಣ್ಮರೆ ಬೆನ್ನಲ್ಲೇ ಭವಾನಿ ಕೂಡ ತೆರೆಮರೆಗೆ ಸರಿದಿರುವುದು ಒಗಟಾಗಿದೆ. ಸಂತ್ರಸ್ತೆಯರ ಮೇಲೆ ದೂರು ದಾಖಲಿಸದಂತೆ ಭವಾನಿ ಪ್ರಭಾವ ಬೀರುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts